ಸ್ಥಳಾವಕಾಶಕ್ಕಾಗಿ ತಳ್ಳುಗಾಡಿ ವ್ಯಾಪಾರಸ್ಥರ ಪ್ರತಿಭಟನೆ

ದಾವಣಗೆರೆ:

      ತಳ್ಳುಗಾಡಿ ವ್ಯಾಪಾರಸ್ಥರಿಗೆ ಕೃಷಿ ಉತ್ಪನ್ನ ಮಾರುಕಟೆಯಲ್ಲಿ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ದಾವಣಗೆರೆ ನಗರ ಸಂಚಾರಿ ತರಕಾರಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

      ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ತಳ್ಳುಗಾಡಿ ವ್ಯಾಪಾರಸ್ಥರು, ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದಾವಣಗೆರೆಯಲ್ಲಿ ಅಂದಾಜು 3 ದಶಕಗಳಿಂದ ತಳ್ಳುವ ಗಾಡಿಯಲ್ಲಿ ವಿವಿಧ ಬೀದಿಗಳಲ್ಲಿ ಸುತ್ತಾಡಿ, ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಬೆಳಗ್ಗೆಯಿಂದ ಸಂಜೆವರೆಗೆ ಮಳೆಗಾಳಿ, ಬಿಸಿಲು ಲೆಕ್ಕಿಸದೇ ವ್ಯಾಪಾರ ಮಾಡಿದರೂ 200ರಿಂದ 300 ರೂ. ಸಂಪಾದಿಸುವುದು ಸಹ ಅತ್ಯಂತ ಕಷ್ಟದಾಯಕವಾಗಿದೆ ಎಂದು ಅಲವತ್ತುಕೊಂಡರು.
ಜಿಲ್ಲಾಧಿಕಾರಿಗಳು ತಕ್ಷಣವೇ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಪರಿಹಾರ ನೀಡಬೇಕು.

       ಆಶ್ರಯ ಮನೆ ಯೋಜನೆ ಅಡಿ ಮನೆ ನಿರ್ಮಿಸಿಕೊಡಬೇಕು. ಆರೋಗ್ಯ ಸೌಲಭ್ಯ ಒದಗಿಸಬೇಕು. ವ್ಯಾಪಾರ ಮಾಡಲು ಎಪಿಎಂಸಿಯಲ್ಲಿ ಸೂಕ್ತ ಜಾಗ ಕಲ್ಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಅಧ್ಯಕ್ಷ ಎಸ್.ದುಗ್ಗಪ್ಪ, ಸಂಘಟನೆಯ ಕಾರ್ಯದರ್ಶಿ ಎಚ್.ಸಿ.ಮಲ್ಲಪ್ಪ, ಪದಾಧಿಕಾರಿಗಳಾದ ಬಿ.ಪ್ರಕಾಶ್, ಜೆ.ಬಿ.ಮಹಮ್ಮದ್ ಅಲಿ, ನಾಗರಾಜ್, ಬಳ್ಳಾರಿ ಪರಮೇಶಿ, ಮಹಾಂತೇಶ್, ರವಿ ಸೊಪ್ಪಿನ ಗಾಡಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link