ಭಾರಿ ಮಳೆಗೆ ಕುಸಿದ ರಸ್ತೆ..!

ಹರಪನಹಳ್ಳಿ

   ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ 234 ಮನೆಗಳಿಗೆ ಹಾನಿ, ಈರುಳ್ಳಿ ಸೇರಿದಂತೆ ಸಾವಿರಾರು ಎಕರೆ ಬೆಳೆಗಳು ಜಲಾವೃತಗೊಂಡು ಬೆಳೆ ಹಾನಿ ಸಂಭವಿಸಿದೆ.

   ಪಟ್ಟಣದಿಂದ ದಡಗಾರನಹಳ್ಳಿಗೆ ಹೋಗುವ ರಸ್ತೆಯು ಮಳೆ ನೀರಿನ ಅರ್ಭಟಕ್ಕೆ ಅರ್ಧ ಕೊಚ್ಚಿಹೋಗಿದ್ದು ಉಳಿದ ಅರ್ಧದ ರಸ್ತೆಯಲ್ಲಿ ರಂದ್ರ ಕೊರೆದು ಹರಿದು ಹÉೂೀಗುತ್ತಿದೆ. ಹಲುವಾಗಲು ಗರ್ಭಗುಡಿ ಮಧ್ಯ ರಸ್ತೆ ಜಲಾವ್ಥತಗೊಂಡಿದೆ. ಬೈರಾಪುರ ರಸ್ತೆ ಕುಸಿದಿದ್ದು ಸಂಚಾರಕ್ಕೆ ಅಡಚನೆಯಾಗಿದೆ. ಬೆಣ್ಣಿಹಳ್ಳಿ ಗ್ರಾಮದಲ್ಲಿ ಚರಂಡಿಗಳು ನಿರ್ವಹಣೆ ಇಲ್ಲದೇ ಹೂಳು ತುಂಬಿದ ಪರಿಣಾಮ ಮಳೆ ನೀರು ಮನೆಗಳಿಗೆ ನುಗ್ಗಿದೆ.

   ಉಚ್ಚಂಗಿದುರ್ಗದಲ್ಲಿ -4 ಮನೆಗಳು, ತೌಡೂರು -5, ಚೆಟ್ನಿಹಳ್ಳಿ -3, ಮಾದಿಹಳ್ಳಿ -2, ನೀಲಗುಂದ -13, ಬಾಗಳಿ -2, ಶೃಂಗಾರತೋಟ -2, ಅರೇಬಸ್ಸಾಪುರ -5, ಕೂಲಹಳ್ಳಿ -5, ಮಾಡ್ಲಗೇರಿ -12, ಮಾಡ್ಲಗೇರಿ ತಾಂಡ-3, ಹಿರೇಮೇಗಳಗೇರಿ -2, ಪುಣಭಗಟ್ಟ -1, ಸಾಸ್ವಿಹಳ್ಳಿ – 4, ನಂದಿಬೇವೂರು 6, ಮತ್ತಿಹಳ್ಳಿ -30, ಬೆಣ್ಣಿಹಳ್ಳಿ -40, ಕಣವಿಹಳ್ಳಿ -2, ಕೊಂಗನಹೊಸೂರು -2, ನಂದಿಬೇವೂರು ತಾಂಡ -1, ಮೈದೂರು -23,ಚಿಗಟೇರಿ -12, ಮುತ್ತಿಗೆ -2, ನಿಲುವಂಜಿ-2, ಕುಮಾರನಹಳ್ಳಿ -5, ಬಸ್ಸಾಪುರ ತಾಂಡ-1, ಹಿಕ್ಕಿಗೇರಿ -3, ಕನಕನ ಬಸ್ಸಾಪುರ -2, ದ್ಯಾಪನಾಯಕನಹಳ್ಳಿ -2, ಯಡಿಹಳ್ಳಿ -4, ಬಾಪೂಜಿ ನಗರ -4, ಹರಪನಹಳ್ಳಿ ಹೋಬಳಿ -6, ತೆಲಿಗಿ -16, ಹಳ್ಳಿಕೇರಿ -5, ಸಿಂಗ್ರಿಹಳ್ಳಿ -1 ಹೀಗೆ 234 ಮನೆಗಳು ಬಾಗಶಃ ಜಖಂಗೊಂಡಿವೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

    ಅರೆಬಸ್ಸಾಪುರ, ಲಕ್ಷ್ಮೀಪುರ ಭಾಗದಲ್ಲಿ ಅಂದಾಜು 300 ಎಕರೆ ಬೆಳೆ ಹಾನಿ ಸಂಭವಿಸಿದೆ, ಸಾಸ್ವಿಹಳ್ಳಿಯಲ್ಲಿ 2 ಕುರಿಗಳು ಸಿಡಿಲು ಬಡಿದು ಸಾವನ್ನಪ್ಪಿವೆ. ಮತ್ತಿಹಳ್ಳಿಯಲ್ಲಿ ಸಿಡಿಲು ಬಡಿದು ಆಕಳು ಸಾವನ್ನಪ್ಪಿದೆ.

    ಚಿಗಟೇರಿ ಹೋಬಳಿಯಲ್ಲಿ ನೂರಾರು ಎಕರೆ ಈರುಳ್ಳಿ ಬೆಳೆ ಜಲಾವೃತಗೊಂಡಿದ್ದು, ಈರುಳ್ಳಿ ಬೆಳೆಗಾರರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ ಹಾಗೂ ಶೇಂಗ ಬೆಳೆಗಳು ಸಹ ಜಲಾವೃತಗೊಂಡಿವೆ. ಬೆಳೆ ಹಾನಿಯ ಸರ್ವೆ ಕಾರ್ಯ ನಡೆದಿದೆ ಎಂದು ತೋಟಗಾರಿಕೆ ಹಾಗೂ ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap