ಕೊಟ್ಟ ಕಾಲೋನಿಯ ರಸ್ತೆ ದುರಸ್ಥಿಗೆ ಆಗ್ರಹ

ಶಿರಾ:

     ಕೊಟ್ಟ ಗ್ರಾಮದ ಎಸ್.ಸಿ. ಕಾಲೋನಿಯಿಂದ ಓಜುಗುಂಟೆಗೆ ಹೋಗುವ ಮದ್ಯದ ರಸ್ತೆಯು ಹದಗೆಟ್ಟು ಹಲವು ವರ್ಷಗಳೇ ಆಗಿದ್ದರೂ ಇಲ್ಲಿನ ಗ್ರಾಮ ಪಂಚಾಯ್ತಿಯಾಗಲಿ ಇಲ್ಲವೇ ಲೋಕೋಪಯೋಗಿ ಇಲಾಖೆಯಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

     ಕೊಟ್ಟ ಗ್ರಾಮದ ಈ ಎಸ್.ಸಿ. ಕಾಲೋನಿಯಲ್ಲಿ ಹಲವು ಕುಟುಂಬಗಳು ವಾಸವಿದ್ದು ಕಾಲೋನಿಗೆ ಹೋಗಬೇಕಾದರೆ ಇದೇ ರಸ್ತೆಯಿಂದ ಹಾದು ಹೋಗಬೇಕಿದೆ. ಸದರಿ ರಸ್ತೆಯು ಸಿಮೆಂಟ್ ರಸ್ತೆಯನ್ನಾಗಲಿ ಡಾಂಬರ್ ರಸ್ತೆಯನ್ನಾಗಲಿ ಕಂಡಿಲ್ಲವಾದ್ದರಿಂದ ಮಳೆ ಬಂದರೆ ಇಡೀ ರಸ್ತೆಯು ಕೆಸರು ಗದ್ದೆಯಾಗುತ್ತಿದ್ದು ಸಾರ್ವಜನಿಕರ ಓಡಾಟಕ್ಕೂ ಯೋಗ್ಯವಿಲ್ಲದಂತಾಗಿದ್ದು ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link