ಚಳ್ಳಕೆರೆ
ನಗರದ ಬಹುತೇಕ ವಾರ್ಡ್‍ಗಳಲ್ಲಿ ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪ್ರತಿಲ್ಲಿದ್ದು, ಈಗಾಗಲೇ ಶೇ.80ಕ್ಕೂ ಹೆಚ್ಚು ರಸ್ತೆಗಳನ್ನು ಡಾಂಬರೀಕರಣ ಗೊಳಿಸಲಾಗಿದೆ ಎಂದು ಪೌರಾಯುಕ್ತ ಜೆ.ಟಿ.ಹನುಮಂತರಾಜು ತಿಳಿಸಿದ್ದಾರೆ.
ಅವರು, ಸೋಮವಾರ ನಗರದ ಬಳ್ಳಾರಿ ರಸ್ತೆಯಿಂದ ಹಳೇಟೌನ್, ಪಾದಗಟ್ಟೆ ಮೂಲಕ ಕಾಟಪ್ಪನಹಟ್ಟಿ ಲಿಂಕ್ ರಸ್ತೆಯ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕಳೆದ ಕೌನ್ಸಿಲ್ ಅವಧಿಯಲ್ಲೇ ಮಂಜೂರಾದ ರಸ್ತೆಗಳನ್ನು ಡಾಂಬರೀಕರಣಗೊಳಿಸಲಾಗುತ್ತಿದೆ.
ಈಗಾಗಲೇ ಬಹುತೇಕ ರಸ್ತೆಗಳನ್ನು ಡಾಂಬರೀಕರಣಗೊಳಿಸುವ ಹಿನ್ನೆಲೆಯಲ್ಲಿ ಈ ಹಿಂದೆಯೇ ಗುರುತಿಸಿದ್ದು, ಮಂಜೂರಾತಿ ಪಡೆದ ರಸ್ತೆಗಳ ಡಾಂಬರೀಕರಣ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಈಗಾಗಲೇ ಗುತ್ತಿಗೆದಾರರಿಗೂ ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಕಳಪೆ ಕಾಮಗಾರಿಯಾಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ.
ವಾರ್ಡ್‍ನ ನಗರಸಭಾ ಸದಸ್ಯ ಆರ್.ರುದ್ರನಾಯಕ ಮಾತನಾಡಿ, ಸಾರ್ವಜನಿಕರಿಗೆ ಉಪಯುಕ್ತವಾಗುವ ರಸ್ತೆಗಳ ಡಾಂಬರೀಕರಣ ಕಾಮಗಾರಿ ಚಾಲ್ತಿಯಲ್ಲಿದೆ. ಪ್ರಸ್ತುತ ಹಳೇಟೌನ್‍ನಿನ ಈ ರಸ್ತೆ ಡಾಂಬರೀಕರಣ ಅವಶ್ಯವಿದ್ದು, ಇಲ್ಲಿ ಶ್ರೀವೀರಭದ್ರಸ್ವಾಮಿ ದೇವಸ್ಥಾನ, ಶ್ರೀರಾಮಮಂದಿರ, ಶ್ರೀಪೇಟೆ ಆಂಜನೇಯಸ್ವಾಮಿ ದೇವಸ್ಥಾನ, ಪಾದಗಟ್ಟೆ ಮೂಲಕ ಕಾಟಪ್ಪನಹಟ್ಟಿಯ ಎರಡೂ ದೇವಸ್ಥಾನಗಳಿಗೆ ಜನರು ಹೆಚ್ಚು ಸಂಚರಿಸುತ್ತಾರೆ.
ಪ್ರತಿವರ್ಷ ನಡೆಯುವ ಶ್ರೀವೀರಭದ್ರಸ್ವಾಮಿ ಜಾತ್ರೆ ಸಂದರ್ಭದಲ್ಲಿ ದೇವರ ರಥ ಚಲಿಸಲು ತೊಂದರೆಯಾಗುತ್ತಿದ್ದು, ಈ ಬಗ್ಗೆ ಸಾರ್ವಜನಿಕರೂ ಸಹ ಅಸಮದಾನ ವ್ಯಕ್ತ ಪಡಿಸಿದ್ದು, ನಗರಸಭೆ ಈ ಕಾಮಗಾರಿಯನ್ನು ಕೈಗೊಳ್ಳುವ ಮೂಲಕ ಸಾವಿರಾರು ಭಕ್ತರಿಗೆ ಸಂತಸವನ್ನುಂಟು ಮಾಡಿದೆ. ನಗರಸಭೆ ಕೈಗೊಂಡಿರುವ ರಸ್ತೆ ಡಾಂಬರೀಕರಣ, ಕಾಮಗಾರಿ ತೃಪ್ತಿಕರವಾಗಿದ್ದು, ನಗರದ ತುಂಬಾ ದ್ವಿಚಕ್ರ ಮತ್ತು ಆಟೋರಿಕ್ಷಾ ವಾಹನಗಳ ಸಂಖ್ಯೆ ಹೆಚ್ಚಿದ್ದು, ಅಪಘಾತಗಳನ್ನು ನಿಯಂತ್ರಿಸಲು ಹಂಪ್ಸ್‍ಗಳನ್ನು ನಿರ್ಮಿಸುವಂತೆ ಪೌರಾಯುಕ್ತರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನಯ್ ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ