ತಿಪಟೂರು
ದಾವಣಗೆರೆಯಿಂದ ಅಕ್ಕಿಯನ್ನು ತುರುವೇಕೆರೆಯ ಎಸ್.ಎಲ್.ಆರ್. ಮಿಲ್‍ಗೆ ಪಾಲಿಷ್ ಮಾಡಿಸಲು ಸಾಗಿಸುತ್ತಿದ್ದ ಕೆ.ಎ17. ಸಿ 4791 ವಾಹನವು ತಾಲ್ಲೂಕಿನ ನೊಣವಿನಕೆರೆ ಹೋಬಳಿ ಆಲ್ಬೂರು ಗ್ರಾಮದ ಹತ್ತಿರ ಕ್ಯಾಂಟರ್ ಪಲ್ಟಿಯಾಗಿದ್ದು ಇದರಲ್ಲಿದ್ದ ಅಕ್ಕಿಯು ಅನ್ನಭಾಗ್ಯದ್ದು ಎಂದು ಸಾರ್ವಜನಿಕರಿಂದ ದೂರನ್ನು ಆಲಿಸಿ ಉಪವಿಭಾಗಾಧಿಕಾರಿ ಪೂವಿತ ತುರುವೇಕೆರೆಯ ಎಸ್.ಎಲ್.ಆರ್ ಮಿಲ್ ಪರಿಶೀಲಿಸಿದಾಗ ಲೆಕ್ಕವಿಲ್ಲದ ಅಕ್ಕಿಯು ಕಂಡುಬಂದಿದೆ. ಆದ್ದರಿಂದ ಅತ್ಯಗತ್ಯ ಸರಕುಗಳ ಕಾಯಿದೆ, ಮೋಟಾರು ವಾಹನಗಳ ಕಾಯಿದೆ ಮತ್ತು ಇತರ ಎಲ್ಲಾ ವಿಮೋಚನಾ ಚಟುವಟಿಕೆಗಳ ಅಡಿಯಲ್ಲಿ ಪ್ರಕರಣ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ನಂ519/279ಐ.ಪಿ.ಸಿ ದಾಖಲಾಗಿ ತನಿಖೆ ಮುಂದುವರೆದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
