ಚಿಕ್ಕನಾಯಕನಹಳ್ಳಿ :

ತಾಲ್ಲೂಕಿನಲ್ಲಿ ಸುರಿದ ಗಾಳಿ-ಮಳೆಯಿಂದಾಗಿ 40ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ, 30ಕ್ಕೂ ಹೆಚ್ಚು ಮರಗಳು ರಸ್ತೆಗಳ ಮೇಲೆ ನೆಲಕ್ಕಪ್ಪಳಿಸಿವೆ, ಇನ್ನೂ ಕೆಲ ಮನೆಯ ಮೇಲ್ಭಾಗದ ಛಾವಣಿಗಳಂತೂ ಹಾರು ಹೋಗಿವೆ.
ಪಟ್ಟಣದ ಹೊರವಲಯದ ಭಾಗದಲ್ಲಿ ಆಲದಕಟ್ಟೆ ಯಿಂದ ಮುದ್ದೇನಹಳ್ಳಿ ಹಾಗೂ ಮೇಲನಹಳ್ಳಿ, ರಾಯಪ್ಪನಪಾಳ್ಯ, ಕುಪ್ಪೂರು ರಸ್ತೆ ಭಾಗದಲ್ಲಿ ಬೃಹತ್ ಗಾತ್ರದ ಮರಗಳು ಜೋರು ಗಾಳಿ ಮಳೆಯಿಂದ ಬಿದ್ದಿವೆ. ಮರಗಳು ನೆಲಕ್ಕಪ್ಪಳಿಸಿದ್ದರಿಂದ ಸಮೀಪದಲ್ಲೇ ಇದ್ದಂತಹ ವಿದ್ಯುತ್ ವೈರ್, ಕಂಬಗಳು ಮರಗಳ ಜೊತೆ ಕಂಬಗಳೂ ಬಿದ್ದ ಪರಿಣಾಮ ಕೆಲವು ಭಾಗಗಳಲ್ಲಿ ರಾತ್ರಿ ಪೂರ್ತಿ ವಿದ್ಯುತ್ ಇಲ್ಲದಂತಾಗಿತ್ತು.
ಪಟ್ಟಣದ ಹೊರವಲಯದ ಶ್ಯಾವಿಗೆಹಳ್ಳಿಯ ನಾರಾಯಣಸ್ವಾಮಿಯವರ ಸರ್ವೆ ನಂ. 49ರಲ್ಲಿನ 20ಕ್ಕೂ ಹೆಚ್ಚು ಅಡಿಕೆ ಮರ, 5 ತ್ಯಾಗ ಹಾಗೂ ತೆಂಗು ಹಾಗೂ ಮನೆಯೊಂದರ ಮೇಲ್ಭಾಗದ ಛಾವಣಿ ಗಾಳಿಗೆ ಹಾರಿಹೋಗಿದ್ದು 1ಲಕ್ಷಕ್ಕೂ ಹೆಚ್ಚು ಹಾನಿಯುಂಟಾಗಿದೆ ಎನ್ನಲಾಗಿದೆ.
ಸಾವಶೆಟ್ಟಿಹಳ್ಳಿ ಭಾಗದಲ್ಲಿಯೂ 20ಕ್ಕೂ ಹೆಚ್ಚು ತೆಂಗು ಮರ, ತೋಟದಲ್ಲಿ ಇರುವ ಶೆಡ್ , ಛಾವಣಿ, ಹಾಗೂ ಟ್ರಾನ್ಸ್ ಫಾರಂ ಸಹ ಹಾಳಾಗಿದೆ, ಹಾಗೂ ಶೆಟ್ಟಿಕೆರೆ ಬಳಿಯ ಮಾಕುವಳ್ಳಿ ಪಾಳ್ಯದ ತೋಟದಲ್ಲಿ ಅಡಿಕೆ, ತೆಂಗಿನ ಮರಗಳು ಬಿದ್ದು ರೈತನಿಗೆ ಸಾವಿರಾರು ರೂ. ನಷ್ಠವುಂಟಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








