ಕುಣಿಗಲ್:
ಪಟ್ಟಣದ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಕಚೇರಿಯಲ್ಲಿ ವಿದ್ಯುತ್ ಅವಘಡದಿಂದ (ಶಾರ್ಟ್‍ಸೆಕ್ರ್ಯೂಟ್)ನಿಂದ ಕಂಪ್ಯೂಟರ್ ಸೇರಿಂದೆ ಡಿವಿಆರ್, ಪೀಠೋಪಕರಣಗಳು ಸುಟ್ಟುಕರುಕಲಾಗಿದ್ದು ಲಕ್ಷಕ್ಕಿಂತಲೂ ಹೆಚ್ಚು ನಷ್ಟಸಂಭವಿಸಿದೆ.
ಕಳೆದ ರಾತ್ರಿ ಎಂದಿನಂತೆ ಇಲ್ಲಿನ ಕಚೇರಿ ಸಿಬ್ಬಂದಿಗಳು ಬೀಗ ಹಾಕಿಕೊಂಡು ಹೋಗಿದ್ದಾರೆ. ಭಾನುವಾರ ಬೆಳಿಗ್ಗೆ ಬೆಂಕಿ ಮತ್ತು ಹೊಗೆ ಆವರಿಸಿದ್ದರಿಂದ ಸಾರ್ವಜನಿಕರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸುವ ಮೂಲಕ ಹೆಚ್ಚಿನ ಅನಾಹುತವನ್ನ ತಪ್ಪಿಸಿದ್ದಾರೆ.
ಪ್ರಾಂಶುಪಾಲರಾದ ಗೋಪಾಲ್ ಮರಕಲ್ ಮಾತನಾಡಿ ನಾನು ಇತ್ತೀಚೆಗೆ ಇಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಈ ಕಟ್ಟಡ ಹಳೆಯದಾಗಿದ್ದು ವೈರಿಂಗ್ ಸಮರ್ಪಕವಾಗಿಲ್ಲದ ಕಾರಣ ಇಂತಹ ಘಟನೆ ಸಂಭವಿಸಿದೆ ಇಲ್ಲಿ ಇದ್ದ ಕಂಪ್ಯೂಟರ್, ಡಿವಿಆರ್, ಮಾನೀಟರ್, ಪ್ರಿಂಟರ್, ಪೀಟೋಪಕರಣಗಳು ಸುಟ್ಟುಕರುಕಲಾಗಿದ್ದು ಈ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ನೀಡುವುದಾಗಿ ತಿಳಿಸಿದ ಅವರು ಲಕ್ಷಕ್ಕಿಂತಲೂ ಹೆಚ್ಚು ನಷ್ಟ ಸಂಭವಿಸಿದೆ ಎಂದರು.ಸುದ್ದಿ ತಿಳಿದ ಶಾಸಕ ಡಾ.ರಂಗನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಪುರಸಭಾ ಸದಸ್ಯೆ ಸರಸ್ವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.