ರಾಜ್ಯ ಹಜ್ ಸಮಿತಿಯಿಂದ ರೋಷನ್ ಬೇಗ್ ಔಟ್..!

ಬೆಂಗಳೂರು

     ರಾಜ್ಯ ಹಜ್ ಸಮಿತಿಗೆ ನೂತನ ಸದಸ್ಯರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದ್ದು ಸಮಿತಿಯಿಂದ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಕೈಬಿಡಲಾಗಿದೆ.

     ಇದರಿಂದ ರಾಜ್ಯ ಹಜ್ ಸಮಿತಿಗೆ ಮತ್ತೊಂದು ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲು ರೋಷನ್ ಬೇಗ್ ನಡೆಸಿದ ಪ್ರಯತ್ನ ವಿಫಲವಾಗಿದೆ2017ರ ಜನವರಿ 19ರಂದು ರಚಿಸಲಾಗಿದ್ದ ಹಜ್ ಸಮಿತಿಯ ಅವಧಿಯು ಪ್ರಸಕ್ತ ಸಾಲಿನ ಜ.18ರಂದು ಅಂತ್ಯಗೊಂಡಿದೆ.

     ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿಯನ್ನು ಟೀಕಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದ ರೋಷನ್ ಬೇಗ್ ಪರವಾಗಿ ಬಿಜೆಪಿ ಹೈಕಮಾಂಡ್ ಒಲವು ತೋರಲಿಲ್ಲ. ಅಲ್ಲದೇ, ಉಪ ಚುನಾವಣೆಯಲ್ಲೂ ಟಿಕೆಟ್ ನೀಡಿರಲಿಲ್ಲ.

ಯಾರು ಹೊಸಸದಸ್ಯರು:

     ಹಜ್ ಸಮಿತಿಯ ನೂತನ ಸದಸ್ಯರನ್ನಾಗಿ ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಶಾಸಕಿ ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಗ್ರಾಮ ಪಂಚಾಯತ್ ಸದಸ್ಯರಾದ ಎಂ.ಡಿ.ನಯೀಮ್(ಬೀದರ್), ಡಾ.ಮುಹಮ್ಮದ್ ಕಬೀರ್ ಅಹ್ಮದ್(ಬೆಂಗಳೂರು), ಪಟ್ಟಣ ಪಂಚಾಯತ್ ಸದಸ್ಯೆ ರುಖಯ್ಯೆ ಬೇಗಂ(ಯಾದಗಿರಿ).

     ಧಾರ್ಮಿಕ ಮುಖಂಡರಾದ ಮಂಗಳೂರಿನ ಎ.ಬಿ.ಮುಹಮ್ಮದ್ ಹನೀಫ್ ಅಸೈ(ಸುನ್ನಿ), ರಾಯಚೂರಿನ ಮೌಲಾನ ಹಫೀಜ್ ಮುಹಮ್ಮದ್ ರಫಿಕ್(ಸುನ್ನಿ), ಬೆಂಗಳೂರಿನ ಸಯ್ಯದ್ ಮನ್ಝೂರ್ ರಝಾ(ಶಿಯಾ), ಸಮಾಜ ಸೇವಕರಾದ ಖುಸ್ರೋ ಖುರೇಷಿ, ರವೂಫುದ್ದೀನ್ ಕಚೇರಿವಾಲೆ.

      ರಹ್ಮತ್ ಉಲ್ಲಾ, ಚಾಂದ್ ಪಾಷ, ಮೊಹಿದ್ದೀನ್, ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಉಪ ಕಾರ್ಯದರ್ಶಿ ವೈ.ಎಸ್.ದಳವಾಯಿ ಅಧಿಸೂಚನೆ ಹೊರಡಿಸಿದ್ದಾರೆ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link