ಹಿರಿಯೂರು:
ರೋಟರಿ ಸಂಸ್ಥೆಯಿಂದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ ಆಚರಣೆ ಅಂಗವಾಗಿ ನಗರದ ಸೀನಿಯರ್ ಇಂಜಿನಿಯರ್‍ಗಳಾದ ಎಚ್.ಪಿ.ಗೋಪಿನಾಥ್, ಎಂ.ಯು.ಶಿವರಾಮ್, ಆರ್.ವಸಂತ್‍ಕುಮಾರ್, ಆರಾದ್ಯ, ನವೀನ್‍ಜೈನ್ ಹಾಗೂ ಮಧುಸೂದನ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಚ್.ಪಿ.ಗೋಪಿನಾಥ್ ಅವರು, ವಿಶ್ವೇಶ್ವರಯ್ಯನವರು ಬಹುಮುಖ ಪ್ರತಿಭೆಯಾಗಿದ್ದು, ಅಸಾಮಾನ್ಯ ತಂತ್ರಜ್ಞರಾಗಿದ್ದರು. ಅವರೊಬ್ಬ ನೈಜ ರಾಷ್ಟ್ರ ನಿರ್ಮಾಪಕ ಅಲ್ಲದೆ ಹಿರಿಯೂರಿನ ವಾಣಿವಿಲಾಸ ಸಾಗರ ನಿರ್ಮಾಣದಲ್ಲಿ ಅವರ ತಂತ್ರಜ್ಞಾನವಿದೆ ಎಂದು ಬಣ್ಣಿಸಿದರು
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯೂರು ರೋಟರಿ ಸಂಸ್ಥೆ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಅಭಿಯಂತರರ ಪಾತ್ರ ಬಹುದೊಡ್ಡದು, ಇಂದು ಅಭಿಯಂತರರಿಂದಾಗಿ ಭಾರತವು ತಂತ್ರಜ್ಞಾನದಲ್ಲಿ ಎಲ್ಲ ದೇಶಗಳಿಗಿಂತ ಮುಂದಿರುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿಗಳಾದ ಹೆಚ್.ವೆಂಕಟೇಶ್, ಎ.ರಾಘವೇಂದ್ರ, ಆನಂದಶೆಟ್ಟಿ, ಎಚ್.ಆರ್.ಶಂಕರ್ ಇನ್ನು ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ