ಬೆಂಗಳೂರು
ಗ್ಯಾಂಗ್ ಕಟ್ಟಿಕೊಂಡು ಗಲಾಟೆ ಮಾಡಿ ಮೆರೆಯಲು ಹೋದ ರೌಡಿ ದೇವರಾಜ ಅಲಿಯಾಸ್ ದೇವುನನ್ನು ಎದುರಾಳಿ ಗ್ಯಾಂಗ್‍ನವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಜೈಲಿನಲ್ಲಿರುವ ರೌಡಿ ಸುನೀಲ್‍ಗೆ ಗೌರವ ಕೊಡದಂತೆ ಮಾತನಾಡಿದ ಕಾರಣಕ್ಕೆ ಆನೇಕಲ್‍ನ ದೇವರಾಜು (23)ನನ್ನು ಗುರುವಾರ ಅತ್ತಿಬೆಲೆಯ ಎಂ.ಮೇಡಹಳ್ಳಿ ಬಳಿಯ ಲೇಔಟ್‍ವೊಂದರಲ್ಲಿ ಎದುರಾಳಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಕೆಲ ತಿಂಗಳ ಹಿಂದೆ ಗಲಾಟೆಯೊಂದು ನಡೆದು ಕೊಲೆ ಯತ್ನದ ಕೃತ್ಯದಲ್ಲಿ ಭಾಗಿಯಾಗಿದ್ದ ದೇವರಾಜ್‍ನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು ಕೇವಲ ಒಂದೂವರೆ ತಿಂಗಳ ಹಿಂದಷ್ಟೇ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದನು.
ನಂತರ ದೇವರಾಜ್ ತನ್ನ ಪಾಡಿಗೆ ತಾನು ಇದ್ದಿದ್ದರೆ ಕೊಲೆಯಾಗುತ್ತಿರಲಿಲ್ಲ ಒಂದು ಬಾರಿ ಜೈಲಿಗೆ ಹೋಗಿ ಬಂದದ್ದನ್ನೇ ನೆಪ ಮಾಡಿಕೊಂಡು ಗ್ಯಾಂಗ್ ಕಟಿಕೊಂಡು ಅಪರಾಧ ಕೃತ್ಯಕ್ಕೆ ಇಳಿದಿದ್ದನು. ಕೆಲದಿನಗಳ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ರೌಡಿ ಸುನೀಲ್ ಸಹಚರರೊಂದಿಗೆ ಜಗಳ ಮಾಡಿಕೊಂಡಿದ್ದನು. ಸುನೀಲ್ ಜೈಲಿನಿಂದಲೇ ಫೋನ್ ಮಾಡಿ ತನ್ನ ಸಹಚರರ ತಂಟೆಗೆ ಬರದಂತೆ ತಿಳಿಸಿದ್ದನು.
ಆ ಸಂದರ್ಭದಲ್ಲಿ ದೇವರಾಜ್, ಸುನೀಲ್‍ಗೆ ಗೌರವ ಕೊಡದೆ ಮಾತನಾಡಿದ್ದನು.ಇದರಿಂದ ರೊಚ್ಚಿಗೆದ್ದ ಸುನೀಲ್ ಜೈಲಿನಿಂದಲೇ ತನ್ನ ಸಹಚರರಿಗೆ ಫೋನ್ ಮಾಡಿ ದೇವರಾಜನನ್ನು ಮುಗಿಸುವಂತೆ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ನಿನ್ನೆ ಬೆಳಗ್ಗೆ ಸುನೀಲ್‍ನ ಸಹಚರ ಮುನಿ ದೇವರಾಜನಿಗೆ ಫೋನ್ ಮಾಡಿ ಮಾತನಾಡಲು ಕರೆಸಿಕೊಂಡು ಎಂ.ಮೇಡಹಳ್ಳಿ ಬಳಿಯ ಲೇಔಟ್ ಒಂದರಲ್ಲಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಮೃತ ಸ್ನೇಹಿತ ಸುರೇಶ್ ಹೇಳಿದ್ದಾರೆ.
ಧಮ್ಕಿ ಹಾಕಿದ್ದ
ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಸುನೀಲ್ ಅಪರಾಧ ಲೋಕದಲ್ಲಿ ಹೆಸರು ಮಾಡಬೇಕೆಂದಿದ್ದ ಮೃತ ದೇವರಾಜು ಮೇಲೆ ವೈಯಕ್ತಿಕ ದ್ವೇಷ ಇಟ್ಟಿದ್ದನು. ಸುನೀಲ್‍ನ ಸಹಚರನಾದ ಮುನಿ ಹಾಗೂ ಲೋಕಿ, ದೇವರಾಜುಗೆ ಫೋನ್ ಮಾಡಿ ನಿನ್ನನ್ನು ಕೊಲೆ ಮಾಡುತ್ತೇವೆ ನಿನ್ನ ಕೈಯಲ್ಲಿ ಏನು ಆಗುತ್ತದೆ ಅದು ಮಾಡಿಕೋ ಎಂದು ಧಮ್ಕಿ ಹಾಕಿದ್ದರು. ಕೊನೆಗೆ ಲೇಔಟ್‍ಗೆ ಕರೆತಂದು ಕೊಲೆ ಮಾಡಿದ್ದಾರೆ ಎಂದು ಮೃತ ದೇವರಾಜು ಸ್ನೇಹಿತ ಹೇಳಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.
ಮೇಜರ್‍ನಿಂದ ಅತ್ಯಾಚಾರ
ಪಾರ್ಟಿಗೆ ಸ್ನೇಹಿತನ ಮನೆಗೆ ಕರೆದೊಯ್ದು ವಾಪಸಾಗುವ ವೇಳೆ ಕಾರಿನಲ್ಲಿ ಯುವತಿಯೊಬ್ಬರ ಮೇಲೆ ಮೇಜರ್ ಅತ್ಯಾಚಾರ ಮಾಡಿರುವ ಹೀನ ಕೃತ್ಯ ಹಲಸೂರು ಪೊಲೀಸ್ ಠಾಣೆ ವ್ಯಾಪ್ತಿಯ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ನಡೆದಿದೆ.
ಕಳೆದ ಫೆ.4ರಂದು ಈ ಕೃತ್ಯ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಪಾರ್ಟಿ ನೆಪದಲ್ಲಿ ಸ್ನೇಹಿತರ ಮನೆಗೆ ಕರೆದೊಯ್ದು ಪಾರ್ಟಿ ಮುಗಿಸಿಕೊಂಡು ಬರುವಾಗ ಕಾರಿನಲ್ಲೇ ಮೇಜರ್ ಅಮೀತ್ ಚೌದ್ರಿ ಅತ್ಯಾಚಾರ ಎಸಗಿದ್ದಾನೆ ಎಂದು ನೊಂದ ಯುವತಿ ಆರೋಪಿಸಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಅಮೀತರ್ ಚೌದ್ರಿಯನ್ನು ವಶಕ್ಕೆ ಪಡೆದು ತನಿಖೆ ಮಾಡಿದ್ದಾರೆ. ಈ ಪ್ರಕರಣ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಕೃತ್ಯವು ತನ್ನ ವ್ಯಾಪ್ತಿಗೆ ಬರದಿದ್ದರಿಂದ ಹಲಸೂರು ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ ಹಲಸೂರು ಪೊಲೀಸ್ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು ಪ್ರಕರಣದಲ್ಲಿ ಆರೋಪಿ ಅಮೀತ್ ಚೌದ್ರಿಗೆ ಜಾಮೀನು ದೊರೆತಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
