ರೌಡಿ ಮುನಿರಾಜು ಅರೆಸ್ಟ್…!!!

ಬೆಂಗಳೂರು

         ಲಗ್ಗೆರೆ ಸ್ಲಂನಲ್ಲಿ ಅಧಿಪತ್ಯ ಸಾಧಿಸಲು ಇಬ್ಬರು ಯುವಕರ ಮೇಲೆ ಗ್ಯಾಂಗ್ ಕಟ್ಟಿಕೊಂಡು ಮಚ್ಚು, ಲಾಂಗ್‍ಗಳಿಂದ ಹಲ್ಲೆ ನಡೆಸಿ ಸ್ಥಳೀಯರಲ್ಲಿ ಆತಂಕ ಸೃಷ್ಠಿಸಿದ್ದ ಕುಖ್ಯಾತ ರೌಡಿ ಮುನಿರಾಜ್ ಅಲಿಯಾಸ್ ಮುನ್ನನ ಕಾಲಿಗೆ ಗುಂಡು ಹೊಡೆದು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

        ಎಡಗಾಲಿಗೆ ಗುಂಡೇಟು ತಿಂದು ಗಾಯಗೊಂಡಿರುವ ಲಗ್ಗೆರೆಯ ಮುನ್ನ (23) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಆರೋಪಿಯು ಚಾಕುವಿನಿಂದ ಹಲ್ಲೆ ನಡೆಸಿದ್ದರಿಂದ ಗಾಯಗೊಂಡಿರುವ ಪೊಲೀಸ್ ಪೇದೆ ಬಸವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ.

         ಕಳೆದ ಮಾ. 26 ರಂದು ರಾತ್ರಿ 7.30ರ ವೇಳೆ ಲಗ್ಗೆರೆಯ ಮುನೇಶ್ವರ ಬ್ಲಾಕ್‍ನಲ್ಲಿ ಸಂತೋಷ್, ಸುದೀಪ್ ಮತ್ತವರ ಸ್ನೇಹಿತರು ಕ್ರಿಕೆಟ್ ಆಡಿ ಕುಳಿತ್ತಿದ್ದಾಗ ಆರೋಪಿ ಮುನಿರಾಜ ಸೇರಿ ನಾಲ್ವರು ಏಕಾಏಕಿ ಬಂದು ಏರಿಯಾದಲ್ಲಿ ಹಿಡಿತ ಸಾಧಿಸಲು ಗಲಾಟೆ ಮಾಡಿದ್ದರು.

      ಮಚ್ಚು-ಲಾಂಗ್‍ಗಳಿಂದ ಸಂತೋಷ್ ಹಾಗೂ ಸುದೀಪ್ ಮೇಲೆ ಮಚ್ಚು, ಲಾಂಗ್‍ಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಂದಿನಿ ಲೇಔಟ್ ಪೊಲೀಸ್ ಇನ್ಸ್‍ಪೆಕ್ಟರ್ ಲೋಹಿತ್ ಅವರು ಮುನ್ನನ ಬಂಧನಕ್ಕೆ ಶೋಧ ನಡೆಸಿದ್ದರು

      ಆರೋಪಿ ಮುನ್ನ, ನಂದಿನಿ ಲೇಔಟನ ಕೂಲಿ ನಗರದ ಬಳಿಯ ಬುದ್ಧ ನಗರದಲ್ಲಿ ಗುರುವಾರ ಬೆಳಿಗ್ಗೆ 6ರ ವೇಳೆ ಇರುವ ಖಚಿತ ಮಾಹಿತಿಯಾಧರಿಸಿ ಲೋಹಿತ್ ಅವರು ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡರು ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ

       ಪೊಲೀಸರ ಜೀಪನ್ನು ನೋಡಿ ಓಡ ತೊಡಗಿದ ಮುನ್ನನನ್ನು ಬೆನ್ನಟ್ಟಿ ಹಿಡಿಯಲು ಹೋದ ಪೇದೆ ಬಸವರಾಜುಗೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.ಈ ವೇಳೆ ಇನ್ಸ್‍ಪೆಕ್ಟರ್ ಲೋಹಿತ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಪೇದೆ ಬಸವರಾಜು ಮೇಲೆ ಹಲ್ಲೆಗೆ ಮುಂದಾದ ಮುನ್ನನ ಮೇಲೆ ಆತ್ಮರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದಾಗ ಅದು ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ಗಲಾಟೆಯಲ್ಲಿ ದೊಂಬಿ

       ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೇದೆ ಬಸವರಾಜ್ ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಮುನ್ನ ಮತ್ತವನ ಸಹಚರರು ಲಗ್ಗೆರೆ ಸ್ಲಂನಲ್ಲಿ ಅಧಿಪತ್ಯ ಹೊಂದಲು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದನು.

       ಮುನ್ನನ ಮೇಲೆ ನಂದಿನಿ ಲೇಔಟ್, ರಾಜಗೋಪಾಲ ನಗರ, ಮಹಾಲಕ್ಷ್ಮಿ ಲೇಔಟ್, ಸುಬ್ರಹ್ಮಣ್ಯಪುರಗಳಲ್ಲಿ ಒಟ್ಟು 9 ಅಪರಾಧ ಪ್ರಕರಣಗಳು ದಾಖಲಾಗಿವೆ ಕೊಲೆ ಯತ್ನ, ಹಲ್ಲೆ, ವಾಹನಗಳಿಗೆ ಬೆಂಕಿ, ಕಾವೇರಿ ಗಲಾಟೆಯಲ್ಲಿ ದೊಂಬಿ ನಡೆಸಿದ ಪ್ರಕರಣಗಳಲ್ಲಿ 9 ಪ್ರಕರಣಗಳು ದಾಖಲಾಗಿದ್ದು ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿ ದ್ದಾನೆ.ಈತನ ಗ್ಯಾಂಗ್‍ನಲ್ಲಿದ್ದು ತಲೆ ಮರೆಸಿಕೊಂಡಿರುವ ಮೂವರು ಸಹಚರರಿಗಾಗಿ ತೀವ್ರ ಶೋಧ ನಡೆಸಲಾಗಿದೆ .

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link