ಬೆಂಗಳೂರು
ರೌಡಿ ಚಟುವಟಿಕೆಗಳಲ್ಲಿ ತೊಡಗಿ ಸ್ಥಳೀಯರಲ್ಲಿ ಭಯಭೀತಿ ಉಂಟು ಮಾಡುತ್ತಿದ್ದ ಕುಖ್ಯಾತ ರೌಡಿ ಕಾರ್ತಿಕ್ ಅಲಿಯಾಸ್ ರಾಹುಲ್‌ನನ್ನು ಗೂಂಡಾಕಾಯ್ದೆಯಡಿ ಬಂಧಿಸಲಾಗಿದೆ.ಹಲಸೂರಿನ ಗೌತಮ್‌ಪುರದ ರೌಡಿ ಕಾರ್ತಿಕ್ (29) ಹಲಸೂರು ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿದ್ದು ಕೊಲೆಯತ್ನ, ಅತ್ಯಾಚಾರ, ಸುಲಿಗೆ, ದೊಂಬಿ ಇನ್ನಿತರ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನು.
ಅತ್ಯಾಚಾರ ಪ್ರಕರಣದಲ್ಲಿ ಈತನಿಗೆ ನ್ಯಾಯಾಲಯವು 7 ವರ್ಷ ಕಠಿಣ ಶಿಕ್ಷೆ ವಿಧಿಸಿದ್ದರೂ ಹಳೇ ಚಾಳಿ ಮುಂದುವರೆಸಿ, ರೌಡಿ ಚಟುವಟಿಕೆಗಳಲ್ಲಿ ತೊಡಗಿ ಸ್ಥಳೀಯರ ನೆಮ್ಮದಿಗೆ ಭಂಗವುಂಟು ಮಾಡಿದ್ದ.ರೌಡಿ ಕಾರ್ತಿಕ್‌ನನ್ನು ಹಲವು ಬಾರಿ ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಸಿಕೊಂಡಿದ್ದರೂ ಬುದ್ಧಿ ಕಲಿಯದೆ ರೌಡಿ ಚಟುವಟಿಕೆಗಳಲ್ಲಿ ತೊಡಗಿ ಗೂಂಡಾ ವರ್ತನೆ ಮಾಡುತ್ತ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಎಂದು ಡಿಸಿಪಿ ಡಾ. ಎಸ್.ಟಿ. ಶರಣಪ್ಪ ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಹಲಸೂರಿನಲ್ಲಿ 6, ಕಲಾಸಿಪಾಳ್ಯದಲ್ಲಿ 1, ಇಂದಿರಾನಗರದಲ್ಲಿ 3 ಸೇರಿ ಕೊಲೆಯತ್ನ, ಅತ್ಯಾಚಾರ, ಸುಲಿಗೆ, ಹಲ್ಲೆ, ದೊಂಬಿ ಇನ್ನಿತರ ಪ್ರಕರಣಗಳು ದಾಖಲಾಗಿದ್ದು, ಆತನನ್ನು ಗೂಂಡಾಕಾಯ್ದೆಯಡಿ ಹಲಸೂರು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








