ಮೋದಿ ಬೆಂಬಲಕ್ಕೆ ನಿಂತ ಆರೆಸ್ಸೆಸ್…!!!

ನವದೆಹಲಿ

       ದೇಶದಲ್ಲಿ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಮಹಾಸಂಯುಕ್ತ ಕೂಟವಾಗಿ ಪ್ರಯತ್ನ ನಡೆಸುತ್ತಿರುವಂತೆಯೇ ಬಿಜೆಪಿ ಕೂಡ ಮರಳಿ ಅಧಿಕಾರಕ್ಕೆ ಬರಲು ಶತ ಪ್ರಯತ್ನ ನಡೆಸುತ್ತಿದೆ. ಈ ಪ್ರಯತ್ನದ ಭಾಗವಾಗಿ ಆರೆಸ್ಸೆಸ್ ಮತ್ತು ಇನ್ನೂ ೪೦ಕ್ಕೂ ಅಧಿಕ ಸಂಘ ಪರಿವಾರದ ಸಂಘಟನೆಗಳು ದೇಶಾದ್ಯಂತ ಬಹಿರಂಗವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಿವೆ.

         ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಸಂಘಪರಿವಾರದ ಸಂಘಟನೆಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಬಹಳಷ್ಟು ಬೆವರು ಹರಿಸಿದ್ದವು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಉತ್ತರ ಪ್ರದೇಶ, ಈಶಾನ್ಯ ಭಾರತ ಹಾಗೂ ಕರ್ನಾಟಕ ಅಸೆಂಬ್ಲಿ ಚುನಾವಣೆಗಳಲ್ಲಿ ಸಂಘ ಪರಿವಾರ ಪ್ರಚಾರದ ಅಖಾಡಕ್ಕೆ ಧುಮುಕಿ ಬಿಜೆಪಿಗೆ ಅಧಿಕಾರ ಗಳಿಸಿಕೊಟ್ಟಿತ್ತು. ಅಸೆಂಬ್ಲಿ ಚುನಾವಣೆಯಲ್ಲಿ ಸಂಘಪರಿವಾರ ಪ್ರಚಾರಕ್ಕೆ ಧುಮುಕಿದ್ದು ಅದೇ ಪ್ರಥಮ. ಆದರೆ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಅಧಿಕಾರ ಹಿಡಿಯಲು ಬಹುಮತದ ಕೊರತೆ ಅನುಭವಿಸಬೇಕಾಯಿತು. ಆದರೆ ಸಾಕಷ್ಟು ಸಂಖ್ಯೆಯಲ್ಲಿ ಬಿಜೆಪಿಗೆ ಸೀಟುಗಳನ್ನು ಗಳಿಸಿಕೊಂಡಿದಂತೂ ನಿಜ . 

      ಮುಂದಿನ ಚುನಾವಣೆಗೆ ಸಿದ್ದತೆ ಎಂಬಂತೆ ಸಂಘ ಪರಿವಾರದ ಕೆಲ ಸಂಘಟನೆಗಳು ಈಗಾಗಲೇ ಮೋದಿಯನ್ನು ಮತ್ತೆ ಅಧಿಕಾರ ತರುವಲ್ಲಿ ತೀವ್ರ ಶ್ರಮವಹಿಸುತ್ತಿವೆ. ಅದರ ಭಾಗವಾಗಿ ಟೀಂ ಮೋದಿಯಿಂದ ಮೋದಿ ಮತ್ತೊಮ್ಮೆ ಇನ್ನೂ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಶುರು ಮಾಡಿವೆ ಎಂದು ತಿಳಿದು ಬಂದಿದೆ. 

ಚುನಾವಣಾ ಕಾರ್ಯ ತಂತ್ರ ಬದಲಾಯಿಸಿದ ಬಿಜೆಪಿ:

        ಲೋಕಸಭಾ ಚುನಾವಣೆಯನ್ನು ಸಂಘಪರಿವಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಸಂಘದ ಪ್ರಮುಖರು ಹೇಳುವ ಪ್ರಕಾರ, ದೇಶದಲ್ಲಿ ಮಹಾಗಠಬಂಧನ್ ಮೂಲಕ ಮೋದಿ ಹಾಗೂ ಬಿಜೆಪಿಯನ್ನು ಮಣಿಸಲು ವಿಪಕ್ಷಗಳು ಇನ್ನಿಲ್ಲದ ಪ್ರಯತ್ನ ನಡೆಸುತ್ತಿವೆ. ಆದರೆ ದೇಶದ ಜನತೆಗೆ ಮೋದಿ, ಬಿಜೆಪಿ ಆಡಳಿತ ಬೇಕು. ಅದಕ್ಕಾಗಿ ಈ ಬಾರಿಯೂ ಸಂಘ ಪರಿವಾರ ನೇರವಾಗಿ ಪ್ರಚಾರ ಕಣಕ್ಕೆ ಧುಮುಕುತ್ತಿದೆ ಎನ್ನುತ್ತಾರೆ.

      ಸಂಘಪರಿವಾರವು ಚುನಾವಣಾ ರಣತಂತ್ರವನ್ನೂ ಬದಲಾಯಿಸಿದ್ದು . ‘ದೇಶಕ್ಕೆ ಮತ್ತೆ ಪ್ರಧಾನಿ ಮೋದಿ’ ಹಾಗೂ ಮೋದಿ, ಬಿಜೆಪಿ ದೇಶಕ್ಕೆ ಯಾಕೆ ಅನಿವಾರ್ಯ ಎಂಬ ಈ ಎರಡು ವಿಚಾರವನ್ನು ಮುಂದಿಟ್ಟುಕೊಂಡು ಪ್ರಚಾರ ಕಾರ್ಯ ನಡೆಸಲಿದೆ ಎಂಬ ಸುದ್ದಿಗಳು ವ್ಯಾಪಕವಾಗಿ ಹರಿದಾಡುತ್ತಿವೆ.

          ಎಲ್ಲಿಯೂ ವಿಪಕ್ಷಗಳನ್ನು ಟೀಕಿಸುವುದಾಗಲಿ, ದೂರುವುದಾಗಲಿ ಮಾಡುವುದಿಲ್ಲ. ಬಹಿರಂಗ ಸಮಾವೇಶಗಳ ನ್ನೂ ಸಂಘಪರಿವಾರ ಆಯೋಜಿಸುವುದಿಲ್ಲ. ಏನಿದ್ದರೂ ಕೇಂದ್ರದ ಸಾಧನೆಯನ್ನು ಪ್ರತಿ ಯೊಂದು ಮನೆ ಮನೆಗೆ ತಲುಪಿಸಿ ದೇಶದ ಜನರಿಗೆ ಮನದಟ್ಟು ಮಾಡುವುದಷ್ಟೇ ನಮ್ಮ ಕೆಲಸ ಎನ್ನುತ್ತಾರೆ ಸಂಘಟನಾ ಪ್ರಮುಖರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap