ಬೆಂಗಳೂರು
ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಹೊಸ ವಾಹನಗಳ ನೊಂದಣಿ ಶುಲ್ಕವನ್ನು ಹೆಚ್ಚಿಸಿ ಸದ್ದಿಲ್ಲದೆ ಸಾರಿಗೆ ಇಲಾಖೆಯು ಸಾರ್ವಜನಿಕರಿಗೆ ತೆರಿಗೆಯ ಬರೆ ಎಳೆದಿದೆ.ಈವರೆಗೆ ರಾಜ್ಯದಲ್ಲಿ ಪ್ರತ್ಯೇಕವಾಗಿ ರಸ್ತೆ ಸುರಕ್ಷತೆಗಾಗಿ ಯಾವುದೇ ಅನುದಾನ ಮೀಸಲಿರಲಿಲ್ಲ.ಬೆಂಗಳೂರಿಗಾದರೆ ಬಿಬಿಎಂಪಿಯ ಟ್ರಾಫಿಕ್ ಇಂಜಿನಿಯರಿಂಗ್ ಸೆಲ್, ರಸ್ತೆ ಸುರಕ್ಷತೆ ಕಾರ್ಯ ಮಾಡುತ್ತಿತ್ತು.ಆದರೆ ಈಗ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಸ್ತೆ ಸುರಕ್ಷತೆಯ ಜವಾಬ್ದಾರಿ ಸಾರಿಗೆ ಇಲಾಖೆಯದ್ದೇ ಆಗಿದ್ದು,ತನ್ನ ಅನುದಾನವನ್ನು ತಾನೇ ಹೊಂದಿಸಿಕೊಳ್ಳುವಂತೆ ಮಾರ್ಚ್ 6ರಂದು ಆದೇಶ ಹೊರಡಿಸಿದೆ.
ಈ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಹೊಸ ವಾಹನ ಕೊಳ್ಳುವವರು ವಾಹನದ ನೋಂದಣಿ ಹಣದೊಂದಿಗೆ ರಸ್ತೆ ಸುರಕ್ಷತೆಗೆ ಉಪತೆರಿಗೆಯಾಗಿ ಪಾವತಿಸಬೇಕು.ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಕ್ಕೆ 500ರೂ. ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 1 ಸಾವಿರವನ್ನು ಹೆಚ್ಚುವರಿ ಪಾವತಿಸಬೇಕಿದೆ.ರಸ್ತೆಯಲ್ಲಿ ಅಪಘಾತಗಳ ಪ್ರಮಾಣ ತಗ್ಗಿಸಿ, ಪ್ರಯಾಣಿಕರಿಗೆ ಸುರಕ್ಷಿತವಾದ ಸಂಚಾರಕ್ಕೆ ಅನುವು ಮಾಡಿಕೊಡುವಂತಹ ಕೆಲಸವನ್ನು “ರೋಡ್ ಸೇಫ್ಟಿ ಸೆಲ್” ಮಾಡಲಿದೆ.
ಇದರಲ್ಲಿ ವೈಜ್ಞಾನಿಕ ಉಬ್ಬುಗಳು, ವಿಭಜಕಗಳು, ರಸ್ತೆ ಸಿಗ್ನಲ್‍ಗಳು, ಸೂಚನಾ ಫಲಕಗಳು ಸೇರಿದಂತೆ ಹಲವಾರು ಕ್ರಮಗಳನ್ನು ಸಾರಿಗೆ ಇಲಾಖೆಯು,ಸಂಚಾರ ಪೆÇಲೀಸರು ಹಾಗೂ ಬಿಬಿಎಂಪಿಯ ಟಿಇಸಿ ಸೆಲ್‍ನೊಂದಿಗೆ ಕೈಜೋಡಿಸಿ ಕಾರ್ಯ ನಿರ್ವಹಿಸಲಿದ್ದು ಈಗಾಗಲೇ ಕಳೆದ ಮಾರ್ಚ್ 6ರಿಂದ ಹೊಸ ಉಪತೆರಿಗೆಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯ ಉಪ ಆಯುಕ್ತರಾದ ಬಾಲಕೃಷ್ಣ ಅವರು ತಿಳಿಸಿದ್ದಾರೆ.
ಆದರೆ ಹೊಸ ಉಪ ತೆರಿಗೆಯನ್ನು ಏಕಾಏಕಿ ಜಾರಿಗೆ ತಂದಿರುವುದರಿಂದ ವಾಹನ ಖರೀದಿಸುವವರಿಗೆ ಸ್ವಲ್ಪ ಮಟ್ಟಿಗೆ ಕಷ್ಟವಾಗಬಹುದು.ವಾಹನದ ನೋಂದಣಿಯ ಹಣಕ್ಕಿಂತಲೂ ಸೆಸ್ ಜಾಸ್ತಿಯಾಗಿದೆ. ಆದರೆ ಏನೇ ತೆರಿಗೆ ಪಾವತಿಸಿದರೂ ನಮಗೆ ಸುರಕ್ಷತೆ ಸಿಗುವ ಬಗ್ಗೆ ನಂಬಿಕೆ ಇಲ್ಲ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಗಾಗಿ ಈ ಹಿಂದೆ ಬಿಬಿಎಂಪಿ ಜನರಿಂದ ಟ್ರಾನ್ಸ್ ಪೋರ್ಟ್ ಸೆಸ್ ಸಂಗ್ರಹ ಮಾಡಬೇಕೆಂಬ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಕೌನ್ಸಿಲ್‍ನಲ್ಲಿ ತೀವ್ರ ವಿರೋಧ ವ್ಯಕ್ತವಾದ್ದರಿಂದ ಸಾರಿಗೆ ಇಲಾಖೆಯೇ ಹೊಸ ವಾಹನ ಖರೀದಿ ವೇಳೆಯಲ್ಲಿ ಟ್ರಾನ್ಸ್ ಪೋರ್ಟ್ ಸೆಸ್ ವಿಧಿಸಲು ತಿ