ರುದ್ರಾಭಿಷೇಕದ ಪ್ರಸಾದ ಶ್ರೀಗಳಿಗೆ ಅರ್ಪಣೆ

ಕುಣಿಗಲ್

         ತುಮಕೂರಿನ ಸಿದ್ಧಗಂಗಾ ಮಠದ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ಕಗ್ಗೆರೆ ತಪ್ಪೂಕ್ಷೇತ್ರದಲ್ಲಿ ಮಾಡಿಸಿದ್ದ ಕ್ಷೀರಾಭಿಷೇಕ ಮತ್ತು ರುದ್ರಾಭಿಷೇಕದ ಪ್ರಸಾದವನ್ನು ಚೆನ್ನೈನಲ್ಲಿ ರೇಲ ಆಸ್ಪತ್ರೆಯಲ್ಲಿ ಸೋಮವಾರ ಸ್ವಾಮೀಜಿಗೆ ಭಕ್ತರು ಸಮರ್ಪಿಸಿದರು.

          ದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿಯವರಿಗೆ ಆರೋಗ್ಯ ಸಂಪೂರ್ಣ ಸುಧಾರಿಸಲಿ ಹಾಗೂ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ ಎಂದು ಹರಕೆ ಹೊತ್ತಿದ್ದ ಭಕ್ತರು ತಪೋಕ್ಷೇತ್ರ ಕಗ್ಗೆರೆಯಲ್ಲಿ ಕ್ಷೀರಾಭಿಷೇಕ ಮಾಡಿಸಿ ಪ್ರಸಾದವನ್ನು ಚೆನ್ನೈಗೆ ಕೊಂಡೊಯ್ದಿದ್ದರು. ಸೋಮವಾರ ಬೆಳಗ್ಗೆ ಚೆನ್ನೈ ತಲುಪಿದ ಭಕ್ತರು ಸ್ವಾಮೀಜಿಯವರನ್ನು ಸಂಪರ್ಕಿಸಿದರು.

          ಕಗ್ಗೆರೆಯಿಂದ ತೆಗೆದುಕೊಂಡು ಹೋಗಿದ್ದ ದ್ರಾಕ್ಷಿ, ಗೋಡಂಬಿ, ಕಲ್ಲುಸಕ್ಕರೆ, ಬಾದಾಮಿ ಹಾಗೂ ಎಳನೀರಿನ ಪ್ರಸಾದವನ್ನು ಸ್ವಾಮೀಜಿಯವರ ವಶಕ್ಕೆ ನೀಡಿದರು.

          ಸ್ವಾಮೀಜಿಗಳ ದರುಶನದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಸಿದ್ದಲಿಂಗೇಶ್ವರ ಶತಮಾನೋತ್ಸವ ಸಮಿತಿಯ ಸದಸ್ಯರಾದ ಸೂಳೆ ಕುಪ್ಪೆ ಪಾಪಣ್ಣ ಶ್ರೀಗಳು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಎಲ್ಲ ಇತರ ಸ್ವಾಮೀಜಿಗಳನ್ನು ತುಂಬಾ ಚೆನ್ನಾಗಿ ಲವಲವಿಕೆಯಿಂದ ಮಾತನಾಡಿಸುತ್ತಿದ್ದಾರೆ. ಆದಷ್ಟು ಬೇಗ ನಡೆದಾಡುವ ದೇವರು ನಡೆದುಕೊಂಡು ಪುನಃ ಬರಲಿದ್ದಾರೆ ಎಂದು ಆಶಯ ವ್ಯಕ್ತಪಡಿಸಿದರು.

        ಈ ಸಂದರ್ಭದಲ್ಲಿ ಸಿದ್ದಲಿಂಗೇಶ್ವರ ಶತಮಾನೋತ್ಸವ ಸಮಿತಿಯ ಸದಸ್ಯರಾದ ಎನ್.ಎಸ್ ವಸಂತ್ ಕುಮಾರ್, ಗಿರಿರಾಜು, ಸ್ನೇಕ್ ಮಹಾಂತೇಶ್ ಇದ್ದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap