ಅನಾಥ ಮಕ್ಕಳಿಗೆ ಚಳಿಗಾಲದ ರಗ್ಗುಗಳ ವಿತರಣೆ

ಪಾವಗಡ

         ಮಾನವೀಯತೆಯನ್ನು ಪ್ರತಿಯೊಬ್ಬರು ಮೆರೆಯಬೇಕು ಎಂದು ಪಾವಗಡ ಪಟ್ಟಣದ ಮಹಿಳಾ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಓ. ಮಾರಪ್ಪ ತಿಳಿಸಿದರು.

         ಶನಿವಾರ ಪಟ್ಟಣದ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ಸರ್ವಧರ್ಮ ಶಾಂತಿ ಪೀಠದ ವತಿಯಿಂದ ಇತ್ತೀಚೆಗೆ ಡಿಸಂಬರ್ 31 ರ ರಾತ್ರಿ ಪಟ್ಟಣದ ಶಾಂತಿ ನಗರದ ರೈತ ಶ್ರೀನಿವಾಸ್ – ದುರ್ಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದ ದಂಪತಿಗಳ ಮಕ್ಕಳಾದ ಈಶ್ವರ್ ಮತ್ತು ಪಲ್ಲವಿ ಸೇರಿದಂತೆ ತಂದೆ-ತಾಯಿ ಇಲ್ಲದ 20 ಅನಾಥ ಮಕ್ಕಳಿಗೆ ಚಳಿಗಾಲದ ರಗ್ಗುಗಳನ್ನು ವಿತರಿಸಿ ಮಾತನಾಡಿದರು.ಸರ್ವಧರ್ಮ ಆಶ್ರಮದ ವತಿಯಿಂದ ತಾಲ್ಲೂಕಿನಲ್ಲಿ ತಂದೆ- ತಾಯಿ ಇಲ್ಲದೆ ನೂರು ಅನಾಥ ಮಕ್ಕಳನ್ನು ಪತ್ತೆಹಚ್ಚಿ ಅವರಿಗೆ ಸರ್ವ ರೀತಿಯಲ್ಲಿ ಸಹಾಯಹಸ್ತ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

         ಸರ್ವಧರ್ಮ ಶಾಂತಿ ಪೀಠಾಧ್ಯಕ್ಷ ಸಿದ್ದಾಪುರದ ರಾಮಮೂರ್ತಿ ಸ್ವಾಮಿ ಮಾತನಾಡಿ, ರೈತ ಶ್ರೀನಿವಾಸ್ – ದುರ್ಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದ ದಂಪತಿಗಳ ಮಕ್ಕಳಾದ ಈಶ್ವರ್ ಮತ್ತು ಪಲ್ಲವಿಯವರನ್ನು ಮಾಜಿ ಶಾಸಕ ತಿಮ್ಮರಾಯಪ್ಪ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಳಿ ನೆರವಿಗಾಗಿ ಇತ್ತಿಚೆಗೆ ಕರೆದುಕೊಂಡು ಹೋಗಿದ್ದು, ತಕ್ಷಣ ಕುಮಾರಸ್ವಾಮಿಯವರು ಈ ಮಕ್ಕಳ ಸಂಪೂರ್ಣ ವಿಧ್ಯಾಬ್ಯಾಸಕ್ಕಾಗುವ ವೆಚ್ಚವನ್ನು ಭರಿಸಬೇಕು ಎಂದು ಒತ್ತಾಯಿಸಿ, ಸಾಮಾಜಿಕ ಭದ್ರತಾ ನೇರವಿನಡಿಯಲ್ಲಿ ಪಿಂಚಣಿ ನೀಡುವಂತೆ ರಾಜ್ಯದಲ್ಲಿ ತಂದೆ- ತಾಯಿ ಇಲ್ಲದೆ ವಿದ್ಯಾಭ್ಯಾಸ ಮಾಡುತ್ತಿರುವ ಅನಾಥ ಮಕ್ಕಳಿಗೆ ಪಿಂಚಣಿ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

         ನಮ್ಮಹಕ್ಕು ಸಂಘಟನೆಯ ಅಧ್ಯಕ್ಷ ಗೀರೀಶ್, ಬ್ರೈಟ್ ಪ್ಯೂಚರ್ ಕಂಪ್ಯೂಟರ್ ಕೇಂದ್ರದ ಸಿ.ಇ.ಓ. ಶ್ರೀಧರ್ ಗುಪ್ತ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಸತ್ಯಲೋಕೇಶ್ ಮಾತನಾಡಿದರು.ಕಾಲೇಜಿನ ದೈಹಿಕ ಶಿಕ್ಷಕ ಮಧುಕುಮಾರ್, ಪ್ರಥಮ ದರ್ಜೇ ಗುಮಾಸ್ತ ನಾಗರಾಜ್, ಶಿಕ್ಷಕರಾದ ರಾಮಾಂಜಪ್ಪ, ಮಂಗಳಗೌರಿ ಮತ್ತಿರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link