ಬೆಳಗಾವಿಗೆ ನಾನು ಕೊಟ್ಟಷ್ಟು ಕೊಡುಗೆ ಮತ್ತೊಬ್ಬರು ನೀಡಿಲ್ಲ : ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು

      ಉಪ ಚುನಾವಣೆ ನಡೆಸಲು ಆಡಳಿತ ಪಕ್ಷದಿಂದ ಜನರ ತೆರಿಗೆ ಹಣ ವ್ಯಯಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

    ಯಶವಂತಪುರ ವಿಧಾನಸಭಾಕ್ಷೇತ್ರದಲ್ಲಿ ಜೆಡಿಎಸ್‍ ಅಭ್ಯರ್ಥಿಟಿ.ಎನ್.ಜವರಾಯಿಗೌಡ ನಾಮಪತ್ರ ಸಲ್ಲಿಸುವ ಮುನ್ನ ಮಾತನಾಡಿದಅವರು, ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಜನರ ಹಣವನ್ನೇ ಚುನಾವಣೆಯಲ್ಲಿ ಖರ್ಚು ಮಾಡಲು ಹೊರಟಿದ್ದಾರೆ. ಅಂತಹವರಿಂದ ಬಡವರಿಗೆಯಾವುದೇ ಲಾಭವಿಲ್ಲ ಎಂದು ಟೀಕಿಸಿದರು.

     ಮಾಜಿ ಸಚಿವ ರೋಷನ್ ಬೇಗ್‍ ಅವರು ಉಪ ಚುನಾವಣಾಕಣದಿಂದ ಹಿಂದೆ ಸರಿಯುವ ಮೂಲಕ ಉತ್ತಮ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಹೇಳಿದರು.ಬೆಳಗಾವಿ ಜಿಲ್ಲೆಯಲ್ಲಿ ಒಂದು ಸಾವಿರ ಕೋಟಿರೂ. ರೈತರ ಸಾಲ ಮನ್ನಾ ಮಾಡಲಾಗಿದೆ. ರೈತರಕಬ್ಬಿನ ಹಣವನ್ನು ಬಾಕಿ ಉಳಿಸಿಕೊಂಡು ಸಾಹುಕಾರ್ ಆದವರುಇದ್ದಾರೆಎಂದು ಪರೋಕ್ಷವಾಗಿ ಮಾಜಿ ಸಚಿವರಮೇಶ್ ಜಾರಕಿಹೊಳಿ ಅವರನ್ನು ಉದ್ದೇಶಿಸಿ ವಾಗ್ದಾಳಿ ನಡೆಸಿದರು.

     ಬೆಳಗಾವಿಯ ಮೂರು ಕ್ಷೇತ್ರಗಳಲ್ಲೂ ಜೆಡಿಎಸ್‍ ಅಭ್ಯರ್ಥಿ ಗೆಲುವಿಗೆ ಕಾರ್ಯತಂತ್ರ ರೂಪಿಸಿದ್ದೇವೆ. ಬೆಳಗಾವಿ ಅಭಿವೃದ್ಧಿಗೆ ನಾನು ಕೊಟ್ಟಷ್ಟು ಕೊಡುಗೆ ಮತ್ತೊಬ್ಬರು ನೀಡಿಲ್ಲ ಎಂದು ಸಮರ್ಥಿಸಿಕೊಂಡರು .ಆಪರೇಷನ್ ಕಮಲ ಆರಂಭವಾಗಿದ್ದೇ ಬೆಳಗಾವಿಯಿಂದ. ಅಂತಹವರಿಗೆತಕ್ಕ ಪಾಠ ಕಲಿಸಬೇಕೆಂದರು.

    ಜವರಾಯಿ ಗೌಡ ಅವರು ಬಿಬಿಎಂಪಿ ಮಾಜಿ ಸದಸ್ಯೆ ಗಾಯಿತ್ರಿ ಜವರಾಯಿ ಗೌಡ, ಪಕ್ಷದ ಮುಖಂಡರಾದ ಹನುಮಂತೇ ಗೌಡ, ಹನುಮಂತರಾಯಪ್ಪ ಮತ್ತಿತರರೊಂದಿಗೆ ನಾಮಪತ್ರ ಸಲ್ಲಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap