ಚೇಳೂರು
ಚೇಳೂರಿನ ಅಂಚೆ ಕಛೇರಿ ಮುಂಭಾಗದಲ್ಲಿ ಗುಬ್ಬಿ ತಾಲ್ಲೂಕಿನ ರಾಷ್ಟ್ರೀಯ ಗ್ರಾಮೀಣ ಅಂಚೆ ನೌಕರರ ಸಂಘ ಹಾಗೂ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರರ ಸಂಘಗಳ ಒಕ್ಕೂಟದಿಂದ ಕಮಲೇಶ್‍ಚಂದ್ರರವರ 7ನೇ ವೇತನ ಆಯೋಗದ ಶಿಪಾರಸ್ಸುನ್ನು 1.1.2016 ರಿಂದ ಜಾರಿಗಳಿಸಬೇಕು,ಗ್ರ್ಯಾಚೋಟಿ ಹಣವನ್ನು ಒಂದು ಲಕ್ಷದ ಐವತ್ತು ಸಾವಿರದಿಂದ ಐದು ಲಕ್ಷ ರೂಗಳಿಗೆ ಹೆಚ್ಚಿಸಬೇಕು,ಶಾಖಾ ಅಂಚೆ ಕಛೇರಿಯ ಸಮಯವನ್ನು 8 ಗಂಟೆಗೆ ನಿಗಧಿಗೊಳಿಸಿ ಎಲ್ಲಾ ಗ್ರಾಮೀಣ ಅಂಚೆ ನೌಕರರನ್ನು ಖಾಯಂ ಗೊಳಿಸಬೇಕು ಹಾಗೂ ಇನ್ನೂ ಇತರರ ಬೇಡಿಕೆಗಳನ್ನು ಮುಂದೆ ಇಟ್ಟುಕೊಂಡು ಅನಿರ್ಧಿಷ್ಠಾವಧಿ ಮುಷ್ಕರವನ್ನು ಸಂಘದ ಅಧ್ಯಕ್ಷ ಎನ್.ಶೇಖರಪ್ಪ ನೇತೃತ್ವದಲಿ ನೆಡೆಸಿದರು
ಈ ಮುಷ್ಕರದಲ್ಲಿ ಸಂಘದ ಕಾರ್ಯದರ್ಶಿ ಸತ್ಯನಾರಾಯಣ,ಖಜಾಂಚಿ ಕೆ.ಡಿ.ನರಸಿಂಹಮೂರ್ತಿ,ಸಹಕಾರ್ಯದರ್ಶಿ ನಾರಾಯಣ,ಸದಸ್ಯರಾದ ಪದ್ಮಪ್ರಭು,ಶ್ರಿಕಂಠಮೂರ್ತಿ,ಕೊಡಿಯಾಲದ ರಮೇಶ್,ಅಂಕಸಂದ್ರದ ರಮೇಶ್ , ಬಿ.ಸಿ.ನರಸಿಂಹರಾಜು , ಗಂಗಣ್ಣ ,ಶಂಕರಪ್ಪ,ಲಕ್ಷ್ಮಣಗೌಡ,ಸೌಮ್ಯ,ರಮ್ಯಶ್ರೀ,ಭವ್ಯ,ಮಂಗಳವಾಣಿ, ಹಾಗೂ ಗುಬ್ಬಿ ಉಪವಿಭಾಗದ ಗ್ರಾಮೀಣ ಸಂಘದ ನೌಕರರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ