ಋಷಿ ಗುರುಕುಲಂ ಸಂಭ್ರಮ ಕಾರ್ಯಕ್ರಮ

ಹೊಳಲ್ಕೆರೆ:

        ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಹಾಗೂ ಜ್ಞಾನವನ್ನು ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ತಿಳಿಸಿದರು.ತಾಲೂಕಿನ ರಂಗಾಪುರ ಗುರುಕುಲ ಆಶ್ರಮದ ಋಷಿ ಗುರುಕುಲ ವಿದ್ಯಾಕೇಂದ್ರದಲ್ಲಿ ರಾತ್ರಿ ಹಮ್ಮಿಕೊಂಡಿದ್ದ ಋಷಿ ಗುರುಕುಲಂ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

       ನಮ್ಮಲ್ಲಿ ಮೌಲ್ಯಯುತ ಚಿಂತನೆಗಳಿಲ್ಲದಿದ್ದರೆ, ನಮ್ಮ ಮನಸ್ಸು ನಮ್ಮನ್ನು ತಪ್ಪುದಾರಿಗೆ ದೂಡುತ್ತದೆ. ಸ್ವಾಮಿ ವಿವೇಕಾನಂದರು, ಮಹಾತ್ಮಗಾಂಧಿಜೀಯವರು, ಕನಕದಾಸರು, ಸಂತರು, ಶರಣರು, ವಚನಾಕಾರರು ಇಂತಹ ಪ್ರಯತ್ನವನ್ನು ಮಾಡುವ ಪ್ರಯತ್ನ ಮಾಡಿದ್ದರು. ವಚನಕಾರರ, ಸಂತರು, ಶರಣರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

         ಋಷಿ ಗುರುಕುಲಂ ವಿದ್ಯಾಕೇಂದ್ರ ಸಮಿತಿ ಅಧ್ಯಕ್ಷ ಡಾ.ಹನುಮಲಿ ಷಣ್ಮುಖಪ್ಪ ಮಾತನಾಡಿ, ಗುರುಕುಲ ಆಶ್ರಮದಲ್ಲಿ ಮೌಲ್ಯಯುತ ಶಿಕ್ಷಣದ ಜೊತೆ ಮಾನವೀಯ ಮೌಲ್ಯಗಳನ್ನು ನೀಡುತಿದ್ದು, ಈ ಶಿಕ್ಷಣವನ್ನು ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸುವ ಉದ್ದೇಶದಿಂದ ದುಮ್ಮಿ ಹಾಗೂ ಹೊಳಲ್ಕೆರೆ ಬಳಿ ಗುರುಕುಲ ಶಿಕ್ಷಣ ಶಾಲೆಗಳನ್ನು ಆರಂಬಿಸುವ ಉದ್ದೇಶ ಹೊಂದಿದೆ ಎಂದರೆ.

        ಋಷಿ ಗುರುಕುಲಂ ವಿದ್ಯಾಕೇಂದ್ರ ಸಮಿತಿ ಕಾರ್ಯದರ್ಶಿ ಕುನುಗಲಿ ಷಣ್ನುಖಪ್ಪ ಮಾತನಾಡಿ, ಶಿಕ್ಷಕರ ಜೊತೆ ಪೋಷಕರು ಕೂಡ ಕೈ ಜೋಡಿಸಿದಾಗ ಮಾತ್ರ ಮಕ್ಕಳಲ್ಲಿ ತ್ಯಾಗ ಹಾಗೂ ಸೇವಾ ಮನೋಭಾವನೆ, ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ ಎಂದರು.

ಋಷಿ ಸಂಸ್ಕತಿ ವಿದ್ಯಾಕೇಂದ್ರದ ಡಾ.ತಿಪ್ಪಾರೆಡ್ಡಿ ಗುರೂಜಿ, ಸಮಿತಿ ಸದಸ್ಯರಾದ ವರ್ತಕ ಎಂ.ಇ.ಹೊನ್ನೇಶ್, ವಿಶ್ವನಾಥ್, ಡಾ.ಎನ್.ಬಿ.ಸಜ್ಜನ್, ನಿವೃತ್ತ ಉಪತಹಸೀಲ್ದಾರ್ ಗಂಗಮ್ಮ, ಗ್ರಾಪಂ ಮಾಜಿ ಅಧ್ಯಕ್ಷೆ ಕೆಂಚವೀರಪ್ಪರ ಗಂಗಮ್ಮ, ಶಾಲಾಭಿವೃದ್ದಿ ಸಮತಿಯ ಪದಾಧಿಕಾರಿಗಳು, ಶಾಲೆಯ ಸಿಇಒ ರೂಪ, ಶಾಲಾ ಸಿಬ್ಬಂದಿ, ಐಎಲ್‍ಆರ್‍ಡಿ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಮತ್ತಿತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link