ಬೆಂಗಳೂರು:
ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುಲ್ಲೇ ಇದ್ದು, ವೈರಸ್ ಪೀಡಿತರಿಗೆ ಜೀವರಕ್ಷಕವಾಗಿರುವ ವೆಂಟಿಲೇಟರ್ ಗಳಿಗೆ ಭಾರಿ ಬೇಡಿಕೆ ಇದೆ. ಆದರೆ, ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುವುದು ಬಡವರಿಗೆ ಅತ್ಯಂತ ದುಬಾರಿಯಾಗಿದೆ, ಬಡವರಿಗೆ ಕೈಗೆಟುಕುವ ದರದಲ್ಲಿ ವೆಂಟಿಲೇಟರ್ ಗಳನ್ನು ರೈಲ್ವೇ ಸಿಬ್ಬಂದಿಗಳು ಸಿದ್ಧಪಡಿಸಿದ್ದಾರೆ.
ಯಲಹಂಕದ ರೈಲ್ ವೀಲ್ ಫ್ಯಾಕ್ಟರಿಯು ಕಡಿಮೆ ವೆಚ್ಚದ ವೆಂಟಿಲೇಟರ್ ಗಳನ್ನು ಸಿದ್ಧಪಡಿಸಿದೆ, ಇದು ಬಡವರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ ಎನ್ನಲಾಗಿದೆ, ಮತ್ತು ದುಬಾರಿ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಫ್ಯಾಕ್ಟರಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಆರ್’ಡಬ್ಲ್ಯೂಎಫ್ ತಾಂತ್ರಿಕ ತಂಡ ಉಬ್ರಿಕಮ್ ಎಂಬ ಕಂಪನಿಯ ವಸ್ತುಗಳನ್ನು ಬಳಸಿಕೊಂಡು ವೆಂಟಿಲೇಟರ್’ನ್ನು ವಿನ್ಯಾಸಗೊಳಿಸಿದೆ.
ಜಯನಗರದಲ್ಲಿರುವ 3ಡಿ ಪ್ರಿಂಟಿಂಗ್ ಔಟ್’ಲೆಟ್ ನಲ್ಲಿ ನಮಗೆ ಅಗತ್ಯವಿದ್ದ ಅರ್ಧದಷ್ಟು ವಸ್ತುಗಳು ದೊರಕಿದ್ದವು. ಬಳಿಕ ನಮ್ಮ ತಾಂತ್ರಿಕ ತಂಡದ ಸಿಬ್ಬಂದಿಗಳು ವೆಂಟಿಲೇಟರ್ ಅನ್ನು ಸಿದ್ಧಪಡಿಸಿದರು. ವೆಂಟಿಲೇಟರ್ ತಯಾರಿಸಲು ರೂ.15,000 ವೆಚ್ಚವಾಗಿದ್ದು. ಪ್ರಸ್ತುತ ಇದು ಪ್ರಾಥಮಿಕ ಹಂತದಲ್ಲಿದೆ. ಬಯೋಮೆಕಾನಿಕಲ್ ಇಂಜಿನಿಯರ್ಸ್ ಹಾಗೂ ವೈದ್ಯರ ಸಹಾಯಕ್ಕಾಗಿ ನಿರೀಕ್ಷೆ ಮಾಡಲಾಗುತ್ತಿದೆ. ಈ ವೆಂಟಿಲೇಟರ್ ಆಮ್ಲಜನಿಕ ಆಧಾರಿತವಾಗಿಲ್ಲ. ಆದರೆ, ವಾತಾವರಣದ ಗಾಳಿಯನ್ನು ಬಳಸಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ