ಹುಳಿಯಾರು
ಕಳೆದ ವಾರ ನಡೆದ ಗ್ರಾಹಕರ ಸಭೆಯ ತೀರ್ಮಾನದಂತೆ ಶನಿವಾರ ಮತ್ತು ಭಾನುವಾರ ಹುಳಿಯಾರು ಪಟ್ಟಣದಲ್ಲಿ ವಿದ್ಯುತ್ ಕಡಿತಗೊಲಿಸುವಂತೆ ಪಪಂ ಸದಸ್ಯ ಎಲ್.ಆರ್.ಚಂದ್ರಶೇಖರ್ ಮನವಿ ಮಾಡಿದ್ದಾರೆ.
ವಿದ್ಯುತ್ ಬಳಕೆದಾರರ ಸಭೆ ಕರೆದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಾಬ್ತು ಮಾರ್ಗ ಮುಕ್ತತೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಶನಿವಾರ ಮತ್ತು ಭಾನುವಾರ ಮಾರ್ಗ ಮುಕ್ತತೆ ಮಡೆದು ಹೆಚ್ಚು ಸಿಬ್ಬಂದಿ ನಿಯೋಜಿಸಿ ಆದಷ್ಟು ಬೇಗ ಕೆಲಸ ಮುಗಿಸುವಂತೆ ಒಮ್ಮತಕ್ಕೆ ಬರಲಾಗಿತ್ತು.
ಆದರೆ ಶನಿವಾರ, ಭಾನುವಾರ ವಿದ್ಯುತ್ ವ್ಯತ್ಯಯ ಮಾಡುವುದನ್ನು ಮಾರ್ಪಾಡು ಮಾಡುತ್ತಿರುವುದಾಗಿ ತಿಳಿದು ಬಂದಿದೆ.
ತೀವ್ರ ಬರಗಾಲವಿದ್ದು ಕಾರ್ಮಿಕರು ಸಾಲದ ಸುಳಿಯಲ್ಲಿದ್ದು ಒಂದೊಂದು ದಿನದ ಕೂಲಿಯೂ ಕೂಡ ಅವಶ್ಯಕವಾಗಿರುತ್ತದೆ. ಹಾಗಾಗಿ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕೂಲಿಕಾರ್ಮಿಕರಿಗೆ ಭಾನುವಾರ ಸಹಜವಾಗಿ ರಜಾವಿದ್ದು ಶನಿವಾರ ಒಂದು ದಿನ ರಜೆ ಕೊಡಲು ಕಾರ್ಖಾನೆ ಮಾಲೀಕರು ಸಹಮತಿ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಶನಿವಾರ ಮತ್ತು ಭಾನುವಾರಗಳಂದು ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಮಾಡಿ ಕೆಲಸ ಮುಗಿಸಿಕೊಳ್ಳಲೆಂದು ಕಾರ್ಮಿಕರು ಮತ್ತು ಬಳಕೆದಾರರ ಪರವಾಗಿ ಚಂದ್ರಶೇಖರ್ ಕೋರಿದ್ದಾರೆ.