ಸಚಿವ ಸ್ಥಾನ ಕೇಳಲ್ಲ,ಅವರಾಗಿಯೇ ಕೊಟ್ಟರೆ ನಿಭಾಯಿಸುತ್ತೇನೆ: ಶ್ರೀನಿವಾಸ್ ಪ್ರಸಾದ್

ಬೆಂಗಳೂರು

     ಸಚಿವ ಸ್ಥಾನದ ಅಪೇಕ್ಷೆ ಇಲ್ಲ ಅದು ಪ್ರಧಾನಿಗಳ ಪರಮಾಧಿಕಾರ ಒಂದು ವೇಳೆ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ನೂತನ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.

       ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿ ಚಾಮರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಯಡಿಯೂರಪ್ಪ ಅವರನ್ನು ಭೇಟಿಯಾದರು.ಡಾಲರ್ಸ್ ಕಾಲೋನಿ ನಿವಾಸಕ್ಕೆ ಆಗಮಿಸಿದ ಶ್ರೀನಿವಾಸ್ ಪ್ರಸಾದ್ ಅವರನ್ನು ಮನೆಯ ಮುಂಭಾಗದಲ್ಲಿಯೇ ಸ್ವಾಗತಿಸಿದ ಯಡಿಯೂರಪ್ಪ ಕುಶಲೋಪರಿ ವಿಚಾರಿಸಿದರು ಪರಸ್ಪರ ಶುಭಾಷಯ ವಿನಿಮನ ಮಾಡಿಕೊಂಡರು.ಹತ್ತು ನಿಮಿಷ ಅನೌಪಚಾರಿಕ ಮಾತಕತೆ ನಡೆಸಿದ ಉಭಯ ನಾಯಕರು ರಾಜ್ಯ ರಾಜಕಾರಣ ಕುರಿತು ಚರ್ಚಿಸಿದರು.ನಂತರ ಮನೆಯ ಗೇಟ್ ವರೆಗೂ ಬಂದು‌ ಶ್ರೀನಿವಾಸ್ ಪ್ರಸಾದ್ ಅವರನ್ನು ಬೀಳ್ಕೊಟ್ಟರು.

       ಯಡಿಯೂರಪ್ಪ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್,ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ‌ ದೂರವಾಣಿ ಮೂಲಕ ಯಡಿಯೂರಪ್ಪ ಅವರನ್ನು ಮಾತನಾಡಿಸಿದ್ದೆ ಇವಾಗ ಖುದ್ದು ಭೇಟಿ ಮಾಡಿದೆ.ಅವರ ನೇತೃತ್ವದಲ್ಲಿ ಚುನಾವಣೆಯಲ್ಲಿ ದಾಖಲೆ ಮಾಡಿದ್ದೇವೆ.ಕೇಂದ್ರದಲ್ಲಿ ಎರಡನೇ ಭಾರಿಗೆ ಸರ್ಕಾರ ರಚಿಸಿದ್ದೇವೆ.ಸಂಸದರ ಸಭೆಯಲ್ಲಿ ಭಾಗವಹಿಸಿದ ಬಳಿಕ ಬಂದು ಭೇಟಿಯಾಗಿದ್ದೇನೆ ಎಂದರು.

      ರಾಜ್ಯದಲ್ಲಿಯೇ ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದಿರುವನು ನಾನು.ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿತ್ತು ಜೊತೆಗೆ ಕಡಿಮೆ ಅಂತರದಲ್ಲಿ ಗೆಲ್ಲುತ್ತೇನೆ ಅಂತ ಅಂದುಕೊಂಡಿದ್ದೆ ಎಂದು ಗೆಲುವಿನ ಅಂತರವನ್ನು ಸಮರ್ಥಿಸಿಕೊಂಡ‌ ಶ್ರೀನಿವಾಸ ಪ್ರಸಾದ್ ಚಾಮರಾಜನಗರದಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆಯಿತು ಎಂದು ಸಂತಸ ವ್ಯಕ್ತಪಡಿಸಿದರು.

      ಕೇಂದ್ರದಲ್ಲಿ ಸಚಿವನಾಗುವ ಆಸೆ ಇಲ್ಲ.ಕೇಂದ್ರ ಸಚಿವ ಸ್ಥಾನ ನೀಡೋದು ಕೇಂದ್ರದ ಪರಮಾಧಿಕಾರಿ .ನಾನಾಗಿಯೇ ಕೇಳಲ್ಲ, ಅಧಿಕಾರದ ಹಿಂದೆ ಹೋದವನಲ್ಲ,ಅವರಾಗಿಯೇ ಕೇಂದ್ರ ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದರು.

       ನಂಜನಗೂಡು ಉಪಚುನಾವಣೆ ಸೋಲಿನ ಸೇಡನ್ನ ನನ್ನ ಜನರು ಈ ಮೂಲಕ ತಿರೀಸಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ ಶ್ರೀನಿವಾಸ ಪ್ರಸಾದ್,ಚಾಮುಂಡೇಶ್ವರಿಯಲ್ಲಿ ಸೋತು ಸುಣ್ಣವಾಗಿ ಬದಾಮಿಗೆ ಓಡಿ ಹೋಗಿದ್ದಾರೆ ಎಂದು ಕುಟುಕಿದರು.

       ದೋಸ್ತಿ ಅಂದರೆ ಒಂದು ಅರ್ಥ ಇದೆ.ಸರ್ಕಾರದಲ್ಲಿ ಸಮನ್ವಯ ಏನಾದ್ರು ಇದೆಯಾ? ಮೈತ್ರಿ ನಾಯಕರು ನೀಡುತ್ತಿರುವ ಹೇಳಿಕೆಗಳೇನು? ಅವರು ಇಷ್ಟೆಲ್ಲಾ ಅವಾಂತರವಾಗಿ ಹೇಗೆ ಸರ್ಕಾರ ಮುಂದುವರೆಸ್ತಾರೆ ಅಂತ ಅವರೆ ಪ್ರಶ್ನೆ ಹಾಕಿಕೊಳ್ಳಬೇಕು‌ ಎಂದು ಸರ್ಕಾರದ ಅಸ್ತಿತ್ವವನ್ನು ಪ್ರಶ್ನಿಸಿದರು.

        ಅತೃಪ್ತ ಶಾಸಕರಿಗೆ ಮಂತ್ರಿಸ್ಥಾನ ನೀಡುವ ಚರ್ಚೆ ನಡೆಯುತ್ತಿದೆ ಒಂದು ವೇಳೆ ನಾಲ್ಕೈದು ಅತೃಪ್ತರಿಗೆ ಸಚಿವ ಸ್ಥಾನ ನೀಡೋಕೆ ಮುಂದಾಗಿದರೆ 15-20 ಶಾಸಕರು ಅತೃಪ್ತಿ ವ್ಯಕ್ತಪಡಿಸುತ್ತಾರೆ.ಇದು ಮತ್ತಷ್ಟು ಮೈಮೇಲೆ ಹಾಕಿಕೊಳ್ಳುವ ತಂತ್ರ.ಇದೇ ಮುಂದುವರೆದ್ರೆ ಮತ್ತಷ್ಟು ಅಪಹಾಸ್ಯಕ್ಕೀಡಾಗ್ತಾರೆ ಇವರು ಎಂದು ಶ್ರೀನಿವಾಸಪ್ರಸಾದ್ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಯತ್ನವನ್ನು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap