ನಿತ್ಯೋತ್ಸವ ಕವಿಗೆ ಭಾವಪೂರ್ಣ ಶ್ರದ್ದಾಂಜಲಿ

ಚಿತ್ರದುರ್ಗ

      ಇಲ್ಲಿನ ಜೋಗಿಮಟ್ಟಿ ರಸ್ತೆಯಲ್ಲಿರುವ ಪ್ರತಿಷ್ಠಿತ ದಾರುಕಾ ಬಡಾವಣೆಯಲ್ಲಿ ನಿತ್ಯೋತ್ಸವ ಕವಿ ಡಾ.ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದವತಿಯಿಂದ ಸೋಮವಾರ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು

      ನಿತ್ಯೋತ್ಸವ ಕವಿ ಎಂದೇ ಪ್ರಖ್ಯಾತಿ ಪಡೆದು ಕನ್ನಡಿಗರ ಮನೆಮಾತಾಗಿದ್ದ ನಿಸಾರ್ ಅಹಮದ್ ಈ ನಾಡಿನ ಶ್ರೇಷ್ಠ ಕನ್ನಡದ ಕವಿ. ಕನ್ನಡ ಸಾಹಿತ್ಯಕ್ಕೆ ಅವರು ಕೊಟ್ಟಿರುವ ಕೊಡುಗೆಯನ್ನು ಎಂದೂ ಮರೆಯಲಾಗದು. ಅವರ ಅನೇಕ ಭಾವಗೀತೆಗಳು ಜನಪ್ರಿಯವಾಗಿವೆ ಎಂದು ನಿವೃತ್ತ ಪ್ರಾದ್ಯಾಪಕ ಬಿ.ಟಿ.ಚಂದ್ರಶೇಖರ್ ಈ ಸಂದರ್ಭದಲ್ಲಿ ಬಣ್ಣಿಸಿದರು.ನಿಸಾರ್ ಅಹಮದ್ ಅವರೊಬ್ಬ ಅಪ್ಪಟ ಕನ್ನಡದ ಕವಿ. ಅವರಲ್ಲಿ ಜಾತಿ,ಧರ್ಮಗಳ ಬೇಧವಿಲ್ಲ. ಕನ್ನಡ ನಾಡು-ನುಡಿ, ಸಂಸ್ಕøತಿಯನ್ನು ಶ್ರೀಮಂತಗೊಳಿಸಿದ್ದಾರೆಂದು ಹೇಳಿದರು

      ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಅರ್.ಮಂಜುನಾಥ್, ನಿಸಾರ್ ಅಹಮದ್ ಅವರು ತಮ್ಮ ಭಾವಗೀತೆಗಳು, ನವ್ಯ ಕಾವ್ಯದ ಮೂಲಕ ಜನರ ಮನೆಗೆದ್ದ ಕವಿ. ಈ ನಾಡಿಗೆ ಅನೇಕ ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಕನ್ನಡದ ಸಂಸ್ಕೃತಿ, ಪರಂಪರೆಯ ಶ್ರೇಷ್ಟತೆಯನ್ನು ತಮ್ಮ ಬರಹಗಳ ಮೂಲಕ ಸಾಕ್ಷೀಕರಿಸಿದವರು ಎಂದರು

      ನಿತ್ಯೋತ್ಸವ ಕಾವ್ಯ, ಸಂಜೆ ಐದರ ಮಳೆ, ಮನಸ್ಸು ಗಾಂಧಿ ಬಜಾರು ಇನ್ನಿತರೆ ಅತ್ಯುತ್ತಮ ಕೃತಿಗಳನ್ನು ನೀಡಿದ್ದ ನಿಸಾರ್ ಅಹಮದ್ ಕೆಲಸಕ್ಕಾಗಿ ಅಲೆದಾಡುತ್ತಿದ್ದಾಗ, ಕುವೆಂಪು ಅವರು ಮೈಸೂರು ವಿವಿಯಲ್ಲಿ ಕೆಲಸ ಕೊಡಿಸಲು ನೆರವಾಗಿದ್ದರು. ಕುವೆಂಪು ಅವರಂತಹ ಮೇರು ಸಾಹಿತಿಗಳ ಜೊತೆ ನಿಸಾರ್ ಅಹಮದ್ ಅವರಿಗೆ ಒಡನಾಟವಿತ್ತು ಎಂದು ಹೇಳಿದರು

      ಈ ಸಂದರ್ಭದಲ್ಲಿ ದಾರುಕಾ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ರಾಮಸ್ವಾಮಿ, ಗುತ್ತಿಗೆದಾರ ಈ.ಶಿವಕುಮಾರ್, ಪತ್ರಕರ್ತ ಮೇಘ ಗಂಗಾಧರ ನಾಯಕ್, ಕೊಟ್ರೇಶ್, ವಿಜಯಕುಮಾರ್,ಇಂಜಿನೀಯರ್ ಶ್ರೀಧರ್, ಕೇದಾರ್‍ನಾಥ್, ಮೋಹನ್,ನಿಂಗಣ್ಣ,ಇನ್ನಿತರರು ಉಪಸ್ಥಿತರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap