ತುರುವೇಕೆರೆ
ಪಟ್ಟಣದ ಕನ್ನಡ ಭವನದಲ್ಲಿ ತಾಲ್ಲೂಕು ಕಸಾಪ, ಸುರಭಿ ಸಂಗಮ, ಕಲಾವಿದರ ಸಂಘ, ಲಯನ್ಸ್ ಕ್ಲಬ್, ಪರ್ತಕರ್ತರ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಿರಿಯ ರಂಗಭೂಮಿ ಕಲಾವಿದ ದಿ.ಮಾಸ್ಟರ್ ಹಿರಣ್ಣಯ್ಯ ಶ್ರದ್ದಾಂಜಲಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಮಾಸ್ಟರ್ ಹಿರಣ್ಣಯ್ಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು.
ತುರುವೇಕೆರೆಯಲ್ಲಿ ಅವರ ತಂದೆ ಕೆ.ಹಿರಿಯಣ್ಣನವರ ಹೆಸರಿನಲ್ಲಿ ರಂಗಮಂದಿರ ನಿರ್ಮಾಣವಾದಾಗ ಸಂಭ್ರಮಪಟ್ಟು ಒಂದೆರಡು ನಾಟಕ ಆಡಿ ಜನರನ್ನು ರಂಜಿಸಿದ್ದರು. ಇಷ್ಟಾದರೂ, ದೇಶ ವಿದೇಶಗಳ ಉನ್ನತ ಪ್ರಶಸ್ತಿಗಳು ಸಿಕ್ಕಿದರೂ ಅವರಿಗೆ ಅವರ ತವರೂರಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಸಿಗಲಿಲ್ಲ ಎಂಬ ಕಹಿ ಮಾತ್ರ ಹಾಗೆ ಎಂದಿಗೂ ಉಳಿದಿರುತ್ತದೆ ಎಂದು ಸಾಹಿತಿ ತುರುವೇಕೆರೆ ಪ್ರಸಾದ್ ವಿಷಾದಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು, ಕಲಾವಿದರಾದ ಟಿ.ಎಸ್.ಬೋರೇಗೌಡ, ಅಮಾನಿಕೆರೆಮಂಜಣ್ಣ, ದೇವಿಹಳ್ಳಿಮಂಜುನಾಥ್, ಸತೀಶ್, ಕಸಾಪ ಗೌರವಾಧ್ಯಕ್ಷ ಪುಟ್ಟರಂಗಪ್ಪ, ಸತ್ಯನಾರಾಯಣ್ ಸೇರಿದಂತೆ ವಿವಿಧ ಗಣ್ಯರು ಮಾತನಾಡಿ, ತಾಲ್ಲೂಕಿನ ಜೊತೆಗಿದ್ದ ಅವರ ಅವಿನಾಭಾವ ಸಂಬಂಧ ಹಾಗೂ ಅವರ ವ್ಯಕ್ತಿತ್ವ ಹಾಗೂ ಸಮಾಜ ತಿದ್ದುವಲ್ಲಿ ಅವರ ಪಾತ್ರದ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಕಸಾಪ ಅಧ್ಯಕ್ಷ ಸಾ.ಶಿ.ದೇವರಾಜು, ಲಯನ್ಸ್‍ನ ಡಾ.ನಾಗರಾಜು, ಗಂಗಾಧರದೇವರಮನೆ, ಬಸವರಾಜು, ಕಾವಲು ಸಮಿತಿ ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಟಿ.ಬಿ.ಮಂಜುನಾಥ್, ಲೈಬ್ರರಿ ರಾಮಚಂದ್ರು, ಪರಮೇಶ್ವರಸ್ವಾಮಿ, ದಿನೇಶ್, ರಂಗಪ್ಪ, ನವೀನ್, ಮೀರಾಕುಮಾರ್ ಸೇರಿದಂತೆ ಅನೇಕ ಕಲಾವಿದರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
