ತಿಪಟೂರು :
ಜೀವನದಲ್ಲಿ ಸದಾ ನಗುತ್ತಾ ನಗಿಸುತ್ತಿರಬೇಕೆ ಎಂದರೆ ಕಂಡಕಂಡದ್ದನ್ನು ನನ್ನದು ಎಂನ್ನದೆ ನನ್ನದಲ್ಲಾ ಎಂದರೆ ಸುಖವಾಗಿ ಬಾಳಬಹುದು ಎಂದು ಪ್ರಸಿದ್ಧ ನಗೆಹನಿ ರಚನೆಕಾರ, ನಾಟಕಕಾರ ಹಾಗೂ ಅಂಕಣಕಾರ ಹೆಚ್.ದುಂಡಿರಾಜ್ ತಿಳಿಸಿದರು.
ನಗರದ ಶ್ರೀ ಸತ್ಯ ಗಣಪತಿ ಆಸ್ಥಾನ ಮಂಟಪದಲ್ಲಿ ನಡೆದ ಬಯಲುಸೀಮೆ ಸಾಮಾಜಿಕ ಸಾಂಸ್ಕೃತಿಕ ಸಂಘದ 18ನೇ ವಾರ್ಷಿಕೋತ್ಸವದ ಅಂಗವಾಗಿ ಭಾವಗೀತೆ ಗಾಯನ ಹಾಗೂ ಅಭಿನಂದನಾ ಸಮಾರಂಭವ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲವು ನನದೆನ್ನುವ ಭಾವನೆಯನ್ನು ಎಲ್ಲದು ಎಲ್ಲರದು ಎಂದು ನಗುವನ್ನು ಹಂಚುತ್ತಾ ಬಾಳಿದರೆ ಜೀವನ ಸುಂದರವೆಂದು ತಿಳಿಸಿದ ಅವರು, ಬಿಟ್ಟು ಮನುಷ್ಯ ಸಮಾಜ ಜೀವಿ, ಸಂಘ ಜೀವಿ ಹಾಗೂ ಭಾವನ ಜೀವಿಯಾಗಿದ್ದಾನೆ.
ತಮ್ಮ ಭಾವನೆ ಮತ್ತು ಮನೋಭಿಲಾಷೆಗಳನ್ನು ಈಡೇರಿಸಿಕೊಳ್ಳಲು ಸಂಸ್ಕಾರದ ಶಿಕ್ಷಣದ ಕಡೆ ಹೆಚ್ಚೆ ಹಾಕಬೇಕು. ಬದುಕಿನಲ್ಲಿ ಎಲ್ಲಾ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸದೇ, ಚಿಂತಿಸದೇ ನಗುವಿನ ಹಾಸ್ಯದ ಸಂವೇದನಾಶೀಲ ಗುಣದೊಂದಿಗೆ ವಿಚಾರಗಳನ್ನು ಸ್ವೀಕಾರ ಮಾಡುತ್ತಾ ಶಾಂತಿ, ನೆಮ್ಮದಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಮಕ್ಕಳು ಎಳೆಯ ವಯಸ್ಸಿನಲ್ಲಿಯೇ ಸಂಘಗಳು ನಡೆಸುವ ಇಂತಹ ಭಾವಗೀತಾತ್ಮಕವಾದ ಸ್ಫರ್ಧೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿಕೊಳ್ಳುತ್ತಾ ತಮ್ಮ ಬುದ್ಧಿಯನ್ನು ವಿಕಾಸ ಮಾಡಿಕೊಳ್ಳಬೇಕು. ಶಿಸ್ತು, ಶ್ರದ್ಧೆಗಳಿಂದ ಅಭ್ಯಾಸ ಮಾಡಿ ಉನ್ನತ ಶಿಕ್ಷಣವನ್ನು ಪಡೆದು ತಮ್ಮ ಸುಂದರವಾದ ಬದುಕನ್ನು ನಿರ್ಮಿಸಿಕೊಳ್ಳುವತ್ತ ದಾಪುಗಾಲು ಹಾಕಬೇಕು.
ಯಾವುದೇ ಕೆಟ್ಟ ಪ್ರಭಾವ, ಪ್ರೇರಣೆಗಳಿಗೆ ಆಕರ್ಷಿತರಾಗದೇ ಶಿಕ್ಷಣದಲ್ಲಿ ಸಂಸ್ಕಾರವನ್ನು ಪಡೆದುಕೊಳ್ಳುತ್ತಾ ಅರ್ಥಪೂರ್ಣವಾದ ಸಾಂಸ್ಕೃತಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಅಪಾರವಾದ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸನ್ನು ಗಳಿಸಬೇಕು. ಸತ್ಪ್ರಜೆಗಳಾಗಿ ಕೀರ್ತಿ, ಗೌರವಗಳಿಂದ ತನ್ನ ಹಿರಿಮೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಅದ್ದರಿಂದ ಪ್ರತಿಯೊಬ್ಬರೂ ಸಂಘ, ಸಂಸ್ಥೆಗಳ ಸಾಂಸ್ಕೃತಿಕ, ಸಾಮಾಜಿಕ, ಚಟುವಟಿಕೆಗಳೊಂದಿಗೆ ಬೆರೆತು ಆನಂದದ ಕ್ಷಣಗಳನ್ನು ಅನುಭವಿಸಬೇಕು. ಆಗ ಮಾತ್ರ ಜೀವನದಲ್ಲಿ ಪರಿಪೂರ್ಣತೆಯನ್ನು ಕಾಣಬಹುದಾಗಿದೆ ಎಂದರು.
ಬೆಂಗಳೂರಿನ ಹಿರಿಯ ಸಿನಿಮಾ ಪತ್ರಕರ್ತ ಗಣೇಶ್ ಕಾಸರಗೂಡು ಮಾತನಾಡಿ ನಾಡಿನ ಸಾಂಸ್ಕೃತಿಕ ಚಟುವಟಿಕೆ, ಕಲೆ, ಸಾಹಿತ್ಯವನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿಗಳು ಸಂಘ ಸಂಸ್ಥೆಯ ಮೇಲಿರುತ್ತದೆ. ವಿಶ್ವದಲ್ಲಿಯೇ ಭಾರತದ ಯುವ ಜನತೆಯ ಶಕ್ತಿಯ ಮೇಲೆ ಎಲ್ಲರ ಕಣ್ಣು ಅಡಕವಾಗಿದೆ. ಯುವಶಕ್ತಿಯ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವಂತಹ ಕಾರ್ಯವನ್ನು ನಾವೆಲ್ಲರೂ ಮಾಡಬೇಕಾಗಿದೆ.
ಇಂದಿನ ಯುವ ಜನತೆ ಅನವಶ್ಯಕವಾಗಿ ಇತರ ವಿಚಾರಗಳಿಗೆ ಹೆಚ್ಚಿನ ಮಹತ್ವನ್ನು ನೀಡಿ ತಮ್ಮ ಗುರಿಯನ್ನು ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಇಂತಹ ಯುವಜನತೆಗೆ ಬಯಲು ಸೀಮೆಯಂತಹ ಸಂಘ ಸಂಸ್ಥೆಗಳ ಮಾರ್ಗದರ್ಶನದಿಂದ ಉತ್ತಮ ಕಾರ್ಯವನ್ನು ಕೈಗೊಳ್ಳಲು ಸಹಕಾರಿಯಾಗಲಿದೆ. ಸಂಘ ಸಂಸ್ಥೆಗಳು ಸಮಾಜಕ್ಕೆ ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಸಹಕಾರಿಯಾಗಿರಬೇಕು. ಸಂಘದ ಕಾರ್ಯಗಳು ಸಮಾಜದ ಮೇಲೆ ಬೀರುವಂತಹ ಪ್ರಭಾವಗಳು ಉತ್ತಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಲಿದೆ. ವಿವಿಧ ಕ್ಷೇತ್ರದಲ್ಲಿ ನಿಸ್ವಾರ್ತ ಸೇವೆಯನ್ನು ಮಾಡಿದಂತಹ ಗಣ್ಯರನ್ನು ಗುರುತಿಸಿ ನೀಡುವ ಗೌರವದಿಂದ ಇತರರಿಗೆ ಪ್ರೇರಣೆಯಾಗಿ ಸಮಾಜಕ್ಕಾಗಿ ಉತ್ತಮ ಕಾರ್ಯಗಳನ್ನು ಮಾಡಲು ಮುಂದಾಗಬಹುದಾಗಿದೆ.
ಇದರಿಂದಾಗಿ ಸಮಾಜದ ಉನ್ನತಿಗೆ ಹೆಚ್ಚಿನ ಸಹಕಾರವನ್ನು ನೀಡಬಹುದಾಗಿದೆ.ತುಮಕೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮು ಮಾತನಾಡಿ ಪ್ರಸ್ತುತ ದಿನಗಳಲ್ಲಿ ದೇಶದ ಶೇ.70ರಷ್ಟು ಜನರು ದಿನನಿತ್ಯವೂ 3 ಗಂಟೆಗಳ ಕಾಲ ಮೊಬೈಲ್ ಬಳಕೆಯಲ್ಲಿ ತಲ್ಲಿನರಾಗಿರುತ್ತಾರೆ. ಜೊತೆಗೆ ಶೇ.87ರಷ್ಟು ಜನ ಒಂದು ಜಿಬಿ ಇಂಟರ್‍ನೆಟ್ ಡೆಟಾ ಬಳಕೆಯನ್ನು ಮಾಡುವವರಿದ್ದಾರೆ.
ಇದರಿಂದಾಗುವ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದ್ದು ಮೊಬೈಲ್ ಬಳಕೆಯಿಂದ ಹೊರ ಬರುವ ಪ್ರಯತ್ನವನ್ನು ಪ್ರತಿಯೊಬ್ಬರು ಮಾಡಬೇಕಿದೆ. ಹಿಂದಿನ ದಿನಗಳಲ್ಲಿ ಟಿವಿಯಿಂದ ಹೊರಬರುವಂತೆ ಹೇಳುತ್ತಿದ್ದರೂ ಇಂದು ಮೊಬೈಲ್‍ನಿಂದ ಹೊರ ಬರುವಂತೆ ಹೇಳಬೇಕಿದೆ. ಮಕ್ಕಳಲ್ಲಿರುವಂತಹ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕಿದ್ದು, ಪೋಷಕರ ಮೇಲೆ ಹೆಚ್ಚಿನ ಜವಾಬ್ದಾರಿಯಿರುತ್ತದೆ.
ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೇ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಾಗ ಮಾತ್ರವೇ ಪರಿಪೂರ್ಣ ಸಾರ್ಥಕತೆಯನ್ನು ಸಾಧಿಸಬಹುದು. ಮಕ್ಕಳಲ್ಲಿ ಭಾವಗೀತೆಯ ಸೃಷ್ಠಿ, ಹಾಡುವಿಕೆ, ಅದರ ಅರ್ಥಗಳನ್ನು ತಿಳಿಸಿ ನಂತರದಲ್ಲಿ ಹಾಡನ್ನು ಹಾಡಿಸುವುದರಿಂದ ತಲ್ಲಿನತೆ ಮತ್ತು ಶ್ರದ್ಧೆಯಿಂದ ಕಲಿಯಲು ಅನುಕೂಲವಾಗಿ ಉತ್ತಮ ಪ್ರತಭೆಗಳನ್ನು ಸ್ಥಳೀಯವಾಗಿ ಅನಾವರಣ ಮಡಲು ಸಾಧ್ಯವಾಗುತ್ತದೆ ಎಂದರು.
ಚಿಕ್ಕನಾಯಕನಹಳ್ಳಿಯ ಹಿರಿಯ ಸಾಹಿತಿ ಡಾ.ಎಂ.ವಿ.ನಾಗರಾಜು ಮಾತನಾಡಿ ಜೀವನದಲ್ಲಿ ಏನಾದರೂ ಸಾಧನೆಯನ್ನು ಮಾಡಬೇಕೆಂದರೆ ಅದಕ್ಕೆ ಹೆಚ್ಚಿನನ ಶ್ರಮವನ್ನು ವಹಿಸಿ ನಿಷ್ಠೆ, ಏಕಾಗ್ರತೆ, ಸಮಾಧಾನದಿಂದಿದ್ದರೆ ಮಾತ್ರವೇ ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಮನುಷ್ಯನನ್ನು ರೂಪಿಸುವಂತಹ ಶಕ್ತಿ ಸಂಸ್ಕೃತಿ ಮತ್ತು ನಾಗರಿಕತೆಗೆ ಇರುತ್ತದೆ.
ಸಂಸ್ಕೃತಿಯೂ ಮನುಷ್ಯನ ಅಂತರಂಗದ ಭಾವನೆಗಳನ್ನು ಹೆಚ್ಚಾಗುವಂತೆ ಮಾಡಿದರೆ ನಾಗರಿಕತೆಯೂ ಮಾನುಷ್ಯನ ಪ್ರಸ್ತುತ ಚಿಂತನೆಗಳಿಗೆ ಅನುಗುಣವಾಗಿ ನಡೆಯುವಂತೆ ಅಳವಡಿಸಿಕೊಳ್ಳುವಂತೆ ಮಾಡುತ್ತದೆ. ಅದ್ದರಿಂದ ಇಂದಿನ ಸಮಾಜವನ್ನು ಸಧೃಡವಾಗಿ ನಿರ್ಮಾಣ ಮಾಡುವಂತಹ ಶಕ್ತಿ ಮನುಷ್ಯನಿಗಿದ್ದು ಸಂಸ್ಕೃತಿಯನ್ನು ಅಳವಡಿಸಿಕೊಂಡು ಉಳಿಸಿ ಬೆಳೆಸಿದರೆ ಮಾತ್ರವೇ ಸಂಸ್ಕೃತಿಯೂ ನಮ್ಮನ್ನು ಕಾಪಾಡುತ್ತದೆ ಎಂದರು.
ಈ ಸಂದರ್ಭದಲ್ಲಿ ಈಚನೂರಿನ ಸಂಗೀತ ಮತ್ತು ಮೃದಂಗ ವಿದ್ವಾಸ ಹೆಚ್.ಟಿ.ಚಂದ್ರಶೇಖರಯ್ಯ, ಹಿರಿಯ ರಂಗಭೂಮಿ, ಚಲನಚಿತ್ರ ಕಲಾವಿದೆ ಹೇಮಲತಾ, ಕಾರ್ನಟಕ ರಾಜ್ಯ ಕಾರ್ಯನಿರತ ಪರ್ತಕರ್ತರ ಸಂಘದ ನಿರ್ದೇಶಕ ನಾಗರಾಜು, ತಾ.ಪಂ.ಅಧ್ಯಕ್ಷ ಜಿ.ಶಿವಸ್ವಾಮಿ, ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಮಣಕೀಕೆರೆ ರವಿಕುಮಾರ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಸಿ.ಬಿ.ಶಶಿಧರ್, ಸಂಘದ ಗೌರವಾಧ್ಯಕ್ಷ, ಪರ್ತಕರ್ತ ಜಿ.ಇಂದ್ರಕುಮಾರ್, ಅಧ್ಯಕ್ಷ ಹೆಚ್.ಸಿ.ನಾಗರಾಜು, ಉಪಾಧ್ಯಕ್ಷೆ ಗೌರಮ್ಮ ಎನ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಬಾನುಪ್ರಶಾಂತ್, ಉಪನ್ಯಾಸಕ ರೇಣುಕಯ್ಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.