ಚಿತ್ರದುರ್ಗ
ರೋಟರಿ ಕ್ಲಬ್, ಚಿತ್ರದುರ್ಗ ಪೋರ್ಟ್ ಮತ್ತು ಇನ್ನರ್ ವ್ಹೀಲ್ ಕ್ಲಬ್‍ವತಿಯಿಂದ ಮಂಗಳವಾರ ರೋಟರಿ ಶಾಲೆ ಬಳಿ ಚಿಂದಿ ಆಯುವ ಮಹಿಳೆಯರಿಗೆ ಸುರಕ್ಷಾ ಸಾಧನ ವಿತರಣೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ನಗರದ ವಿವಿಧ ಬಡಾವಣೆಗಳ ಚಿಂದಿ ಆಯುವ ಸುಮಾರು 50ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷಾ ಸಾಧನಗಳನ್ನು ವಿತರಣೆ ಮಾಡಿ ಅವರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು
ರೋಟರಿ ಕ್ಲಬ್ ಅಧ್ಯಕ್ಷ ಜಿ.ವಿ.ಮಂಜುನಾಥ್ ,ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ರೇಖಾ ಸಂತೋಷ್ , ಶ್ರೀಲತಾ ದೊಂತಿ, ನಗರಸಭೆ ಇಂಜಿನೀಯರ್ ಸರಳ ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಸವಿತಾ ಶೇಖರ್, ವಿಜ್ಞಾನ ಸಮಿತಿ ಅಧ್ಯಕ್ಷ ಡಾ.ಹೆಚ್.ಕೆ.ಎಸ್.ಸ್ವಾಮಿ, ಇನ್ನರ್‍ವ್ಹೀಲ್ ಕ್ಲಬ್ ಮಾಜಿ ಕಾರ್ಯದರ್ಶಿ ವರಲಕ್ಷ್ಮೀ ರತ್ನಾಕರ್, ಗಾಯಿತ್ರಿ, ಕೆ.ಕೆ.ಕಮಾನಿ, ಮಹಡಿ ಶಿವಮೂರ್ತಿ ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು