ದಾವಣಗೆರೆ:
ಹೊನ್ನಾಳಿ ತಾಲೂಕಿನ ತೀರ್ಥರಾಮೇಶ್ವರದಲ್ಲಿ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ಸಂಯುಕ್ತಾಶ್ರಯದಲ್ಲಿ ಮೂರು ದಿನಗಳ ಸಹಾಸ ತರಬೇತಿ ಶಿಬಿರ ನಡೆಯಿತು.
ಈ ಸಹಾಸ ತರಬೇತಿ ಶಿಬಿರದಲ್ಲಿ ಹೊನ್ನಾಳಿ, ನ್ಯಾಮತಿ, ಚನ್ನಗಿರಿ, ಬಸವಪಟ್ಟಣ, ಹರಿಹರ, ಸಂತೆಬೆನ್ನೂರು, ತಾಲೂಕುಗಳ ಕಾಲೇಜುಗಳಿಂದ ಸುಮಾರು 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಡಿನಲ್ಲಿ ಚಾರಣ ಹೋಗುವಾಗ ಅನುಸರಿಸುವ ಮಾರ್ಗಗಳು, ಕಾಡಿನಲ್ಲಿ ಯಾವ ರೀತಿ ಇರಬೇಕು, ಪ್ರಾಣಿಗಳಿಂದ ಮುನ್ನೆಚ್ಚರಿಕೆ ಕ್ರಮಗಳು ಹಾಗೂ ಪರಿಸರದಲ್ಲಿ ನಾವು ಹೇಗೆ ಇರಬೇಕೆನ್ನುವುದರ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಶಿಲಾರೋಹಣ, ಚಾರಣ, ಸಲಕರಣೆಗಳ ಬಗ್ಗೆ ಮಾಹಿತಿ, ಟೆಂಟ್ ಹಾಕುವ ಮತ್ತು ಬಳಸುವ ವಿಧಾನ, ಜಿಪ್ ಲೈನ್, ಗುಂಪು ಆಟಗಳು, ಬುದ್ದಿವಂತಿಕೆಯ ಆಟಗಳು, ಪರಿಸರ ಸಂರಕ್ಷಣೆ, ವ್ಯಕ್ತಿತ್ವ ವಿಕಾಸನ, ಫೈರ್ ಕ್ಯಾಂಪ್ ಮತ್ತಿತರರು ಕ್ರೀಡೆಗಳು ನಡೆದವು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಶ್ರೀನಿವಾಸ್, ಹೊನ್ನಾಳಿಯ ಜಿ. ವರ್ಣೆಶಪ್ಪ, ಭೋಜರಾಜ್, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿಯ ಕಾರ್ಯದರ್ಶಿ ಹಾಗೂ ಸಾಹಸ ಕ್ರೀಡಾ ಮುಖ್ಯ ತರಬೇತುದಾರ ಎನ್.ಕೆ.ಕೊಟ್ರೇಶ್, ತರಬೇತುದಾರರಾದ ಶಂಕರ್, ಶಿವಕುಮಾರ್, ಶಶಿಕುಮಾರ್, ವರ್ಷ, ಬಸವರಾಜ್, ಕಾಂತ್‍ರಾಜ್, ಚೇತನ್, ಉದಯ್ ಮತ್ತಿತರರು ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.