ಬಿಜೆಪಿ ಸೇರ್ಪಡೆಯಾದ ಸೈನಾ ನೆಹ್ವಾಲ್..!

ನವದೆಹಲಿ:

     ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿದ ಆಟಗಾರ್ತಿ ಸೈನಾ ನೆಹ್ವಾಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಯಾಗಿದ್ದಾರೆ.

     ಹರ್ಯಾಣ ಮೂಲದ 29ರ ಹರೆಯದ ಸೈನಾ ಅವರ ಜೊತೆ ಅವರ ಹಿರಿಯ ಸೋದರಿ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಚಂದ್ರಾಂಶು ಕೂಡ ಬಿಜೆಪಿ ಸೇರಿದ್ದಾರೆ.

     ಬ್ಯಾಡ್ಮಿಂಟನ್ ನಲ್ಲಿ ಇತ್ತೀಚೆಗೆ ಏರಿಳಿತಗಳನ್ನು ಕಾಣುತ್ತಿರುವ ಸೈನಾ ನೆಹ್ವಾಲ್ 2018ರಲ್ಲಿ ಸಹ ಆಟಗಾರ ಪಾರುಪಳ್ಳಿ ಕಶ್ಯಪ್ ಅವರನ್ನು ವಿವಾಹವಾಗಿದ್ದಾರೆ.

    24ಕ್ಕೂ ಅಧಿಕ ಅಂತರಾಷ್ಟ್ರೀಯ ಪ್ರಶಸ್ತಿ, ಪದಕಗಳನ್ನು ಮುಡಿಗೇರಿಸಿಕೊಂಡಿರುವ ಸೈನಾ ವಿಶ್ವ ರ್ಯಾಂಕಿಂಗ್ ನಲ್ಲಿ ನಂಬರ್ 1 ಸ್ಥಾನ ಗಳಿಸಿದ ಭಾರತದ ಮೊದಲ ಮಹಿಳಾ ಬ್ಯಾಡ್ಮಿಂಟನ್ ತಾರೆ. ಲಂಡನ್ ಒಲಂಪಿಕ್ಸ್ ನಲ್ಲಿ 2012ರಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗಳಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap