ಸಕಾಲದಲ್ಲಿ ತೆರಿಗೆ ಪಾವತಿಸದಿದ್ದರೆ ಶೇ.10 ರಷ್ಟು ದಂಡ

ದಾವಣಗೆರೆ :

    ಜಿಎಸ್‍ಟಿ ಫೈಲ್ ರಿಟರ್ನ್ ಸಲ್ಲಿಕೆಗೆ ಜೂನ್ 30 ಕೊನೆ ದಿನವಾಗಿದ್ದು, ಸಕಾಲದಲ್ಲಿ ತೆರಿಗೆ ಪಾವತಿಸದಿದ್ದರೆ, ಶೇ.10ರಷ್ಟು ಹತ್ತರಷ್ಟು ದಂಡ ತರಬೇಕಾಗುತ್ತದೆ ಎಂದು ಬೆಂಗಳೂರಿನ ಸನ್ನದು ಲೆಕ್ಕ ಪರಿಶೋಧಕ ಪ್ರವೀಣ್‍ಕುಮಾರ್ ಗೆಲ್ಲಾ ಎಚ್ಚರಿಸಿದರು.

     ನಗರದ ಎಂಬಿಎ ಕಾಲೇಜು ಬಾಪೂಜಿ ಸಭಾಂಗಣದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದಿಂದ ಆಯೋಜಿಸಿದ್ದ ಜಿಎಸ್‍ಟಿ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ಗೊಂದಲಕ್ಕೆ ಒಳಗಾಗದೇ ಜೂನ್ 30ರ ಒಳಗೆ ಜಿಎಸ್‍ಟಿ ಪೋರ್ಟ್‍ಲ್‍ನ ಈ ನಮೂನೆಯಲ್ಲಿ ಫೈಲ್ ರಿಟರ್ನ್ ಸಲ್ಲಿಸಿ, ದಂಡ ವಿಧಿಸುವುದರಿಂದ ತಪ್ಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

     ಲೆಕ್ಕಪರಿಶೋಧಕರು ಸಕಾಲದಲ್ಲಿ ಜಿಎಸ್‍ಟಿ ಪೆÇೀರ್ಟಲ್‍ನ ಈ ನಮೂನೆಯಲ್ಲಿ ಜಿಎಸ್‍ಟಿ ಫೈಲ್ ರಿಟರ್ನ್ ಸಲ್ಲಿಸಿದರೆ, ದಂಡದ ಪರಿಚ್ಚೇದದಿಂದ ವರ್ತಕರು ತಪ್ಪಿಸಿಕೊಳ್ಳಬಹುದು. 2017-18ರ ವಾರ್ಷಿಕ ಜಿಎಸ್‍ಟಿ ರಿಟರ್ನ್ ಸಲ್ಲಿಸಿದವರ ಸಂಖ್ಯೆ ಸಾಕಷ್ಟು ಕಡಿಮೆಯಿದ್ದು, ಈ ವರೆಗೂ ಶೇ.3ರಿಂದ 5 ರಷ್ಟು ಲೆಕ್ಕಪರಿಶೋಧಕರು ಮಾತ್ರ ಜಿಎಸ್‍ಟಿ ಪೋರ್ಟಲ್‍ನಲ್ಲಿ ರಿಟರ್ನ್ ಸಲ್ಲಿಸಿದ್ದಾರೆ. ಬಹುತೇಕರು ಏಪ್ರಿಲ್ ನಂತರವೇ ರಿಟರ್ನ್ ಸಲ್ಲಿಸುವ ಬಗ್ಗೆ ಗಮನ ಹರಿಸುತ್ತಿದ್ದಾರೆ.

    ಫೈಲ್ ರಿಟರ್ನ್‍ಗೆ ದಿನಾಂಕ ವಿಸ್ತರಣೆ ಬಗ್ಗೆ ಸರಕಾರ ಈ ವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆದ್ದರಿಂದ ಜೂನ್ 30ರೊಳಗೆ ಐಟಿ ಸಲ್ಲಿಸುವುದು ಒಳ್ಳೆಯದು ಎಂದರು.

     ಸಪ್ಲೇಯರ್ ಇನ್‍ವಾಯ್ಸ್ ಬಿಲ್‍ಗಳಲ್ಲಿ ನಮೂದಿಸಿದ ಎಸ್‍ಜಿಎಸ್‍ಟಿ, ಸಿಜಿಎಸ್‍ಟಿ, ಐಜಿಎಸ್‍ಟಿಗಳನ್ನು ಜಿಎಸ್‍ಟಿಆರ್ 1ರ ನಮೂನೆಯಲ್ಲಿ ಸರಿಯಾಗಿ ತುಂಬದೇ ಇರುವುದು. ನಮೂನೆಯಲ್ಲಿ ಅಕೌಂಟ್‍ನ್ನು ಸರಿಯಾಗಿ ನಮೂದಿಸದೇ ಇರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳು ಇರುವುದರಿಂದ 2017-2018ರ ರಿಟರ್ನ್ ಸಲ್ಲಿಕೆಗೆ ಕಾಲಾವಕಾಶ ಕೇಳುತ್ತಿದ್ದಾರೆ.

    ಹೀಗಾಗಿ ತೆರಿಗೆ ಸಲಹೆಗಾರರು ರಿಟರ್ನ್ ಸಲ್ಲಿಸುವುದನ್ನು ವಿಳಂಬ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಲೆಕ್ಕಪರಿಶೋಧಕರು ವರ್ತಕರಿಗೆ ಸರಿಯಾದ ಮಾಹಿತಿ ನೀಡಿ ಅವರನ್ನು ಕ್ರಮಬದ್ಧವಾಗಿ ಜಿಎಸ್‍ಟಿ ವ್ಯಾಪ್ತಿಯಲ್ಲಿ ತೊಡಗಿಸಿದಾಗ ವರ್ತಕರು ಸಹ ನೆಮ್ಮದಿಯಿಂದ ಇರಲು ಸಾಧ್ಯವಾಗಲಿದೆ. ಆದ್ದರಿಂದ ಲೆಕ್ಕಪರಿಶೋಧಕರು, ವರ್ತಕರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

    ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ ಮಾತನಾಡಿ, ತೆರಿಗೆ ಪಾವತಿಯಲ್ಲಿ ಪ್ರತಿನಿತ್ಯವೂ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಮೊದಲು ಕಮರ್ಷಿಯಲ್ ಟ್ಯಾಕ್ಸ್, ನಂತರ ವ್ಯಾಟ್, ಈಗ ಜಿಎಸ್‍ಟಿ ಹೀಗೆ ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದೆ. ಆದ್ದರಿಂದ ಇವುಗಳಲ್ಲಿರುವ ನೀತಿ ನಿಯಮ, ಡಾಟಾ ಫೈಲಿಂಗ್, ಟೇಬಲ್ ಫೈಲ್ ತಿಳಿದುಕೊಳ್ಳಲು ಚಾರ್ಟೆಡ್ ಅಂಕೌಂಟ್‍ಗಳು ಅಧ್ಯಯನದಲ್ಲಿ ತೊಡಗುವುದರ ಜತೆಗೆ, ಅನುಭವಸ್ಥರಿಂದ ಸಲಹೆ ಪಡೆಯಬೇಕೆಂದು ಹೇಳಿದರು.

     ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಲೆಕ್ಕ ಪರಿಶೋಧಕರಿದ್ದು, ಇವರ ಜತೆ ತೆರಿಗೆ ಸಲಹೆಗಾರರು ಇದ್ದಾರೆ. ಅವರಿಗೂ ರಿಟರ್ನ್ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ತೆರಿಗೆ ಸಲಹೆಗಾರರಿಗೆ ಲೆಕ್ಕ ಪರಿಶೋಧಕ ರೀತಿಯೇ ಪರೀಕ್ಷೆ ನಡೆಸಿ ಅವರಿಗೊಂದು ಸರ್ಟೀಫಿಕೇಟ್ ನೀಡಲು ಸರಕಾರಕ್ಕೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ಒತ್ತಾಯಿಸಬೇಕು. ಇನ್ನು ಲೆಕ್ಕ ಪರಿಶೋಧಕರಿ ಗೋಸ್ಕರ ಟ್ಯಾಕ್ಸ್ ಪ್ರಾಕ್ಟೀಸ್ ಕಟ್ಟಡ ಪ್ರಾರಂಭಿಸಬೇಕೆಂದು ಆಗ್ರಹಿಸಿದರು.

    ಮೆಡಿಕಲ್‍ನಲ್ಲಿ ಕಣ್ಣಿಗೆ, ಕಿವಿಗೆ, ಮೂಗಿಗೆ ಒಬ್ಬೊಬ್ಬ ಫಿಜೇಶಿಯನ್ ಇರುತ್ತಾರೆ. ಹಾಗೆಯೇ ಜಿಎಸ್‍ಟಿ 9, 9ಎ ಮತ್ತು 9ಸಿಗೆ ಒಬ್ಬೊಬ್ಬ ಪರಿಣಿತರು ಬೇಕಾಗಿದ್ದಾರೆ. ಈಗ ಫೈರಿಂಗ್ ಆಫ್ ಆ್ಯಯನಿವಲ್ ರಿಟರ್ನ್ ಸಲ್ಲಿಸಬೇಕಾಗಿದೆ. ಇದರಿಂದ ಆಡಿಟ್ ಮಾಡುವವರಿಗೆ ಒತ್ತಡ ಹೆಚ್ಚಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಡೈರೇಕ್ಟ್ ಟ್ಯಾಕ್ಸ್ ಕೋಡ್ ಬರುತ್ತಿದ್ದು, ಇದಕ್ಕಾಗಿ ಕಮಿಟಿ ರಚನೆಯಾಗುತ್ತಿದೆ. ಈ ಬಗ್ಗೆಯೂ ಲೆಕ್ಕ ಪರಿಶೋಧಕರು ಸಾಕಷ್ಟು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದರು.

     ಕಾರ್ಯಕ್ರಮದಲ್ಲಿ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಿಗೆ ರಾಧೇಶ್, ಗೌರವ ಅಧ್ಯಕ್ಷ ಬಿ.ಜಿ. ಬಸವರಾಜಪ್ಪ, ಉಪಾಧ್ಯಕ್ಷ ಎಚ್.ಎಸ್.ಮಂಜುನಾಥ್, ಖಜಾಂಚಿ ಡಿ.ಎಂ. ರೇವಣಸಿದ್ಧಪ್ಪ, ಪ್ರಮುಖರಾದ ಸಿ.ಮಹಾಂತೇಶ್, ಜಿ.ಎಸ್.ಜಗದೀಶ್, ಸಿ.ವಿನಯ್, ಆರ್.ಎಸ್.ಸುಬ್ರಮಣ್ಯ, ಎಚ್.ಎಸ್.ನಾಗರಾಜ್‍ರಾವ್, ಎಂ.ಎಸ್.ಕುಮಾರಸ್ವಾಮಿ, ಕೆ.ಲೋಕೇಶ್, ಕೆ.ಎಸ್.ರುದ್ರಸ್ವಾಮಿ, ಬಿ.ವಿನಯ್‍ಕುಮಾರ್, ಬಿ.ಎಂ.ಸಂತೋಷ್ ಕುಮಾರ್, ಎಸ್.ರವಿಕುಮಾರ್, ಆರ್.ಮುಸ್ತಾಫ್, ಕೆ.ಎಸ್. ವೀರಣ್ಣ ಮತ್ತಿತರರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap