ಮುಂಬೈ
ಬಾಲಿವುಡ್ ದಬಂಗ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಮುಂಬರುವ ‘ದಬಂಗ್ 3′ ಚಿತ್ರಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದಾರೆ.’ಭಾರತ’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರನ್ನು ಬೇರೆ ಬೇರೆ ವಯಸ್ಸಿನ ಪಾತ್ರಗಳಲ್ಲಿ ತೋರಿಸಲಾಗಿದೆ. ಸಲ್ಮಾನ್ ಖಾನ್ ಅವರನ್ನು 70ರ ವಯಸ್ಸಿನ ಹಿರಿಯ ಅಜ್ಜನಿಂದ ಎಲ್ಲಾ ವೇಷಗಳಿಗೂ ಸೂಕ್ತವಾಗುವಂತೆ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಅವರು ತಮ್ಮ ಮುಖದ ಜೊತೆಗೆ ದೈಹಿಕ ನೋಟದಲ್ಲಿ ಕೂಡ ಮಾರ್ಪಾಡು ಮಾಡಿಕೊಂಡಿದ್ದಾರೆ. ಹೀಗಾಗಿ ಸಲ್ಮಾನ್ ಖಾನ್ ಅವರು ‘ದಬಂಗ್ 3’ ಚಿತ್ರಕ್ಕಾಗಿ ಸಾಕಷ್ಟು ಸಿದ್ಧತೆ ನಡೆಸಿದ್ದಾರೆ.
‘ದಬಂಗ್ 3’ ರಲ್ಲಿ ಸಲ್ಮಾನ್ ಖಾನ್ ಚುಲ್ ಬುಲ್ ಪಾಂಡೆ ಅವರ ಪಾತ್ರ ಅಭಿನಯಿಸಲಿದ್ದಾರೆ. ಆದರೆ, ಈ ಬಾರಿ ಅವರ ವಯಸ್ಸಿನಲ್ಲಿ ಭಾರಿ ಅಂತರ ಕಂಡು ಬರಲಿದೆ. ಚಿತ್ರದ ಫ್ಲ್ಯಾಷ್ ಬ್ಯಾಕ್ ದೃಶ್ಯಗಳಲ್ಲಿ ಸಲ್ಮಾನ್ ಖಾನ್ ಅವರಿಗೆ 20 ವಯಸ್ಸಿನ ಚುಲ್ ಬುಲ್ ಪಾಂಡೆ ಅವರ ಪಾತ್ರ ಅಭಿನಯಿಸಬೇಕಿದೆ. ಹೀಗಾಗಿ ಅವರು ದಿನದ ಬಹುತೇಕ ಸಮಯವನ್ನು ಜಿಮ್ ನಲ್ಲೇ ಕಳೆಯುತ್ತಿದ್ದಾರೆ.ಸಲ್ಮಾನ್ ಖಾನ್ ಇತ್ತೀಚೆಗಷ್ಟೇ ಜಿಮ್ ನಲ್ಲಿ ತಾವು ವ್ಯಾಯಾಮ ನಿರತರಾದ ವೀಡಿಯೋ ವೊಂದನ್ನು ಶೇರ್ ಮಾಡಿಕೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
