ಸಮಗೃ ನೀರಾವರಿ ಯೋಜನೆಗಾಗಿ ಹೊನ್ನವಳ್ಳಿ ಬಂದ್

ತಿಪಟೂರು :

      ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಕೇಂದ್ರದ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಇಂದು ಬಿಗುವಿನ ವಾತಾವರಣ ನಿರ್ಮಾಣವಾಗುವುದರ ಜೊತೆಗೆ ಅಂಗಡಿ ಮುಂಗಟ್ಟುಗಳು ಸಂಪೂರ್ಣವಾಗಿ ಮುಚ್ಚಿ ಎಲ್ಲಾರು ಗ್ರಾ.ಪಂ ಮುಂಭಾಗದಲ್ಲಿ ಸಭೆ ಸೇರಿದ್ದರು ಸುಮಾರು 360 ಸುಡುಬಿಸಲಿನಲ್ಲಿ ಬೆಳಗ್ಗೆ 11 ರಿಂದ ಮಧ್ಯಾನ್ನ 1.00 ಗಂಟೆಯವರೆಗೂ ನೂರಾರು ಗ್ರಾಮಸ್ಥರು ನೀರಿಗಾಗಿ ಪ್ರತಿಭಟನೆ ನಡೆಸಿದರು.

       ಇಂದು ಬೆಳಗ್ಗೆ ಪೂರ್ವನಿಗದಿಯಾದಂತೆ ಹೊನ್ನವಳ್ಳಿ ರೇವಣ ಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಸ್ವಾಮೀಜಿಯ ನೇತೃತ್ವದಲ್ಲಿ ಆರಂಭವಾದ ಸಭೆಯಲ್ಲಿ ಮಾತನಾಡುತ್ತಾ ತಿಳಿಸಿದ ಅವರು ಇತಿಹಾಸದಲ್ಲಿ ಹೊನ್ನವಳ್ಳಿಗೆ ಪ್ರತ್ಯೇಕವಾದ ಸ್ಥಾನವಿದ್ದು, ಹೊನ್ನವಳ್ಳಿ ಎಂದರೆ ಗಂಗಾಮಾತೆಯು ಉದ್ಭವವಾದ ಸ್ಥಳವೆಂದು ಹಲವರು ಬಂದು ಗಂಗಾಪೂಜೆಯನ್ನು ಮಾಡಡುತ್ತಾರೆ. ಆದರೆ ಇಲ್ಲಿನ ಜನ ಹೊನ್ನವಳ್ಳಿ ಏತನೀರಾವರಿ ಯೋಜನೆಯನ್ನು ತಮ್ಮ ಪಾಲಿನ ವರವಾಗಿ ಸ್ವೀಕರಿಸಿದರು.

       ಆದರೆ ಈಗ ಇದು ಹೆಸರಿಗೆ ಮಾತ್ರ ಹೊನ್ನವಳ್ಳಿ ಏತನೀರಾವರಿ ಆದರೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸರ್ಕಾರದ ಗಮನ ಸೆಳೆಯಲು ಎಲ್ಲರನ್ನು ಒಳಗೊಂಡಂತೆ ಬೆಂಗಳೂರಿಗೆ ನಿಯೋಗವನ್ನು ತೆಗೆದುಕೊಂಡು ಹೋಗುವುದಾಗಿ ತಿಳಿಸಿದರು.

       ಇದೇ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯರು ಹೊನ್ನವಳ್ಳಿ ರಾಜರಕಾಲದಲ್ಲಿ ಪಾಳೇಗಾರಿಕೆ ಕೇಂದ್ರವಾಗಿದ್ದು, ಮುಂದೆ ತಾಲ್ಲೂಕು ಕೇಂದ್ರವಾಗಿ, ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿತ್ತು ಆದರೆ ಈಗ ನೀರಿಲ್ಲದೇ ಬೀಕರ ಬರಗಾಲದಲ್ಲಿ ಗ್ರಾಮಸ್ಥರು ಗುಳೆಹೋಗುವ ಪರಿಸ್ಥಿತಿಯಲ್ಲಿರುವಾಗ ಹೊನ್ನವಳ್ಳಿ ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುತ್ತಿದೆ ಎಂದರು.

ನೋಟಾಬಳಸಿ ಗಮನ ಸೆಳೆಯಿರಿ : ಉಪವಿಭಾಗಾಧಿಕಾರಿ ಪೂವಿತ

        ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಉಪವಿಭಾಗಾಧಿಕಾರಿ ಪೂವಿತ ಮಾತನಾಡುತ್ತಾ ಈಗ ಚುನಾವಣೆ ಇರುವುದರಿಂದ ನಾವು ರಾಜಕಾರಣಿಗಳಂತೆ ನಾವು ಆಶ್ವಾಸನೆ ನೀಡಲು ಬರುವುದಿಲ್ಲ, ಕುಡಿಯುವ ನೀರಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗದಂತೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡುತ್ತೇವೆ. ಮತ್ತು ಜಾನುವಾರುಗಳಿಗೆ ಮೇವನ್ನು ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಮತದಾನವನ್ನು ಬಹಿಷ್ಕಾರಮಾಡುವುದು ಸಂವಿಧಾನಕ್ಕೆ ವಿರೋದ ಆದರೆ ನಿಮಗೆ ಇಷ್ಟವಿಲ್ಲದಿದ್ದರೆ ನೋಟಾವನ್ನು ಬಳಸಿ ರಾಷ್ಟ್ರದ ಗಮನವನ್ನು ಸೆಳೆಯಿರಿ ಎಂದು ತಿಳಿಸಿದರು.

ಚುನಾವಣೆ ಬಹಿಷ್ಕಾರಕ್ಕಾಗಿ ಆಣೆ ಪ್ರಮಾಣ

ಪ್ರತಿಭಟನೆಯ ನಂತರ ಗ್ರಾಮದ ದೇವತೆಯಾದ ಕೊಲ್ಲಾಪುರದಮ್ಮ ದೇವಾಸ್ಥಾನದ ಹತ್ತಿರ ಎಲ್ಲಾ ಪ್ರತಿಭಟನಾಕಾರರು ಆಗಮಿಸಿ ಈ ಬಾರಿ ನೆಡೆಯುತ್ತಿರುವ ಲೋಕಸಬಾ ಚುನಾವಣೆಯಲ್ಲಿ ಯಾವ ಪಕ್ಷದ ಜೊತೆಯಾಗಲೀ, ಯಾವ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆ ಹಾಗೂ ಮತದಾನ ಮಾಡಲು ಹೋಗುವುದಿಲ್ಲ ಎಂದು ಗ್ರಾ.ಪಂ.ಅಧ್ಯಕ್ಷ ಪುರೋಷತ್ತಮ್, ಮಾಜಿ ಅದ್ಯಕ್ಷ ಸುರೇಶ್, ಸದಸ್ಯರಾದ ಕೃಷ್ಣಮೂರ್ತಿ ಸೇರಿದಂತೆ ಎಲ್ಲಾ ಪ್ರತಿಭಟನಾಗಾರರು ಹಾಗೂ ಸಾರ್ವಜನಿಕರು ದೇವಾಸ್ಥಾನದ ಆವರಣದಲ್ಲಿ ದೇವರ ಹೆಸರಿನಲ್ಲಿ ಈ ಬಾರಿಯ ಲೋಕಸಬಾ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಪ್ರಮಾಣವನ್ನು ಮಾಡಿದ್ದಲ್ಲದೇ ತಂಡಗಳನ್ನಾಗಿ ಮಾಡಿಕೊಂಡು ಗ್ರಾಮಸ್ಥರಿಗೆ ಎಲ್ಲಾ ವಿಷಯಗಳನ್ನು ತಿಳಿಸಿ ಅವರನ್ನು ಮನವೊಲಿಸುವುದಾಗಿ ಗ್ರಾಮಸ್ಥರೆಲರೂ ಒಮ್ಮತದಿಂದ ಪ್ರಮಾಣ ಮಾಡಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link