ಸಾಮಾಜಿಕ ಪಿಡುಗಾಗಿರುವ ಅಸ್ಫೃಶ್ಯತೆಯ ಬಗ್ಗೆ ಜಾಗೃತಿ ಮುಖ್ಯ

ಕುಣಿಗಲ್

       ಇನ್ನೂ ಹಲವೆಡೆ ಅಸ್ಪೃಶ್ಯತೆ ಸಾಮಾಜಿಕ ಪಿಡುಗಾಗಿ ಮನುಷ್ಯರ ಸಂಬಂಧಗಳ ಮಧ್ಯೆ ಬಿರುಕು ತಂದೊಡ್ಡುವ ಸಮಸ್ಯೆಯಾಗಿದ್ದು,ಅಂತಹ ಅನಿಷ್ಠ ಪದ್ದತಿ ಹೋಗಲಾಡಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯು ಜಾಗೃತಿ ಅಭಿಯಾನವನ್ನ ಹಮ್ಮಿಕೊಂಡಿದೆ ಎಂದು ತಹಸೀಲ್ದಾರ್ ವಿಶ್ವನಾಥ್ ತಿಳಿಸಿದರು.

      ತಾಲ್ಲೂಕು ಕಛೇರಿ ಮುಂಭಾಗ ಧಮ್ಮ ಚಕ್ರ ಜನಪದ ಸಾಂಸ್ಕøತಿಕ ಕಲಾ ಟ್ರಸ್ಟ್ ವತಿಯಿಂದ ಅಸ್ಪøಶ್ಯತಾ ನಿರ್ಮೂಲನಾ ಕಲಾ ಜಾಥಕ್ಕೆ ಚಾಲನೆ ನೀಡಿ ಮಾತನಾಡುತ್ತಾ,ಗ್ರಾಮಾಂತರ ಪ್ರದೇಶದಲ್ಲಿ ಮನುಷ್ಯ-ಮನುಷ್ಯರ ನಡುವೆ ಮೇಲು-ಕೀಳು ಎಂಬ ಅಸಮಾನತೆಯನ್ನು ಹೋಗಲಾಡಿಸುವ ಸಲುವಾಗಿ ಡಾ ಅಂಬೇಡ್ಕರ್ ರವರು ಕಂಡ ಕನಸಿನಂತೆ ಎಲ್ಲಾ ಜನಾಂಗವೂ ಒಂದೇ ಎಂಬ ಭಾವನೆಯಿಂದ ಮುಂದೆ ಬರಲು ಇಂತಹ ಕಲಾ ಜಾಥಗಳ ಮೂಲಕ ಜನರಲ್ಲಿ ಜಾಗೃತಿ ಮತ್ತು ಅರಿವನ್ನ ಉಂಟು ಮಾಡುವ ಕಾರ್ಯಕ್ರಮವಾಗಿದೆ ಎಂದರು

        ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಜಯಣ್ಣ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಈ ಕಲಾ ಜಾಥವೂ ಜಿನ್ನಾಗರ,ಸಂತೇಮಾವತ್ತೂರು,ಎಡೆಯೂರು,ಹುಲಿಯೂರುದುರ್ಗ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ತಾರತಮ್ಯ ಅಸಮಾನತೆಯಂತಹ ಅನಿಷ್ಠ ಪದ್ದತಿಗಳು ತೊಡೆದು ಹಾಕುವಂತಹ ಬೀದಿ ನಾಟಕ ಹಾಡುಗಳನ್ನ ಹಾಗೂ ಸಾರ್ವಜನಿಕರೊಂದಿಗೆ ಸಂವಾದ ನಡೆಸಲಾಗುವುದು ಎಂದು ತಿಳಿಸಿದರು.ಕಲಾ ತಂಡದಲ್ಲಿ ಮುಖ್ಯಸ್ಥರಾಗಿ ರಾಮಕೃಷ್ಣ, ಸಿದ್ಧರಾಜು, ದಲಿತ ಗಂಗಣ್ಣ, ದಲಿತ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link