ತುಮಕೂರು
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇ ಬೀ ಚೌಕಿದಾರ್ ಅಭಿಯಾನದಲ್ಲಿ ದೇಶದ ಬಿಜೆಪಿ ಕಾರ್ಯಕರ್ತರ ಜೊತೆ ಭಾನುವಾರ ಸಂಜೆ ನೇರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ನಗರದ ಶ್ರೀದೇವಿ ವೈದ್ಯಕೀಯ ಕಾಲೇಜಿನಲ್ಲಿ ಆಡಿಟೋರಿಯಂನಲ್ಲಿ ಬಿಜೆಪಿ ಈ ಕಾರ್ಯಕ್ರಮ ಪ್ರದರ್ಶನ ವ್ಯವಸ್ಥೆ ಏರ್ಪಡಿಸಿತ್ತು.
ಬಿಜೆಪಿ ಜಿಲ್ಲಾ ವೀಕ್ಷಕರಾದ ವಿ ಸೋಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ ಆರ್ ಹುಲಿನಾಯ್ಕರ್, ಮುಖಂಡರಾದ ಶಿವಪ್ರಸಾದ್, ರಾಮಾಂಜನಯ್ಯ, ಎಂ ಬಿ ನಂದೀಶ್, ರಂಗಾನಾಯಕ್, ಸರೋಜ ಗೌಡ ಮೊದಲಾದವರು ಭಾಗವಹಿಸಿದ್ದರು.
ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ತಮ್ಮನ್ನು ಮೊದಲ ಸೇವಕ, ಈ ದೇಶದ ಚೌಕಿದಾರ್ ಎಂದು ಹೇಳಿಕೊಂಡಿದ್ದರು. ಇದೇ ವೇಳೆ ಮಾರ್ಚ್ 16ರಂದು ಮೇ ಬೀ ಚೌಕಿದಾರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಡತನ, ಭ್ರಷ್ಟಾಚಾರ, ಕೊಳಕು, ಭಯೋತ್ಪಾದನೆ ಹಾಗೂ ಇತರೆ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರ್.
ದೇಶದ ಪ್ರಗತಿಗಾಗಿ ಶ್ರಮಿಸುತ್ತಿರುವ ಪ್ರತಿಯೊಬ್ಬರೂ ಚೌಕಿದಾರ್ ಎಂದು ಚೌಕಿದಾರ್ ಪದವನ್ನು ಮರು ವ್ಯಾಖ್ಯಾನಿಸಿದ್ದರು. ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅಭೂತಪೂರ್ವ ಸ್ಪಂದನೆ ದೊರೆತು ಬರೊಬ್ಬರಿ 30 ಲಕ್ಷ ಜನ ಮೇ ಬೀ ಚೌಕಿದಾರ್ ಹ್ಯಾಶ್ ಟ್ಯಾಗ್ ಬಳಸುವ ಮೂಲಕ ಇದು ಜನರ ಆಂದೋಲನವಾಗಿ ಬದಲಾಗಿದೆ ಎಂದು ವಿ ಸೋಮಣ್ಣ ಈ ವೇಳೆ ಹೇಳಿದರು.
ಈ ಮೋದಲು 25 ಲಕ್ಷಕ್ಕೂ ಹೆಚ್ಚು ಚೌಕಿದಾರರ ಜೊತೆ ಆಡಿಯೋ ಕಾನ್ಫರೆನ್ಸ್ ನಡೆಸಿದ್ದ ಮೋದಿ, ನಮ್ಮ ವಿರುದ್ದ ಭಾವನೆ ಹುಟ್ಟು ಹಾಕಲು ವಂಶಪಾರಂಪಂರ್ಯ ಆಡಳಿತ ನಡೆಸಿದವರು ಚೌಕಿದಾರ್ ಚೋರ್ ಹೇ ಎಂಬ ಅಭಿಯಾನ ನಡೆಸಿ ಚೌಕಿದಾರರನ್ನು ಅವಮಾನಿಸಿದ್ದರು. ಚೌಕಿದಾರ್ ಎಂಬ ಪದವನ್ನು ಕೆಟ್ಟ ರೀತಿಯಲ್ಲಿ ಪ್ರಯೋಗಿಸಿ, ಚೌಕಿದಾರರನ್ನು ಅವಮಾನಿಸುವ ಪ್ರಯತ್ನ ಮಾಡಿದ್ದಕ್ಕೆ ಮೋದಿಯವರು ಚೌಕಿದಾರರ ಕ್ಷಮೆ ಯಾಚಿಸಿದ್ದರು. ಆದರೆ ಚೌಕಿದಾರ್ ಅಭಿಯಾನ ದಿನದಿನಕ್ಕೂ ಹೆಚ್ಚು ಜನಪ್ರಿಯವಾಗುತ್ತಿದೆ ಎಂದು ಸೋಮಣ್ಣ ಹೇಳಿದರು.ವಿವಿಧೆಡೆಗಳಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಮೋದಿಯವರ ವಿಡಿಯೋ ಕಾನ್ಫರೆನ್ಸ್ ಸಂವಾದ ವೀಕ್ಷಸಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ