ಸಮಯ ಪ್ರಜ್ಞೆಯ ಜೊತೆಗೆ ಜ್ಞಾನಾರ್ಜನೆಗೂ ಒತ್ತು ನೀಡಿ

ದಾವಣಗೆರೆ:

     ಸಮಯ ಪ್ರಜ್ಞೆ ಬೆಳೆಸಿಕೊಳ್ಳುವುದರ ಜೊತೆಗೆ ಜ್ಞಾನಾರ್ಜನೆಗೆ ಒತ್ತು ನೀಡಬೇಕೆಂದು ರಾಣೇಬೆನ್ನೂರು ನಾಗಶಾಂತಿ ಉನ್ನತಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಬಿ.ನಂದ್ಯಾಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

       ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದ 2018-19ನೇ ಸಾಲಿನ ಕ್ರೀಡಾ, ಸಾಂಸ್ಕøತಿಕ, ರಾಷ್ಟ್ರೀಯ ಸೇವಾಯೋಜನೆ, ಎನ್‍ಸಿಸಿ, ಯುವ ರೆಡ್‍ಕ್ರಾಸ್, ಹಾಗೂ ಇತರೆ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಾಲಾ-ಕಾಲೇಜುಗಳು ಜ್ಞಾನಾರ್ಜನೆಗೆ ಸೂಕ್ತ ವೇದಿಕೆಗಳಾಗಬೇಕೇ ಹೊರತು, ಅನ್ಯ ಉದ್ದೇಶಗಳಿಗೆ ಬಳಕೆಯಾಗಬಾರದು ಎಂದು ಹೇಳಿದರು.

       ಪ್ರತಿಯೊಬ್ಬ ವಿಸ್ಯಾರ್ಥಿಯು ಸಮಯಕ್ಕೆ ಹೆಚ್ಚು ಮಹತ್ವ ನೀಡುವುದರ ಜೊತೆಗೆ ಜ್ಞಾನಾರ್ಜನೆಗೂ ಆದ್ಯತೆ ನೀಡಬೇಕು. ಕಳೆದ ಹಲವು ವರ್ಷಗಳಿಂದ ಶೈಕ್ಷಣಿಕ ಸಾಧನೆಯಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುತ್ತಿದ್ದು, ಈ ಹಾದಿಯನ್ನು ಪುರುಷ ವಿದ್ಯಾರ್ಥಿಗಳು ತುಳಿಯಬೇಕೆಂದು ಸಲಹೆ ನೀಡಿದರು.

      ತಂದೆ-ತಾಯಿಗಳಿಗೆ ಉತ್ತಮ ಮಕ್ಕಳಾಗಿ, ಕಾಲೇಜು ಹಾಗೂ ಉಪನ್ಯಾಸಕರಿಗೆ ಒಳ್ಳೆಯ ವಿದ್ಯಾರ್ಥಿಯಾಗಿ ಮತ್ತು ದೇಶಕ್ಕೆ ಉತ್ತಮ ಪ್ರಜೆಯಾಗಿ ಬದುಕಿದರೆ ಮಾತ್ರ ಜೀವನ ಸಾರ್ಥಕತೆ ಪಡೆಯಲಿದೆ. ಇಂಥಹ ಕಾರ್ಯಕಗಳ ಮೂಲಕ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಸಿಗುತ್ತದೆ. ನಮ್ಮ ಆಲೋಚನೆಗಳ ಮೇಲೆ ವಿಶ್ವದ ಧೀಮಂತ ವ್ಯಕ್ತಿಗಳ ನಡೆ, ನುಡಿಗಳ ಪ್ರಭಾವ ಬೀರುವಂತಾಗಲಿ ಎಂದು ಆಶಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ ವಹಿಸಿದ್ದರು. ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಜಿ.ರಾಮಪ್ರಭು, ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಎಸ್.ಆರ್.ಭಜಂತ್ರಿ,ಐಕ್ಯೂಎಸಿ ಸಂಚಾಲಕ ಪ್ರೊ.ಟಿ.ವೀರೇಶ್, ನ್ಯಾಕ್ ಸಮಿತಿ ಸಂಚಾಲಕ ಡಾ.ಜಿ.ಎಂ.ದಿನೇಶ್, ಪ್ರೊ.ಕೆ.ಎಂ.ರುದ್ರಪ್ಪ, ಪ್ರೊ.ಬಿ.ಮಂಜಣ್ಣ ಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap