ಹುಳಿಯಾರು
ಹುಳಿಯಾರು ಪಟ್ಟಣ ಪಂಚಾಯ್ತಿಗೂ ಗ್ರಾಮ ಪಂಚಾಯ್ತಿ ಸದಸ್ಯರುಗಳನ್ನೆ ಮುಂದುವರಿಸುವಂತೆ ಆದೇಶಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿರುವುದಾಗಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದ ವೇಳೆ ಗ್ರಾಪಂ ಅಧ್ಯಕ್ಷೆ ಗೀತಾ ಅವರ ಪತಿ ಪ್ರದೀಪ್ ಅವರು, ಅಧಿಕಾರಿಗಳು ಗ್ರಾಪಂ ಸದಸ್ಯರ ಮಾತಿಗೆ ಮನ್ನಣೆ ನೀಡುತ್ತಿಲ್ಲ. ಬೀದಿದೀಪ, ನೀರು, ಚರಂಡಿ ಸ್ವಚ್ಚತೆಯ ನಿರ್ವಹಣೆ ಮಾಡುತ್ತಿಲ್ಲ. ಹಾಗಾಗಿ ಗ್ರಾಪಂ ಸದಸ್ಯರು ಪಟ್ಟಣ ಪಂಚಾಯ್ತಿಗೆ ಮುಂದುವರೆದಿದ್ದಾರೋ ಇಲ್ಲವೋ ತಿಳಿಸಿ. ಮುಂದುವರೆಯದಿದ್ದರೆ ಮೂಲ ಸೌಕರ್ಯದ ಹೊಣೆ ಯಾರದ್ದು ತಿಳಿಸಿ ಎಂದು ಕೇಳಿಕೊಂಡರು.
ತಕ್ಷಣ ಮುಖ್ಯಾಧಿಖಾರಿ ಮಂಜುನಾಥ್ ಅವರನ್ನು ಕರೆದು ಬೀದಿ ದೀಪ ಕಟ್ಟಿಸಲು, ಚರಂಡಿ ಸ್ವಚ್ಚ ಮಾಡಲು ಏನು ತೊಂದರೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಯಾಗಿ ಬೀದಿ ದೀಪ ಖರೀದಿಗೆ ಟೆಂಡರ್ ಕರೆಯಬೇಕಿದೆ. ಚರಂಡಿ ತ್ಯಾಜ್ಯ ವಿಲೇವಾರಿಗೆ ಟ್ರ್ಯಾಕ್ಟರ್ ಅಗತ್ಯವಿದೆ. ಆದರೆ ಹಣ ಇನ್ನೂ ಗ್ರಾಪಂ ಖಾತೆಯಲ್ಲಿದ್ದು ಪಪಂ ಖಾತೆಗೆ ವರ್ಗವಾಗಿಲ್ಲ ಎಂದು ವಿವರಿಸಿದರು.
ನಂತರ ಜಿಲ್ಲಾಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಶಾಸಕರು ಹುಳಿಯಾರು ಪಟ್ಟಣ ಪಂಚಾಯ್ತಿಯೋ, ಗ್ರಾಮ ಪಂಚಾಯ್ತಿಯೋ ಮೊದಲು ಗೊಂದಲ ನಿವಾರಿಸಿ. ಗ್ರಾಮ ವಿಕಾಸದಲ್ಲಿ 1 ಕೋಟಿ ರೂ., 14 ನೇ ಹಣಕಾಸು ಯೋಜನೆಯಲ್ಲಿ 42 ಲಕ್ಷ ರೂ. ಇದೆ. ಇದನ್ನು ಬಳಕೆಗಾದರೂ ಗ್ರಾಪಂ ಸದಸ್ಯರುಗಳನ್ನೇ ಪಪಂಗೂ ಮುಂದುವರಿಸಿ ಎಂದರಲ್ಲದೆ, ಮೂಲ ಸೌಕರ್ಯ ಕಲ್ಪಿಸುವ ಸಲುವಾದರೂ ಹಣ ಬಳಕೆಗೆ ಮುಖ್ಯಧಿಕಾರಿಗಳಿಗೆ ಅನುಮತಿ ಕೊಡಿ ಎಂದರು. ಜಿಲ್ಲಾಧಿಕಾರಿಗಳೂ ಸಹ ಸಕರಾತ್ಮಕವಾಗಿ ಸ್ಪಂಧಿಸಿದ್ದು ತಕ್ಷಣ ಸದಸ್ಯತ್ವ ಮುಂದುವರಿಸುವ ಆದೇಶ ನೀಡುವುದಾಗಿ ಹೇಳಿ ಬರುವ ಡಿ.10 ರಂದು ತಾವೇ ಖುದ್ದು ಉಪಸ್ಥಿತರಿದ್ದು ಸದಸ್ಯರ ಸಭೆ ನಡೆಸಿ ಮೂಲ ಸೌಕರ್ಯಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ