ಸಂಪೂರ್ಣವಾಗಿ ಬತ್ತಿ ಹೋದ ಕೃಷ್ಣಾ ನದಿ

ಬೆಂಗಳೂರು:

       ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರಪ್ರದೇಶದ ಜನರಿಗೆ ಕುಡಿಯುವ ನೀರಿನ ಜೀವನದಿಯಾಗಿರುವ ಕೃಷ್ಣಾ ಸಂಪೂರ್ಣವಾಗಿ ಬತ್ತಿದೆ. ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಮಹಿಷವಾಡಗಿ ಬ್ಯಾರೇಜ್ ನೀರಿಲ್ಲದೆ ಬಣಗುಡುತ್ತಿದೆ.

       ಉಳಿದಿರುವ ಅಲ್ಪಸ್ವಲ್ಪ ನೀರು ಇನ್ನೊಂದು ವಾರದಲ್ಲಿ ಮುಗಿಯುವ ಸಾಧ್ಯತೆಯಿದೆ. ಇನ್ನು ಗ್ರಾಮೀಣ ಪ್ರದೇಶದ ಲಕ್ಷಾಂತರ ಜನ ಮತ್ತು ಜಾನುವಾರುಗಳು, ಸಾವಿರಾರು ಎಕರೆಯಷ್ಟು ಭೂಮಿಯಲ್ಲಿ ಬೆಳೆದ ನಿಂತ ಬೆಳೆಗಳು ಒಣಗಲಿವೆ ಎಂಬ ಆತಂಕ ರೈತರದ್ದಾಗಿದೆ.

       ಈ ಬಾರಿ ಬೇಸಿಗೆ ಪ್ರಾರಂಭದಲ್ಲಿಯೇ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿದ್ದು, ಮುಂಬರುವ ದಿನಗಳಲ್ಲಿ ಭೀಕರ ನೀರಿನ ಸಮಸ್ಯೆಯನ್ನು ಈ ಭಾಗದ ಜನರು ಎದುರಿಸಬೇಕಿದೆ. ಈಗಾಗಲೇ ಜನರು ಬ್ಯಾರಲ್, ಸಿಂಟೆಕ್ಸ್‍ಗಳ ಖರೀದಿಗೆ ಮುಂದಾಗಿದ್ದಾರೆ.ಇತ್ತ ರೈತರು ಬೆಳೆದ ಬೆಳೆಗಳಿಗೆ ನೀರಿಲ್ಲ ಎಂದು ಕೊರಗುತ್ತಿದ್ದರೆ, ನಗರ ಪ್ರದೇಶದವರು ಕುಡಿಯುವ ನೀರಿನ ಬಗ್ಗೆ ಈಗಲೇ ತಲೆಕೆಡಿಸಿಕೊಳ್ಳುತ್ತಿದ್ದಾರೆ.

         ಕೃಷ್ಣಾ ನದಿ ಬತ್ತಿ ಹೋಗಿರುವುದರಿಂದ ನೀರಿನ ಸಮಸ್ಯೆ ಉಲ್ಬಣಿಸಲಿದೆ. ಹಾಗಾಗಿ ಬೋರ್‍ವೆಲ್ ಹಾಗೂ ಬಾವಿಗಳಿಂದ ಸಾರ್ವಜನಿಕರಿಗೆ ನೀರನ್ನು ಪೂರೈಸುವುದು ಅವಶ್ಯವಿರುತ್ತದೆ. ರಬಕವಿ-ಬನಹಟ್ಟಿ ನಗರಸಭೆ ವ್ಯಾಪ್ತಿಯ ಖಾಸಗಿ ಹಾಗೂ ಬಾವಿಯ ಮಾಲೀಕರು ಸಾರ್ವಜನಿಕರಿಗೆ ನೀರನ್ನು ಪೂರೈಸುವಂತೆ ಮನವಿ ಮಾಡಲಾಗಿದೆ.

         ಖಾಸಗಿ ಬೋರ್ ವೆಲ್ ಹಾಗೂ ಬಾವಿಗಳಿಗೆ ಹೊಸದಾಗಿ ಮೀಟರ್ ಅಳವಡಿಸಿ ಮತ್ತು ಅದಕ್ಕೆ ತಗಲುವ ವಿದ್ಯುತ್ ಬಿಲ್‍ನ್ನು ನಗರಸಭೆಯಿಂದ ಭರಿಸಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಪೌರಾಯುಕ್ತ ಆರ್. ಎಂ. ಕೊಡಗೆ ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link