ಸಂಸತ್‍ನಲ್ಲಿ ರೈತ, ಕಾರ್ಮಿಕರ ಪರ ಧ್ವನಿಗಾಗಿ ಸಿಪಿಐ ಗೆಲ್ಲಿಸಿ

ಹುಳಿಯಾರು

      ಸಂಸತ್‍ನಲ್ಲಿ ರೈತರು ಮತ್ತು ಕಾರ್ಮಿಕರ ಪರ ಧ್ವನಿಗಾಗಿ ತುಮಕೂರು ಲೋಕಸಬಾ ಕ್ಷೇತ್ರದಿಂದ ಈ ಬಾರಿ ಸಿಪಿಎಂ ಅಭ್ಯರ್ಥಿ ಎನ್.ಶಿವಣ್ಣ ಅವರನ್ನು ಗೆಲ್ಲಿಸುವಂತೆ ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.

      ಹುಳಿಯಾರಿನಲ್ಲಿ ಗುರುವಾರ ಸಿಪಿಐ ಪಕ್ಷದ ಲೋಕಸಬಾ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲೆಯಲ್ಲಿ ರೈತರು ಮತ್ತು ಕಾರ್ಮಿಕರು ಹೆಚ್ಚಾಗಿದ್ದು ಇವರಿಬ್ಬರು ಮನಸ್ಸು ಮಾಡಿದರೆ ಕಾರ್ಮಿಕ ನಾಯಕನನ್ನು ಆರಿಸಿಕೊಳ್ಳುವ ಅವಕಾಶವಿದೆ. ಎಲ್ಲರೂ ಒಂದಾಗಿ ಸಂಘಟಿತವಾಗಿ ಚುನಾವಣೆಯನ್ನು ಎದುರಿಸಬೇಕು, ಕಾರ್ಮಿಕ ಕಾನೂನುಗಳನ್ನು ತಿದ್ದಲು ಹೊರಟಿರುವ ಮೋದಿ ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ತಿಳಿಸಿದರು.

      ಕಳೆದ ಐದು ವರ್ಷಗಳು ಅಧಿಕಾರ ನಡೆಸಿದ ಬಿಜೆಪಿ ಸರ್ಕಾರ ದೇಶದ ಆರ್ಥಿಕತೆಯನ್ನು ಹಿಂದೊಯ್ದಿದೆ. ನಿರುದ್ಯೋಗ ಸಮಸ್ಯೆ ಮಿತಿ ಮೀರಿದೆ. ಕಪ್ಪುಹಣವನ್ನು ಬಿಳಿ ಮಾಡಲಾಗಿದೆಯೇ ವಿನಹ ಅವರಿಗೆ ಶಿಕ್ಷೆಯಾಗಿಲ್ಲ. ಒಟ್ಟಾರೆ ಮೋದಿ ಆಡಳಿತ ಕಾರ್ಪೊರೇಟ್ ಸಂಸ್ಥೆಗಳ ಪರವಿದೆ. ಹಾಗಾಗಿ ಈ ಬಾರಿ ಮೋದಿ ಸರ್ಕಾರ ಕಿತ್ತೊಗೆಯಲು ಸಿಪಿಐ ಬೆಂಬಲಿಸಿ ಎಂದರು.

       ತುಮಕೂರು ಜಿಲ್ಲೆಗೆ ಸಮಗ್ರ ನೀರಾವರಿ ವ್ಯವಸ್ಥೆ, ತೆಂಗು, ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ, ಕೇಂದ್ರ ಸರ್ಕಾರದ ಜನಪರ ಕಾರ್ಯಕ್ರಮಗಳ ಸಮರ್ಪಕ ಜಾರಿ, ತುಮಕೂರಿನಲ್ಲಿ ಇಎಸ್‍ಐ ಆಸ್ಪತ್ರೆ ಸ್ಥಾಪನೆ, ಉದ್ಯೋಗ ಸೃಷ್ಠಿ, ರೈತರಿಗೆ ಮತ್ತು ಕಾರ್ಮಿಕರಿಗೆ ಕಾನೂನು ನಬದ್ಧ ಸೌಲಭ್ಯ ನೀಡುವುದು ಸಿಪಿಎಂ ಪಕ್ಷದ ಗುರಿಯಾಗಿದ್ದು ತುಮಕೂರು ಜಿಲ್ಲೆ ಹಾಗೂ ಜಿಲ್ಲೆಯ ಜನರ ಸಮಗ್ರ ಪ್ರಗತಿಗಾಗಿ ಸಿಪಿಐಗೆ ಮತ ನೀಡಿ ಎಂದು ಮನವಿ ಮಾಡಿದರು.

       ಪಿಪಿಐ ಅಭ್ಯರ್ಥಿ ಎನ್.ಶಿವಣ್ಣ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಗಿರೀಶ್, ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೆಂಕೆರೆ ಸತೀಶ್, ಕಾರ್ಯಕರ್ತ ದಾಸಪ್ಪ, ಸೋಮಜ್ಜನಪಾಳ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸಿದ್ದರಾಮಯ್ಯ, ಹುಳಿಯಾರು ಹೋಬಳಿ ಇಟ್ಟಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಶಿವಣ್ಣ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap