ಪ.ನಾ.ಹಳ್ಳಿಯಲ್ಲಿ ನಡೆದ ಸಾಂಸ್ಕೃತಿಕ ಕಲಾ ಉತ್ಸವ

ಪ.ನಾ.ಹಳ್ಳಿ

      ಗ್ರಾಮೀಣ ಸೊಗಡಿನ ಜನಪದ ಕಲೆ, ಈ ನಾಡಿನ ಸಂಸ್ಕøತಿಕ ಪರಂಪರೆಯ ಗತವೈಭವವನ್ನು ಸಾರುತ್ತದೆ. ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಇಂತಹ ಕೋಲಾಟ, ಸೋಬಾನೆ ಪದ, ರಂಗಗೀತೆಗಳನ್ನು ಪರಿಚಯಿಸುವ ಮೂಲಕ ಜನಪದ ಕಲೆ ಉಳಿಸಿ ಬೆಳೆಸುವಂತಹ ಕರ್ತವ್ಯ ಪ್ರತಿಯೊಬ್ಬ ಯುವಕನದ್ದಾಗಬೇಕಿದೆ ಎಂದು ನಿವೃತ್ತ ಪ್ರಾಂಶುಪಾಲ ಪಿ.ಹೆಚ್.ಮಹೇಂದ್ರ ಹೇಳಿದರು.

      ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿಯಲ್ಲಿ ಕನ್ನಡ ಮತ್ತು ಸಾಂಸ್ಕøತಿಕ ಇಲಾಖೆ, ಶ್ರೀಲಕ್ಷ್ಮೀ ನರಸಿಂಹಸ್ವಾಮಿ ಶೈಕ್ಷಣಿಕ ಸಮಾಜ ಸೇವಾ ಚಾರಿಟಬಲ್ ಟ್ರಸ್ಟ್ ಹಾಗೂ ಶಾಂತಿ ನಿಕೇತನ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ನಡೆದ ಸಾಂಸ್ಕøತಿಕ ಕಲಾ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

       ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಚಾರಿಟಬಲ್ ಟ್ರಸ್ಟ್ ಕಲಾವಿದರು ಶೌಚಾಲಯದ ಅಗತ್ಯ ಹಾಗೂ ಸಮಾಜಕ್ಕೆ ಕಂಟಕವಾಗಿರುವ ಮದ್ಯಪಾನ ಸೇವನೆಯಿಂದ ಸಂಭವಿಸುವ ಅನಾಹುತಗಳ ಬಗ್ಗೆ ಬೀದಿ ನಾಟಕ ಪ್ರದರ್ಶನ ಮಾಡಿ ಅರಿವು ಮೂಡಿಸುತ್ತಿರುವುದು ಮೆಚ್ಚುವಂತಾದ್ದು ಎಂದರು.

        ಪಿಎಸ್‍ಐ ವಿ. ನಿರ್ಮಲ ಮಾತನಾಡಿ ಮಹಿಳೆಯರು ನಾಡಿನ ಕಲೆ ಮತ್ತು ಸಂಸ್ಕøತಿಕ ಪರಂಪರೆಗೆ ಅಪಾರ ಕೊಡಿಗೆ ನೀಡಿದ್ದಾರೆ. ಪರಿಸರ ಮಾತೆ ಸಾಲುಮರದ ತಿಮ್ಮಕ್ಕ ಆದರ್ಶವಾಗಬೇಕು. ಕುಟುಂಬದಲ್ಲಿ ಹೆಣ್ಣು ಮನಸ್ಸು ಮಾಡಿದರೆ ಶೌಚಾಲಯ ನಿರ್ಮಾಣ ಸಾಧ್ಯ, ಜೊತೆಗೆ ಕುಡಿತವನ್ನು ಬಿಡಿಸಲು ಸಾಧ್ಯ. ಇಂತಹ ಸಾಂಸ್ಕøತಿಕ ಕಲಾ ಉತ್ಸವಗಳು ಮನುಷ್ಯನ ಮನೋಲ್ಲಾಸವನ್ನು ಹೆಚ್ಚಿಸುತ್ತವೆ ಎಂದರು.

      ಗೋಪಿಕುಂಟೆ ಚಿಗುರು ಕಲಾತಂಡ ಜನಪದ ಬೀದಿ ನಾಟಕ ಮತ್ತು ಗೀತಾ ಗಾಯನ ಆರ್ಕಷಕವಾಗಿತ್ತು, ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾದನೆಗೈದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಂಶುಪಾಲ ಬಿ.ಪಿ.ಪಾಂಡುರಂಗಯ್ಯ, ಉಪನ್ಯಾಸಕಿ ವಿಜಯಲಕ್ಷ್ಮೀ, ಮುಖಂಡ ಎನ್.ಸಿ.ದೊಡ್ಡಯ್ಯ, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಾಹಿತಿ ಕೆ.ನರಸಪ್ಪ, ಶಾಂತಿನಿಕೇತನ ವಿದ್ಯಾಸಂಸ್ಥೆಯ ಅಧ್ಯಕ್ಷೆ ರೇಣುಕಾ, ಅಂಧ ಕಲಾವಿದ ದವಡಬೆಟ್ಟ ಈರಣ್ಣ, ಗಾಯಕ ಚಲುಮೇಶ್, ಮುಖ್ಯ ಶಿಕ್ಷಕಿ ಪ್ರಿಯಾಂಕ, ನಿಂಗಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap