ಸೋಮವಾರ ಸಾಮೂಹಿಕ ಶಮಿ ಪೂಜೆ

ತುಮಕೂರು

    ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಸಾಮೂಹಿಕ ಶಮಿ ಪೂಜೆ ಮತ್ತು ನಾಡಹಬ್ಬ ದಸರಾ ಉದ್ಘಾಟನಾ ಸಮಾರಂಭ ಜರುಗಲಿದೆ.

    ವಿಜಯದಶಮಿ ಮೆರವಣಿಗೆಯ ಉದ್ಘಾಟನೆಯನ್ನು ಮಧ್ಯಾಹ್ನ 2 ಗಂಟೆಯಿಂದ ಬಿಜಿಎಸ್ ವೃತ್ತದಿಂದ ಜ್ಯೂನಿಯರ್ ಕಾಲೇಜು ಮೈದಾನದವರೆಗೆ ನಡೆಯಲಿದೆ. ದಿವ್ಯ ಸಾನ್ನಿಧ್ಯವನ್ನು ಉಡುಪಿಯ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮಿಗಳು ನೆರವೇರಿಸಲಿದ್ದು, ಶಾಸಕ ಜಿ.ಬಿ. ಜ್ಯೋತಿಗಣೇಶ್ ಧ್ವಜಪೂಜೆ ನೆರವೇರಿಸುವರು. ದಸರಾ ಸಮಿತಿ ಕಾರ್ಯಾಧ್ಯಕ್ಷ ಎಸ್.ಪಿ.ಚಿದಾನಂದ್ ಚಾಮುಂಡೇಶ್ವರಿ ಪೂಜೆ ನೆರವೇರಿಸುವರು. ಉದ್ಘಾಟನೆಯನ್ನು ಮಹಾಪೌರರಾದ ಫರೀದಾ ಬೇಗಂ ನೆರವೇರಿಸುವರು.

    ಅತಿಥಿಗಳಾಗಿ ಉತ್ಸವ ಸಮಿತಿ ಅಧ್ಯಕ್ಷ ಕೋರಿ ಮಂಜುನಾಥ್, ಸಂಸ್ಕಾರ ಭಾರತೀ ಪ್ರಾಂತ ಅಧ್ಯಕ್ಷ ಆರ್.ಎಲ್.ರಮೇಶ್‍ಬಾಬು, ಮಹಿಳಾ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷರಾದ ವಾಸವಿ ಗುಪ್ತ ಅವರುಗಳು ಆಗಮಿಸುವರು.ಸಾರ್ವಜನಿಕರಿಗಾಗಿ ಬೆಳಗ್ಗೆ 10 ರಿಂದ ರಂಗೋಲಿ ಸ್ಪರ್ಧೆ ನಡೆಯಲಿದ್ದು, ನಗದು ಬಹುಮಾನವಾಗಿ 5000, 3000 ಹಾಗೂ 2000 ರೂ.ಗಳ ಹಾಗೂ ಪಾರಿತೋಷಕ ನೀಡಲಾಗುವುದು. ಸಂಜೆ 4.30ಕ್ಕೆ ಸಾಮೂಹಿಕ ಶಮಿ ಪೂಜೆ, 5 ರಿಂದ ಸಾರ್ವಜನಿಕ ಸಮಾರಂಭ, 6.45 ರಿಂದ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ನಗೆಹಬ್ಬ ಸಾಂಸ್ಕತಿಕ ಕಾರ್ಯಕ್ರಮ ಜರುಗಲಿದೆ.

    ದಿವ್ಯ ಸಾನ್ನಿಧ್ಯವನ್ನು ಉಡುಪಿ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು ವಹಿಸಲಿದ್ದು, ನೇತೃತ್ವವನ್ನು ತಾಲ್ಲೂಕು ದಂಡಾಧಿಕಾರಿ ಜಿ.ವಿ.ಮೋಹನ್ ಕುಮಾರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಡಾ.ಜಯಪ್ರಕಾಶ್ ಆಗಮಿಸುವರು. ನಂತರ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಮೂಡಿಬರಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link