ಹಿರಿಯೂರು :
ತಾಲ್ಲೂಕಿನಲ್ಲಿ ಕಳೆದ 8-10 ವರ್ಷಗಳಿಂದ ಸಕಾಲಕ್ಕೆ ಮಳೆ ಬಾರದೇ ಅಂತರ್ಜಲ ಪಾತಾಳ ಸೇರಿದ್ದು ಕೊಳವೆ ಬಾವಿಗಳು ಬತ್ತಿ ಹೋಗಿ ತೋಟಗಾರಿಕೆ ಬೆಳೆಗಳು ಒಣಗಿಹೋಗಿ ಜನಜಾನುವಾರುಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದಾಗಿ ತಾ|| ರೈತಸಂಘದ ಅಧ್ಯಕ್ಷ ಕೆ.ಸಿ.ಹೊರಕೇರಪ್ಪ, ಹೇಳಿದರು.
ನಗರದ ಪ್ರವಾಸಿಮಂದಿರದಲ್ಲಿ ತಾಲ್ಲೂಕು ರೈತಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತಸಂಘದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ತಾಲ್ಲೂಕಿನಲ್ಲಿ ಇಷ್ಟೋಂದು ಸಂಕಷ್ಟ ಪರಿಸ್ಥಿತಿ ಇದ್ದರೂ ವೇದಾವತಿ -ಸುವರ್ಣಮುಖಿ ನದಿ ಪಾತ್ರದಲ್ಲಿ ಮರಳು ಸಾಗಾಣಿಕೆ ಎಗ್ಗಿಲ್ಲದೇ ನಡೆಯುತ್ತಿದ್ದು ನಿಯಮ ಉಲ್ಲಂಘಿಸಿರುವ ಎಲ್ಲಾ ಮರಳು ಬ್ಲಾಕ್‍ಗಳನ್ನು ಈ ಕೂಡಲೇ ರದ್ದುಪಡಿಸುವಂತೆ ಜಿಲ್ಲಾಡಳಿತವನ್ನು ಅವರು ಒತ್ತಾಯಿಸಿದರು.
ಈ ಸಭೆಯಲ್ಲಿ ಜಿಲ್ಲಾ ಗೌ||ಅಧ್ಯಕ್ಷ ಎಸ್.ಬಿ.ಶಿವಕುಮಾರ್, ತಾಲ್ಲೂಕು ರೈತಸಂಘದ ಗೌ|| ಅಧ್ಯಕ್ಷ ಎ.ಕೃಷ್ಣಸ್ವಾಮಿ, ಕಾರ್ಯಾಧ್ಯಕ್ಷ ಆಲೂರುಸಿದ್ದರಾಮಣ್ಣ, ಉಪಾಧ್ಯಕ್ಷ ಎಂ.ಆರ್.ಪುಟ್ಟಸ್ವಾಮಿ, ರೈತ ಮುಖಂಡರುಗಳಾದ ಮಲ್ಲಿಕಾರ್ಜುನಪ್ಪ, ತಿಮ್ಮಾರೆಡ್ಡಿ, ಹುಲಿಯಪ್ಪ, ದಸ್ತಗಿರಿಸಾಬ್, ಕೃಷ್ಣನಾಯ್ಕ್, ಸಿದ್ದಪ್ಪ, ಶಕ್ತಿವೇಲು, ಕಲ್ಪನಾ , ತಿಮ್ಮಕ್ಕ, ರತ್ನಮ್ಮ, ದ್ರಾಕ್ಷಾಯಿಣಿ, ಗೋವಿಂದರಾಜು, ರಾಜೇಶ್, ಚಿಕ್ಕಣ್ಣ, ರಾಮಕೃಷ್ಣಪ್ಪ, ತಿಪ್ಪೇಸ್ವಾಮಿ, ಓಬನಾಯಕ, ಎ.ತಿಪ್ಪೇಸ್ವಾಮಿ, ಬಿ.ಡಿ.ಶ್ರೀನಿವಾಸ್, ಸೋಮಸುಂದರ್, ಮಂಜುನಾಥ್, ಕೊಲ್ಲಾಪುರರೆಡ್ಡಿ, ವಿರೂಪಾಕ್ಷಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
