ಸಂಜೆಯ ವೇಳೆ ವಾಹನಗಳ ಓಡಾಟಕ್ಕೆ ತೊಂದರೆ : ಕ್ರಮಕ್ಕೆ ಒತ್ತಾಯ

ಕೊರಟಗೆರೆ

     ತಾಲ್ಲೂಕಿನ ಹೋಬಳಿ ಕೇಂದ್ರವಾದ ಹೊಳವನಹಳ್ಳಿಯಲ್ಲಿ ಸಂಜೆ 6 ಗಂಟೆಯಾಯಿತೆಂದರೆ ರಸ್ತೆ ತುಂಬೆಲ್ಲಾ ಸಾರ್ವಜನಿಕರೇ ಓಡಾಡುತ್ತಿರುತ್ತಾರೆ. ಇದರಿಂದ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂಬುದು ಪ್ರಜ್ಞಾವಂತ ನಾಗರಿಕರ ಆರೋಪವಾಗಿದೆ.

     ಬಸ್ಸಿನ ಚಾಲಕರು ಹಾರ್ನ್ ಮಾಡಿದರೂ ಸಹ ರಸ್ತೆ ಬಿಟ್ಟು ಕದಲುವುದೇ ಇಲ್ಲ. ಹಾಗೊಮ್ಮೆ ಏನಾದರೂ ಅನಾಹುತಗಳು ಸಂಭವಿಸಿದರೆ ಅವರ ಮೇಲೆಯೇ ಹರಿಹಾಯ್ದು ಬಿಡುತ್ತಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆ ಎಂಬ ಮಾತುಗಳು ಸಹ ಕೆಲವರಿಂದ ಕೇಳಿಬರುತ್ತಿದೆ. ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುವವರನ್ನು ನಿಯಂತ್ರಿಸಬೇಕಾದ ಪೊಲೀಸರು ಎಲ್ಲಿರುತ್ತಾರೋ ತಿಳಿಯದಾಗಿದೆ. ಪತ್ರಿಕೆಗಳಲ್ಲಿ ಬಂದ ಒಂದೆರಡು ದಿನಗಳು ಮಾತ್ರ ಅವರನ್ನು ಕಾಣಬಹುದು.

      ನಂತರ ಇವರ ಸುಳಿವೇ ಇರುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.ಇನ್ನೊಂದು ಮುಖ್ಯ ಸಂಗತಿಯೆಂದರೆ ಇಲ್ಲಿನ ಕೆಲವು ಫುಟ್‍ಪಾತ್ ಅಂಗಡಿಗಳವರು ಸಹ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ. ಈ ಮೊದಲು ಎಲ್ಲೋ ಕೆಲವೊಂದು ಅಂಗಡಿಗಳಿದ್ದವು. ಈಗ ರಸ್ತೆ ಬದಿಗಳಲ್ಲೆಲ್ಲಾ ಅಂಗಡಿಗಳಾಗಿವೆ. ಇವರು ಅಂಗಡಿ ನಡೆಸುವುದರಿಂದ ಬೇಸರವಿಲ್ಲ. ಆದರೆ ರಸ್ತೆಯಲ್ಲೇ ಅಂಗಡಿಗಳನ್ನಿಟ್ಟು ಕೊಂಡಿರುವುದು ಬೇಸರ ತರಿಸುತ್ತದೆ ಎನ್ನುತ್ತಾರೆ ಸಾರ್ವಜನಿಕರು. 

       ಇನ್ನಾದರೂ ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವುದರ ಮೂಲಕ ಸಂಜೆ ವೇಳೆ ಪೊಲೀಸರನ್ನು ನೇಮಿಸುವುದರ ಮೂಲಕ ಇಲ್ಲಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link