ಕಮಲ ಅರಳಿಸಲು ಸಂತೋಷ್ ಮಾಸ್ಟರ್ ಪ್ಲಾನ್

ಬೆಂಗಳೂರು:

      ತವರು ನೆಲದಲ್ಲಿ ಕಮಲ ಅರಳಿಸಲು ಕರ್ನಾಟಕ ಬಿಜೆಪಿಯ ಮಾಸ್ಟರ್ ಮೈಂಡ್ ಬಿ.ಎಲ್.ಸಂತೋಷ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.ಉತ್ತರ ಪ್ರದೇಶ ಮಾದರಿಯಲ್ಲಿ ಚುನಾವಣೆ ಎದುರಿಸಲು ಬಲೆ ಹೆಣೆದಿದ್ದಾರೆ ಎನ್ನಲಾಗ್ತಿದೆ.ಪ್ರಬಲ ಅಭ್ಯರ್ಥಿ ಮತ್ತು ಮೋದಿ ಅಲೆ ನಡುವೆ ಚಾಮರಾಜನಗರದಲ್ಲಿ ಕಮಲ ಅರಳಿಸಲು 2006 ಬೂತ್‍ನ ಪ್ರಮುಖರಿಗೆ ಎಬಿಸಿ ಸೂತ್ರದಂತೆ ಕೆಲಸ ಮಾಡುವಂತೆ ಅವರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

        ಬುಧವಾರ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ಬಿ.ಎಲ್.ಸಂತೋಷ್,ಬೂತ್ ಪ್ರಮುಖರಿಗೆ ಇದೇ 14ರಂದು ಪಕ್ಷದ ಸ್ಥಿತಿಗತಿ ಕುರಿತು ರಿಪೋರ್ಟ್ ಕಾರ್ಡ್ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬಿಜೆಪಿ ಮತಗಳಿರುವ ಬೂತ್‍ಗಳಿಗೆ ಎ ಎಂದು,ಲೀಡ್ ಬರುವ ಬೂತ್‍ಗಳಿಗೆ ಬಿ ಎಂದು ಹಾಗೂ ಅನ್ಯ ಪಕ್ಷಗಳ ಮತ ಮುಂದಿರುವ ಬೂತ್‍ಗಳಿಗೆ ಸಿ ಎಂದು ಹೆಸರಿಸಿದ್ದಾರೆ.

         ಬಿ ಹಾಗೂ ಸಿ ಬೂತ್‍ಗಳಲ್ಲಿ ಹೆಚ್ಚು ಕಾರ್ಯತಂತ್ರ ಹೆಣೆದು ಮತಗಳಿಕೆ ಕಾಣುವಂತೆ ಮಾಡಬೇಕೆಂದು ಮಾರ್ಗದರ್ಶನ ಮಾಡಿದ್ದಾರೆ. ಕರ್ನಾಟಕದ ಮಾಸ್ಟರ್ ಮೈಂಡ್ ಸಂತೋಷ್ ಅವರ ತಾಯಿಯ ಊರು ಚಾಮರಾಜನಗರವಾಗಿದ್ದು,ಈ ಬಾಂಧವ್ಯದಿಂದಲೂ ಗಡಿಜಿಲ್ಲೆಯಲ್ಲಿ ಕಮಲ ಅರಳಿಸಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.
14 ರಂದು ರಿಪೋರ್ಟ್ ಕಾರ್ಡ್ ನೀಡಿದ ಬಳಿಕ ಪಕ್ಷ ಹಿಂದುಳಿದಿರುವ ಬೂತ್‍ಗಳಲ್ಲಿ ಮತ ಗಳಿಕೆ ಕುರಿತು ಪ್ಲಾನ್ ರೂಪಿಸುವ ಚಿಂತನೆ ಅಡಗಿದೆ ಎಂದು ಹೇಳಲಾಗ್ತಿದೆ.

         ಇನ್ನು ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಸಂತೋಷ್ ಅವರು, ಯಡಿಯೂರಪ್ಪ ಅವರೇ ಘೋಷಿತ ಮುಖ್ಯಮಂತ್ರಿ. ಪಕ್ಷ ಟಿಕೆಟ್ ನೀಡುವ ವಿಚಾರದಲ್ಲೂ ಹಿರಿಯ ನಾಯಕರ ಒಪ್ಪಿಗೆ ಪಡೆದು ಬೇರೆಯವರಿಗೆ ಟಿಕೆಟ್ ನೀಡಿದೆ.

           ರಾಜಕೀಯದಲ್ಲಿ ವಂಶ ಪರಂಪರೆಯ ರಾಜಕಾರಣ ತಪ್ಪಿಸುವ ಸಲುವಾಗಿ, ಯುವಕರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಾಯಕನಾಗಲೇ ಇಲ್ಲ. ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಂತೆಯೇ ಸೋನಿಯಾಗಾಂಧಿ ಅವರಿಗೆ ಋಣಿಯಾಗಿದ್ದರು. ಮನಮೋಹನ್ ಸಿಂಗ್ ಅವರಿಗೆ ಗುಂಡಿಗೆ ಇರಲಿಲ್ಲ. ಇದರಿಂದಾಗಿ ಮೋದಿಗೆ ಲೀಡರ್‍ಶಿಪ್ ದೊರಕಿತು. ರಾಜಕಾರಣ ಮತ್ತು ರಾಜಕೀಯ ಕ್ಷೇತ್ರಕ್ಕೆ ವಿಶ್ವಾಸರ್ಹತೆಯನ್ನು ಮೋದಿ ತಂದು ಕೊಟ್ಟಿದ್ದಾರೆ ಎಂದು ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link