ಸರಗಳ್ಲರ ಬಂಧನ ..!!

ಬೆಂಗಳೂರು

     ಕಾರಿನಲ್ಲಿ ಬಂದು ಸಾರ್ವಜನಿಕರಿಗೆ ಚಾಕು ತೋರಿಸಿ ಸರಗಳ್ಳತನ ಮಾಡುತ್ತಿದ್ದ ಗ್ಯಾಂಗ್‍ನ ನಾಲ್ವರು ಆರೋಪಿಗಳನ್ನು ಕೆ.ಪಿ.ಅಗ್ರಹಾರ ಪೊಲೀಸರು ಬಂಧಿಸಿ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

     ಕೆ.ಪಿ.ಅಗ್ರಹಾರದ ಪ್ರಕಾಶ್ ಅಲಿಯಾಸ್ ಮುನಿಸ್ವಾಮಿ (27), ಶಶಿ ಅಲಿಯಾಸ್ ಸರವಣ (23), ಮೋಹನ್‍ಕುಮಾರ್ ಅಲಿಯಾಸ್ ಗುಣಶೇಖರ್ (21) ಹಾಗೂ ಪ್ರಶಾಂತ್ ಅಲಿಯಾಸ್ ಪ್ರೇಮಕುಮಾರ್ (20) ಬಂಧಿತ ಆರೋಪಿಗಳಾಗಿದ್ದು ಇವರ ಗ್ಯಾಂಗ್‍ನಲ್ಲಿದ್ದ ಮತ್ತೊಬ್ಬ ಆರೋಪಿ ವಿನೋದ್ ಕುಮಾರ್ ತಲೆಮರೆಸಿಕೊಂಡಿದ್ದಾನೆ.

      ಬಂಧಿತರಿಂದ 8 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇರಿದಂತೆ ಕೃತ್ಯಕ್ಕೆ ಬಳಿಸಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಕಾರಿನಲ್ಲಿ ಬಂದು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಚಾಕು ತೋರಿಸಿ ಬೆದರಿಸಿ ಚಿನ್ನದ ಸರವನ್ನು ಕಸಿದು ಪರಾರಿಯಾಗುತ್ತಿದ್ದರು.

      ಬನಶಂಕರಿ, ಕೆ.ಪಿ. ಅಗ್ರಹಾರ, ತಲಘಟ್ಟಪುರ ಸೇರಿದಂತೆ ವಿವಿಧ ಪೆÇಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಆರೋಪಿಗಳ ಗ್ಯಾಂಗ್ ಸರಗಳ್ಳತನ ಮಾಡಿದ ಪ್ರಕರಣಗಳು ದಾಖಲಾಗಿವೆ.

       ಮುಂಜಾನೆ ವೇಳೆ ವಾಯುವಿಹಾರಕ್ಕೆ ಹೋಗುವ ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸಿಕೊಂಡು ಸರಗಳ್ಳತನಕ್ಕೆ ಇಳಿಯುತ್ತಿದ್ದು ಆರೋಪಿಗಳಿಂದ 8 ಲಕ್ಷಕ್ಕೂ ಅಧಿಕ ಬೆಲೆ ಬಾಳುವ ಚಿನ್ನಾಭರಣ, ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ನಗರ ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣನವರ್ ತಿಳಿಸಿದ್ದಾರೆ.
ಅನಿಲ್ ದಂಪತಿ ಬನಶಂಕರಿಯ 2ನೇ ಹಂತದ ಬಳಿ ಏಪ್ರಿಲ್ 26ರಂದು ಬೆಳಗ್ಗೆ ವಾಕಿಂಗ್‍ಗೆ ಹೋಗಿದ್ದಾಗ ಕಾರಿನಲ್ಲಿ ಬಂದ ಪ್ರಕಾಶ್ ಅಂಡ್ ಗ್ಯಾಂಗ್ ಅನಿಲ್ ಅವರ ಪತ್ನಿಯ ಚಿನ್ನದ ಸರವನ್ನು ಕಿತ್ತುಕೊಂಡು ಓಡಲು ಆರಂಭಿಸಿದ್ದರು. ಓಡುತ್ತಿದ್ದ ಕಳ್ಳನನ್ನು ತಡೆಯುವುದಕ್ಕೆ ಹೋಗಿದ್ದ ಅನಿಲ್ ಅವರಿಗೆ ಚಾಕುನಿಂದ ಇರಿದು, ಕಾರ್ ಹತ್ತಿ ಪರಾರಿಯಾಗಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

      ಈ ಸಂಬಂಧ ಅನಿಲ್ ಅವರು ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ತಮ್ಮ ತಂಡಕ್ಕೆ ಸಿಸಿಟಿವಿ ವಿಡಿಯೋ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಹೇಳಿದರು.

        ಈ ನಾಲ್ಕು ಜನ ಖತರ್ನಾಕ್ ಕಳ್ಳರು ಮೊದಲಿಗೆ ಕಾರ್ ಕದಿಯುತ್ತಿದ್ದರು. ಬಳಿಕ ಅದೇ ಕಾರಿನಲ್ಲಿ ತೆರಳಿ ಸರ ಕಳ್ಳತನ ಮಾಡುತ್ತಿದ್ದರು. ಬೆಳಗ್ಗೆ ವಾಕಿಂಗ್ ಹೋಗುವ ಒಂಟಿ ಮಹಿಳೆಯರೇ ಬಂಧಿತರ ಟಾರ್ಗೆಟ್ ಆಗಿತ್ತು. ಒಂದು ಯಾರಾದರೂ ಹಿಡಿಯಲು ಬಂದರೆ ಹಿಂದೆ, ಮುಂದೆ ನೋಡದೆ ಡ್ರಾಗರ್ ನಿಂದ ಇರಿದು ಪಾರಾರಿಯಾಗುತ್ತಿದ್ದ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link