ಸರಿದಾರಿಯಲ್ಲಿ ಸಾಗಿದರೆ ಜೀವನ ಸುಲಭ: ಪ್ರೊ.ಸಿದ್ದೇಗೌಡ

ತುಮಕೂರು

      ಜೀವನ ಒಂದು ಕಲೆ, ಸರಿದಾರಿಯಲ್ಲಿ ಸಾಗಿದರೆ ಜೀವನ ತುಂಬಾ ಸುಲಭ. ನಾವು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ಶಿಸ್ತು ಮತ್ತು ಸಮಯ ನಿರ್ವಹಣೆ ಅತಿಮುಖ್ಯ. ನುಡಿದಂತೆ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವೈ.ಎಸ್. ಸಿದ್ದೇಗೌಡರು ಅಭಿಪ್ರಾಯ ಪಟ್ಟರು.

       ನಗರದ ಗುರುಶ್ರೀ ಕಾಲೇಜ್ ಆಫ್ ಕಾಮರ್ಸ್ ಅಂಡ್ ಸೋಶಿಯಲ್ ವರ್ಕ್ ಕಾಲೇಜಿನ ಪ್ರಥಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಸಮಾಜಕಾರ್ಯದ ಪ್ರಶಿಕ್ಷಣಾರ್ಥಿಗಳು ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳಿಗೆ ತುಮಕೂರಿನ ಕನ್ನಡ ಭವನದಲ್ಲಿ ಆಯೋಜಿಸಿದ್ದ ಬಿಳ್ಗೊಡುಗೆ ಸಮಾರಂಭ ಸಂಭ್ರಮ-2019ನ್ನು ಉದ್ಘಾಟಿಸಿ ಮಾತನಾಡಿದರು.

        ಒಬ್ಬ ಜವಾಬ್ದಾರಿಯುತ ಪ್ರಜೆಯಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವುದರ ಜೊತೆಗೆ ಜೀವನದ ಪ್ರತಿಗಳಿಗೆಯನ್ನು ಸಂಭ್ರಮಿಸಬೇಕು ಇದೆಲ್ಲವನ್ನು ಸಮಾಜಕಾರ್ಯ ಅಧ್ಯಯನ ನಿಮಗೆ ಕಲಿಸುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹುಳಿಯಾರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಬಿಳಿಗೆರೆ ಕೃಷ್ಣಮೂರ್ತಿಯವರು ಮಾತನಾಡಿ ನಿಮ್ಮ ಹಳ್ಳಿಗಳನ್ನು ತೆರದ ಕಣ್ಣುಗಳಿಂದ ನೋಡಿ, ಅವೇ ಒಂದೊಂದು ವಿಶ್ವವಿದ್ಯಾನಿಲಯ. ಅಲ್ಲಿ ಕಲಿಯುವುದು ಬಹಳ ಇದೆ. ಸೂರ್ಯ-ಚಂದ್ರ ಇರುವವರೆಗೂ ನಿರಂತರ ಉದ್ಯೋಗ ಸೃಷ್ಠಿಸುವ ಸಾಮಥ್ರ್ಯ ಇರುವುದು ಕೃಷಿಕ್ಷೇತ್ರ ಮಾತ್ರ. ಅದನ್ನು ಕಡೆಗಣಿಸಬೇಡಿ ಎಂದರು.

      ವಿಶ್ವವಿದ್ಯಾನಿಲಯದ ಸಮಾಜಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷರಾದ ಪರಶುರಾವi ಕೆ.ಜಿ ರವರು ಮಾತನಾಡಿ, ಸಮಾಜಕಾರ್ಯ ಎನ್ನವುದು ಅತ್ಯುತ್ತಮವಾದ ಕೋರ್ಸು. ಇದನ್ನು ನಂಬಿ ಬಂದವರ್ಯಾರಿಗೂ ಅನ್ಯಾಯವಾಗಿಲ್ಲ. ಯಾವುದೇ ವಿಷಯದಲ್ಲಾಗಲಿ ನಂಬಿಕೆ ಇದ್ದಾಗ ಮಾತ್ರ ಎನ್ನಾನದರೂ ಸಾಧಿಸಲು ಸಾಧ್ಯ ಎಂಬ ಪ್ರೇರಣಾತ್ಮಕ ನುಡಿಗಳನ್ನಾಡಿದರು.

      ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಟಿ ಗಂಗಾಧರಯ್ಯನವರು ಮಾತನಾಡಿ ನೀವು ನಿಮ್ಮ ಶ್ರಮವನ್ನು ನಂಬಿ ಬುದುಕಿ, ನಿಮ್ಮ ತಂದೆ ತಾಯಿಗಳಿಗೆ ಅವರ ಕನಸುಗಳನ್ನು ಹಿಡೇರಿಸುವ ಪ್ರಯತ್ನ ಶುರುಮಾಡಿ ಎಂದು ಹೇಳಿದರು.

        ಗುರುಶ್ರೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಜಿ. ಬಸವರಾಜು ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಮುಳುಕುಂಟೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಪಣೀಶ್, ಸೀಡಾಕ್ ಸಂಸ್ಥೆಯ ಜಿಲ್ಲಾ ಕೇಂದ್ರ ವ್ಯವಸ್ಥಾಪಕರಾದ ಶೇಷಾದ್ರಿ ಶೇಖರ್, ಕಾಲೇಜಿನ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಮಂಜುನಾಥಯ್ಯ ಡಿ ನಿರೂಪಿಸಿ, ಉಪನ್ಯಾಸಕಿ ಪೂರ್ಣಿಮ ಸ್ವಾಗತಿಸಿ, ಉಪನ್ಯಾಸಕ ಪ್ರಕಾಶ್ ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap