ಚಿತ್ರದುರ್ಗ:
ಕೆಎಸ್‍ಆರ್‍ಟಿಸಿ ಚಾಲಕರು ಹಾಗೂ ನಿರ್ವಾಹಕರು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯದೆ, ಎಲ್ಲರೂ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಜಿಲ್ಲಾ ಪಂಚಾಯತ್‍ಮಖ್ಯ ಕಾರ್ಯನಿರ್ವಾಹಕ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿ.ಸತ್ಯಭಾಮ ತಿಳಿಸಿದರು.
ನಗರದ ಕೆಎಸ್‍ಆರ್‍ಟಿಸಿ ಡಿಪೋದಲ್ಲಿ ಜಿಲ್ಲಾ ಸ್ವೀಪ್ ಸಮತಿ ಹಾಗೂ ಕೆಎಸ್‍ಆರ್‍ಟಿಸಿ ವತಿಯಿಂದ ಆಯೋಜಿಸಿದ್ದ ಮತದಾನದ ಮಹತ್ವ, ಇವಿಎಂ, ವಿವಿ ಪ್ಯಾಟ್ ಬಳಕೆ ಕುರಿತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾನಾಡಿದರು.
ಚಾಲಕರು ಮಂತ್ರಯಂತ್ರಗಳನ್ನು ಒಂದು ಮತಗಟ್ಟೆಯಿಂದ ಬೇರೆಡೆ ಸಾಗಿಸುವ ಗುರುತರ ಜವಾಬ್ದಾರಿಯನ್ನು ನಿಭಾಯಿಸುವುದರಿಂದ, ನೀವು ಮತದಾನವನ್ನು ನಿಮ್ಮ ಮತಗಟ್ಟೆಗಳಲ್ಲಿ ಚಲಾಯಿಸಲು ಆಗುವುದಿಲ್ಲ, ಹೀಗಾಗಿ ನಿಮ್ಮ ಮತದಾನವನ್ನು ಚಲಾಯಿಸಬೇಕೆಂದರೆ ಪೋಸ್ಟಲ್ ಬ್ಯಾಲೆಟ್ ಮುಖಾಂತರ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ. ಕೆ.ಕೆ. ಕಮಾನಿ, ಉಪ ಸಂಚಾರಿ ಅಧಿಕಾರಿ ವಿಜಯ ಕುಮಾರ್, ಸಂಚಾರಿ ಆಡಳಿತಾಧಿಕಾರಿ ರಾಜಶೇಖರ್ ಕುಂಬಾರ್, ಉಪವಿಭಾಗದಿಕಾರಿ ಶಿವಣ್ಣ ಹಾಗೂ ಕೆಸ್ಸಾರ್ಟಿಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.