ಸರಿಯಾದ ಬೆಂಬಲ ಬೆಲೆ ಸಿಗದೆ ರೈತರ ಬಾಳು ಶೋಚಿನೀಯ : ಎಂ.ಪಿ.ವೀಣಾ ಮಹಾಂತೇಶ್

ಹರಪನಹಳ್ಳಿ

    ರಾಜ್ಯದ ಬೆಳಗಾಂ. ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಬೇಳೆಯಲಾಗತ್ತಿದ್ದು ಬೆಂಬಲ ಬೆಲೆ ಸಿಗದೆ ಈರುಳ್ಳಿ ಬೇಳೆದ ರೈತರ ಬಾಳು ಶೋಚಿನೀಯವಾಗಿದೆ ಎಂದು ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್‍ನ ಅಧ್ಯಕ್ಷೆ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಹೇಳಿದರು.

     ತಾಲೂಕಿನ ಚೀಗಟೇರಿಗ್ರಾಮದಲ್ಲಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಓಕ್ಕೂಟ ಹಾಗೂ ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ವತಿಯಿಂದ ಹರಪನಹಳ್ಳಿ ತಾಲೂಕು ಈರುಳ್ಳಿ ಬೆಳೆಗಾರರ ಸಮಾವೇಶ ಉದ್ಗಾಟಿಸಿ ಮಾತನಡಿದ ಅವರು ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ.

      ಹೂವಿನಹಡಗಲಿ. ಕೊಟ್ಟೂರು. ಹಗರಿಬೋಮ್ಮನಹಳ್ಳಿ. ಕೂಡ್ಲಿಗಿ ಹಾಗೂ ಸಂಡೂರು ತಾಲೂಕುಗಳಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು ಈ ಪ್ರದೇಶಗಳು ಮಳೆಯಾದರಿತ ಪ್ರದೇಶಗಳಾಗಿದ್ದು ಉತ್ತಮ ಮಳೆಯಾದಗ ಮಾತ್ರ ರೈತನ ಜೀವನ ಸುಗಮವಾಗುತ್ತದೆ. ಸತತ ಬರಗಾಲ ಒಂದೆಡೆಯಾದರೆ ಪ್ರಕೃತಿ ವಿಕೂಪ. ಬೆಲೆಕುಸಿತ ಹಾಗೂ ಸರ್ಕಾರದ ನೀತಿಯಿಂದ ರೈತ ಜರ್ಜಿತನಾಗಿದ್ದಾನೆ.

      ಕರ್ನಾಟಕದಲ್ಲಿ ಕಬ್ಬು ಕಾಫಿ. ಟೀ. ತೆಂಗು.ಇತ್ಯಾದಿ ಬೆಳೆಗಾರರ ಒಕ್ಕೂಟುಗಳು ಸ್ಥಾಪನೆಯಾಗಿ ಸಂಘಗಳ ಮೂಲಕ ಸರ್ಕಾರದಿಂದ ಬೆಂಬಲ ಬೆಲೆ ಪಡೆಯುವ ಪ್ರಯತ್ನ ಮಾಡುತ್ತಿದ್ದು ಈಬಾಗದಲ್ಲಿ ಈರುಳ್ಳಿ ಬೆಳೆಯುವ ರೈತರು ಸಂಘಟಿತರಾಗಬೆಕೆಂದು ಮುಂಬರುವ ಸಂಕಷ್ಟಗಳಿಗೆ ಪರಿಹಾರ ಕಂಡು ಕೋಳ್ಳಲು ತಾಲೂಕು ಈರುಳ್ಳಿ ಬೆಳೆಗಾರರ ಸಂಘ ಅಸ್ಥಿತ್ವಕ್ಕೆ ತರಲಾಗಿದೆ ಎಂದರು.

        ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಓಕ್ಕೂಟದ ಸಂಸ್ಥಾಪಕ ಎನ್.ಎಂ. ಸಿದ್ದೇಶ ಮಾತನಾಡಿ ರಾಜ್ಯ ಸರ್ಕಾರ ಸಾಲಮನ್ನಾ ಮಾಡಿದೆ ಎಂದು ಬರಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದು ರಾಜ್ಯದ ಬೆಳಗಾಂ. ಬಳ್ಳಾರಿ ಸೇರಿದಂತೆ 5 ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಬಜೆಟ್ ನಲ್ಲಿ ಬರಿ 5ಕೋಟಿ ಮೀಸಲು ಇಟ್ಟಿದು ಯಾವುದಕ್ಕೂ ಸಾಲವುದಿಲ್ಲ ಅದರೆ 5ಜಿಲ್ಲೆಗೆ ತಲಾ 2ಕೋಟಿ ಹಣ ನಿಡಿದರೆ ಉತ್ತಮ ಎಂದ ಅವರು ಈರುಳ್ಳಿ ಬೆಳೆಗಾರರಿಗೆ ಬೆಂಬಲ ಬೆಲೆ ನಿಗಧಿ ಮಾಡುವಂತೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದೆ ಮುಖ್ಯಮಂತ್ರಿಗಳು ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

       ರೈತ ಮುಖಂಡ ಬಸವನಗೌಡ ಗ್ರಾಮ ಪಂಚಾಯಿತಿ ಅದ್ಯಕ್ಷೆ ಯು.ರೇಖಮ್ಮ ಉಪಾದ್ಯಕ್ಷೆ ಸಾವಿತ್ರಮ್ಮ, ಸದಸ್ಯರಾದ ಅಶೋಕ, ಮುಖಂಡರಾದ ತಿಪ್ಪೇಶ, ಎಂ.ಚೆನ್ನಬಸಪ್ಪ, ಚೆಂದ್ರಪ್ಪ, ಗಾಯಿತ್ರಿದೇವಿ, ಪಿ.ಪಂಪಣ್ಣ, ಮಂಜುನಾಥ ಮತ್ತಿಹಳ್ಳಿ ಮನೋಜ, ಕಾಂತರಾಜ್ .ಕೆ.ವಿ ಸೇರಿದಂತೆ ಇತರರು ಇದ್ದರು,

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap