ಜಗಳೂರು:
ಮಾಜಿ ಸೈನಿಕರಿಗೆ ಸರ್ಕಾರದಿಂದ ಜಮೀನು ಹಾಗೂ ಖಾಲಿ ನಿವೇಶನ ದೊರಕದೆ ಅನ್ಯಾವಾಗಿದೆ ಎಂದು ಮಾಜಿಸೈನಿಕ ಪ್ರಹ್ಲಾದ್ ರೆಡ್ಡಿ ಅಳಲು ತೋಡಿಕೊಂಡರು.
ಪಟ್ಟಣದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು, ತಾಲೂಕಿನ ಭರಮಸಮುದ್ರ ಗ್ರಾಮದ ನಿವಾಸಿಯಾದ ನಾನು 1990ರಿಂದ2011 ರವರೆಗೆ ಕೇಂದ್ರಸರ್ಕಾರದ ಸೆಂಟ್ರಲ್ ಪ್ಯಾರ ಮಿಲಿಟ್ರಿ ಫೋರ್ಸ್‍ನಲ್ಲಿ ಸೇವೆ ಸಲ್ಲಿಸಿ ಸ್ವ ಇಚ್ಚೆಯಿಂದ ನಿವೃತ್ತಿಯಾಗಿದ್ದು, ನಿವೃತ್ತಿಯ ನಂತರ ರಾಜ್ಯಸರ್ಕಾರ ಮತ್ತು ಘನವೆತ್ತ ನ್ಯಾಯಾಲಯದ ಆದೇಶದ ಪ್ರಕಾರ ಸಿಗಬೇಕಾದ ಜಮೀನು ಹಾಗೂ ನಿವೇಶನ ಕೊಡಲು ಅವಕಾಶವಿದ್ದರೂ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಇದುವರೆಗೂ ನೀಡದೆ ತೀವ್ರ ಅನ್ಯಾವೆಸಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈಗಾಗಲೆ ಭರಮುದ್ರ ಗ್ರಾಮದ ಸರ್ಕಾರಿ ಸೇಂದಿವನವಿದ್ದು ಇದರಲ್ಲಿ 20 ಎಕರೆ 21 ಗುಂಟೆ ಜಮೀನಿನಲ್ಲಿ ಸುಮಾರು 3ರಿಂದ 4 ಬಾರಿ ಸರ್ವೆ ಮಾಡಿದ ತಾಲೂಕು ಆಡಳಿತ 4ಎಕರೆ05 ಗುಂಟೆ ಜಮೀನನ್ನು ಶಿಫಾರಸ್ಸು ಮಾಡಿತ್ತು. ಆದರೆ ಇಂದಿಗೂ ವಿಳಂಬನೀತಿಯನ್ನು ಅನುಸರಿಸಿ ಕಛೇರಿಗೂ ಮನೆಗೂ ಅಲೆದಾಡುವಂತಾಗಿದೆ ಇದರ ಬಗ್ಗೆ ಸಿಬ್ಬಂದಿಗಳನ್ನು ವಿಚಾರಿಸಿದರೆ ಪೊಳ್ಳು ನೆಪ ಹೇಳಿ ಮೌನವಹಿಸುತ್ತಿದ್ದಾರೆ ಎಂದು ದೂರಿದರು. ಕಳೆದ 6 ವರ್ಷಗಳಿಂದ ಅಲೆದಾಡಿ ಬೇಸತ್ತು ಸುಪ್ರೀಂ ಕೋರ್ಟ ಮೊರೆಹೊಗಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಿಎಸ್‍ಎಸ್ ಸಂಚಾಲಕ ಸತೀಶಮಲೆಮಾಚಿಕೆರೆ, ರಾಮಚಂದ್ರಪ್ಪ, ರುದ್ರಮುನಿ , ಕಾರ್ಮಿಕಮುಖಂಡ ವಿರಣ್ಣ, ಆರಾದ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.