ತಿಪಟೂರು
ಜಗತ್ಪ್ರಸಿದ್ದ ತಿಪಟೂರು ಎ.ಪಿ.ಎಂ.ಸಿ. ಕೊಬ್ಬರಿ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿರುವ ದೊಡ್ಡ ಮಾಫಿಯಾ ಜಾಲವೆ ಇದ್ದು, ಸರ್ಕಾರ ಇದನ್ನು ಭೇದಿಸಬೇಕಿದೆ ಎಂದು ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೂಲ ದಾಖಲೆ ಇಲ್ಲದೆ, ನಕಲಿ ದಾಖಲೆ ಸೃಷ್ಟಿಸಿ, ತಾಲ್ಲೂಕಿನ ಆಜು, ಬಾಜು ಮತ್ತು ಎ.ಪಿ.ಎಂ.ಸಿ ಮಾರುಕಟ್ಟೆಯ ಮೂಲಕ ಪ್ರತಿನಿತ್ಯ ಲೋಡುಗಟ್ಟಲೆ ಕೊಬ್ಬರಿ ದೇಶದ ನಾನಾ ಭಾಗಗಳಿಗೆ ವ್ಯವಸ್ಥಿತವಾಗಿ ರವಾನೆ ಆಗುತ್ತಿದ್ದು, ಪ್ರತಿನಿತ್ಯ ಸರ್ಕಾರಕ್ಕೆ ಒಂದು ಕೋಟಿ ತೆರಿಗೆ ವಂಚಿಸಲಾಗುತ್ತಿದೆ. ಆರ್.ಟಿ.ಐ. ಮೂಲಕ ಪಡೆದ ದಾಖಲೆಗಳಲ್ಲಿ ಇದು ಸಾಭೀತಾಗಿದೆ.
ಆದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈ ದಂಧೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ, ಎ.ಪಿ.ಎಂ.ಸಿ. ಮತ್ತು ಜನಪ್ರತಿನಿಧಿಗಳೂ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿ, ಕೂಡಲೇ ಸರ್ಕಾರ ಇದರ ಹಿಂದಿರುವ ಮಾಫಿಯಾ ಜಾಲವನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಇತ್ತೀಚೆಗೆ ಪಕ್ಕದ ದೇಶ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ಕೃತ್ಯದ ನಂತರ, ಅಲ್ಲಿನ ಸರ್ಕಾರ ತೆಗೆದುಕೊಂಡು ದಿಟ್ಟ ನಿಧಾರಗಳನ್ನು ಶ್ಲಾಘಿಸಿದ ಮುತಾಲಿಕ್, ಇದೇ ರೀತಿ ನಮ್ಮ ದೇಶದಲ್ಲೂ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು, ಮೊದಲು ಇಲ್ಲಿರುವ ಅನಧಿಕೃತ ದೇಶವಾಸಿಗಳನ್ನು ತೆರವುಗೊಳಿಸಬೇಕು, ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದ ರೀತಿ, ಬುರ್ಖಾ ನಿಷೇದ ಜಾರಿಗೊಳಿಸಿದರೆ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆ ಆಗುತ್ತವೆ ಎಂದು ಅಭಿಪ್ರಾಯಪಟ್ಟರು. ಆರ್.ಟಿ.ಐ. ಕಾರ್ಯಕರ್ತ ರವಿಕುಮಾರ್, ಜೊತೆಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
