ಸಾರ್ವಜನಿಕ ಶೌಚಾಲಯವನ್ನೇ ಮುಚ್ಚಿದ್ದ ಒತ್ತುವರಿದಾರರು

ಹುಳಿಯಾರು:

      ಹುಳಿಯಾರು ಬಸ್ ನಿಲ್ದಾಣದ ಒತ್ತುವರಿದಾರರ ಕದಂಬ ಬಾಹು ಸಾರ್ವಜನಿಕ ಶೌಚಾಲಯವನ್ನೇ ಮುಚ್ಚುವ ಮಟ್ಟಿಗೆ ಚಾಚಿದ್ದಾರೆ.
ಹೌದು 30 ವರ್ಷಗಳ ಹಿಂದೆ ಬಸ್ ನಿಲ್ದಾಣಕ್ಕೆ ಬರುವ ಪ್ರಾಯಾಣಿಕರ ಅನುಕೂಲಕ್ಕಾಗಿ ಗ್ರಾಪಂನಿಂದ ವಾಣಿಜ್ಯ ಮಳಿಗೆಯ ಬಳಿ ಸಾರ್ವಜನಿಕ ಶೌಚಾಲಯ ಕಟ್ಟಿಸಲಾಗಿತ್ತು.

       ಈ ಶೌಚಾಲಯ ಬಳಕೆಯಲ್ಲಿರುವಾಗಲೇ ಮತ್ತೊಂದು ಶೌಚಾಲಯವನ್ನು ಬಸ್ ನಿಲ್ದಾಣದ ಕೆರೆ ದಡದಲ್ಲಿ ಕಟ್ಟಲಾಗಿತ್ತು. ಯಾವಾಗ ಮತ್ತೊಂದು ಶೌಚಾಲಯ ಕಟ್ಟಿದರೋ ಆಗ ಈ ಶೌಚಾಲಯ ಮುಚ್ಚುವ ಹುನ್ನಾರ ನಡೆಸಿದರು.ಈ ಶೌಚಾಲಯದ ಮುಂದೆ ಅಕ್ರಮವಾಗಿ ಒಬ್ಬೊಬ್ಬರೇ ಗೂಡಂಗಡಿಗಳನ್ನಿಟ್ಟುಕೊಂಡು ಕೊನೆಗೆ ಶೌಚಾಲಯದ ಬಾಗಿಲಿಗೆ ಬೀಗ ಜಡಿದು ಅವರ ಮುಂದೆಯೂ ಸಹ ಗೂಡಂಗಡಿಗಳನ್ನು ತೆರೆದರು. ಈಗಿನ ಬಹಳಷ್ಟು ಮಂದಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೂ ಸಹ ಇಲ್ಲೊಂದು ಶೌಚಾಲಯ ಇದೆ ಎನ್ನುವುದೇ ಗೊತ್ತಿಲ್ಲದಂತೆ ಆಕ್ರಮಿಸಿಕೊಂಡಿದ್ದರು.

        ಆದರೆ ಅನಧಿಕೃತ ಗೂಡಂಗಡಿಗಳ ತೆರವು ಮಾಡಿದಾಗ ಅಚ್ಚರಿಯೆನ್ನುವಂತೆ ಬೀಗ ಜಡಿದಿರುವ ಕೊಠಡಿ ಕಾಣಸಿಕ್ಕಿತ್ತು. ಹಿರಿಯರು ಇದನ್ನು ಕಂಡು ಇದು ಅಂದಿನ ಸಾರ್ವಜನಿಕ ಶೌಚಾಲಯ ಎಂದಾಗಷ್ಟೆ ಒತ್ತುವರಿದಾರರು ಕಬಳಿಸಿರುವ ಸಂಗತಿ ಬೆಳಕಿಗೆ ಬಂದಿತು. ಆದರೆ ಬಹಳ ವರ್ಷಗಳಿಂದ ಇದನ್ನು ಬಳಸದೆ ಹಾಗೆ ಬಿಟ್ಟಿರುವುದರಿಂದ ಕಟ್ಟಡ ಶಿಥಿಲಗೊಂಡಿದ್ದು ಮರು ಬಳಕೆಗೆ ಅಸಾಧ್ಯ ಎನ್ನುವಂತ್ತಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap