ಚಿತ್ರದುರ್ಗ;
ಸಾರ್ವಜನಿಕ ಸ್ಥಳಗಳಲ್ಲಿಯೂ ಎಲ್ಲಿಯೂ ಧೂಮಪಾನ ಮಾಡದಂತೆ ಶಿಸ್ತು ಕ್ರಮಕೈಗೊಂಡು ಜನರು ನೆಮ್ಮದಿಯಿಂದ ಓಡಾಡುವಂತೆ ಅನುಕೂಲ ಮಾಡಿಕೊಡುವಂತೆ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಕಾನೂನು ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ದೂಮಪಾನ ಮಾಡಬಾರದು. ಅದು ಬಸ್‍ನಿಲ್ದಾಣ, ರೈಲ್ವೆ ನಿಲ್ದಾಣ, ಹೋಟೆಲ್ ಸೇರಿದಂತೆ ಎಲ್ಲಿಯೂ ಮಾಡುವಂತಿಲ್ಲ. ಬೇಕಿದ್ದರೆ ಮನೆಯಲ್ಲಿ ಧೂಮಪಾನ ಮಾಡಿದರೆ ಅದು ಅವರಿಗೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿಯೇ ಸಿಗರೇಟ್ ವಾಸನೆ ಬರುತ್ತಿದೆ. ಕಚೇರಿ ಹಿಂಭಾಗದ ಕ್ಯಾಂಟಿನ್ ಬಳಿಯೇ ಸಿಗರೇಟ್ ಸೇದುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದಕ್ಕೆ ಬ್ರೇಕ್ ಹಾಕಬೇಕಾದರೆ ಸ್ವಯಂಪ್ರೇರಿತರಾಗಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ದಂಡ ವಿಧಿಸಿ ಕಾನೂನು ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ನನ್ನ ಕಚೇರಿ ಆವರಣದಲ್ಲಿಯೇ ಸಿಗರೇಟ್ ವಾಸನೆ ಬರುತ್ತಿದೆ. ಹಿಂಭಾಗದ ಕ್ಯಾಂಟಿನ್‍ನಲ್ಲಿಯೂ ಧೂಮಪಾನ ಮಾಡಲಾಗುತ್ತಿದೆ. ಈಗಲೇ ಹೋಗಿ ನೋಡಿಕೊಂಡು ಬರುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ ಕ್ರಮ ಕೈಗೊಳ್ಳದೆ ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ಆಗ ಸಿಪಿಐ ಪ್ರಕಾಶ್‍ಗೌಡ, ಪೊಲೀಸ್ ಇಲಾಖೆಯ ವತಿಯಿಂದಲೇ 2019ರ ಜನವರಿಯಿಂದ ಇಲ್ಲಿಯವರೆಗೆ 2500ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ. ಕ್ಯಾಂಟೀನ್ ಬಳಿ ವಕೀಲರು ಧೂಮಪಾನ ಮಾಡುತ್ತಾರೆ. ಕೇಳಲು ಹೋದರೆ ತಕರಾರು ಮಾಡುತ್ತಾರೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿ ಕಾನೂನು ಎಲ್ಲರಿಗೂ ಒಂದೇ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು.
ಡಾ.ರೇಣುಪ್ರಸಾದ್ ಮಾತನಾಡಿ, ಸಿಗರೇಟ್‍ಗಳನ್ನು ಮಾರಾಟ ಮಾಡಬಾರದು ಎಂದು ಹೇಳಲು ಸಾಧ್ಯವಿಲ್ಲ. ಮಾರಾಟ ಮಾಡುವಾಗ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. 16 ವರ್ಷದ ಮಕ್ಕಳ ಕೈಯಿಂದ ಸಿಗರೇಟ್ ಹಾಗೂ ಇತರರ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಿಸಬಾರದು. ಕೇಳಿದರೂ ಅದನ್ನು ಕೊಡುವಂತಿಲ್ಲ. ಧೂಮಪಾನ ಮಾಡಿದರೆ ಮೊದಲ ಹಂತದಲ್ಲಿ 200 ರೂಪಾಯಿ ದಂಡ ವಿಧಿಸಬಹುದು. ಕಲಂ 4ರ ಪ್ರಕಾರ ಹೆಚ್ಚಿನ ದಂಡ ವಿಧಿಸಲು ಅವಕಾಶ ಇದೆ. ಅಂಗಡಿಗಳು ಕಾನೂನು ಉಲ್ಲಂಘಿಸಿದರೆ ಲೈಸೆನ್ಸ್ ಅಮಾನತುಗೊಳಿಸಬಹುದಾಗಿ ಎಂದರು. ತಹಸೀಲ್ದಾರ್ ಮಾತನಾಡಿ, ಸ್ಮೋಕ್ ಜೂನ್ ಮಾಡಬೇಕಾಗುತ್ತದೆ ಎಂಬುದಕ್ಕೆ ಮುಂದೆ ನೋಡೋಣ ಮೊದಲು ಧೂಮಪಾನಕ್ಕೆ ಬ್ರೇಕ್ ಹಾಕುವಂತೆ ಹೇಳಿದರು.
ಪೊಲೀಸರೆ ಹೆಚ್ಚು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಪೊಲೀಸರು ಅದನ್ನು ಪತ್ತೆ ಹಚ್ಚಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಆರೋಗ್ಯ ಇಲಾಖೆ ತನಿಖಾ ತಂಡ ಸೆಕ್ಸನ್ 4 ಅಡಿಯಲ್ಲಿ 411 ಪ್ರಕರಣ 42 ಸಾವಿರ ದಂಡ, ಸೆಕ್ಷನ್ 6ಎ ಅಡಿಯಲ್ಲಿ 221 ಪ್ರಕರಣ 19500 ರೂಪಾಯಿ, ಸೆಕ್ಸನ್ ಬಿ ಅಡಿಯಲ್ಲಿ 76 ಪ್ತಕರಣ ಸೇರಿ ಒಟ್ಟು 708 ಪ್ರಕರಣ ದಾಖಲಿಸಿ 70300 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಆದರೆ ಪೊಲೀಸ್ ಇಲಾಖೆ 2500ಕ್ಕೂ ಹೆಚ್ಚು ಪ್ರಕರಣ ದಾಖಲಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
